(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.29: ನಗರದ ಮಾಜಿ ಶಾಸಕ, ಜೆಡಿಎಸ್ ಅಭ್ಯರ್ಥಿ ಅನಿಲ್ ಹೆಚ್.ಲಾಡ್ ಅವರು ಇಂದು ನಗರದ ಬಳ್ಳಾರಪ್ಪ ಕಾಲೋನಿ, ಗರೀಬ್ ನವಾಜ್ ಕಾಲೋನಿ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಸಂಚರಿಸಿ. ಅಲ್ಲಲ್ಲಿ ಮನೆಗಳ ಮುಂದೆ ನಿಂತು ಬಿರುಸಿನ ಪ್ರಚಾರ ನಡೆಸಿದರು.
ನೋಡಿ ಹಣ ಕೊಡ್ತಾರೆ, ಕುಕ್ಕರ್ ಕೊಡ್ತಾರೆ, ಸೀರಿ ಕೊಡ್ತಾರೆ ಅಂತ ಓಟು ಹಾಕಬೇಡಿ, ಚುನಾವಣೆ ಮುಗಿದ ಮೇಲೆ ನೀರು ಕೊಡ್ತಾರ ಅದನ್ನು ತಿಳುಕೊಳ್ಳಿ, ನಾನು ಶಾಸಕನಾಗಿದ್ದಾಗ ನಿಮ್ಮ ಓಣಿಗಳ ನೀರಿನ ಸಮಸ್ಯೆ ನಿವಾರಣೆಗೆ ಬೋರ್ ಕೊರೆಸಿ 24 ತಾಸು ನೀರು ಬರುವಂತೆ ಮಾಡಿದ್ದು ಮರೆಯಬೇಡಿ.
ರಾಜ್ಯದಲ್ಲಿ ಜೆಡಿಎಸ್ ಸರ್ಕಾರ ಬಂದರೆ ದೊರೆಯುವ ಸೌಲಭ್ಯಗಳ ಬಗ್ಗೆ ತಿಳಿಸಿ, ಕಾಂಗ್ರೆಸ್ ಬಿಜೆಪಿಯ ಭರವಸೆಗಳನ್ನು ನಂಬ ಬೇಡಿ ಎಂದು ತಮಗೆ ಮತ ನೀಡುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಕ್ಷದ ಜಿಲ್ಲಾ ಅಧ್ಯಕ್ಷ ಪಿ.ಎಸ್.ಸೋಮಲಿಂಗನಗೌಡ ಮೊದಲಾದವರು ಇದ್ದರು.