ಅನಿಲ್ ಲಾಡ್ ನಾಮ‌ಪತ್ರ ತಿರಸ್ಕೃತ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.21: ನಗರ ಕ್ಷೇತ್ರಕ್ಕೆ ಸ್ಪರ್ಧೆ ಬಯಸಿ ಸಲ್ಲಿಸಿದ್ದ ಮಾಜಿ ಶಾಸಕ ಅನಿಲ್ ಲಾಡ್ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಮಹಾನಗರ ಪಾಲಿಕೆಯ ಕಚೇರಿಯಲ್ಲಿ ಚುನಾವಣಾಧಿಕಾರಿ ಎ.ಎಂ.ಎನ್ ರುದ್ರೇಶ್  ಇಂದು ನಾಮಪತ್ರಗಳ ಪರಿಶೀಲನೆ ನಡೆಸಿದರು.
ಒಟ್ಟು 29 ಜನ 39  ನಾಮಪತ್ರ ಸಲ್ಲಿಸಿದ್ದರು.  ಇದರಲ್ಲಿ ಅಗತ್ಯ ಸೂಚಕರಿಲ್ಲದ ಕಾರಣ ಆಮ್ ಆದ್ಮಿ ಪಕ್ಷದಿಂದ ಸಲ್ಲಿಸಿದ್ದ ಜೆ‌.ವಿ.ಮಂಜುನಾಥ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಅದೇರೀತಿ ಪಕ್ಷೇತರರಾಗಿ ಸಲ್ಲಿಸಿದ್ದ ಅನಿಲ್ ಲಾಡ್ ಅವರ ನಾಮಪತ್ರವೂ ಸಹ ತಿರಸ್ಕೃತಗೊಂಡಿದೆ. ಆದರೆ ಇದೇ ಅನಿಲ್ ಲಾಡ್ ಅವರು ಜೆಡಿಎಸ್ ದಿಂದ ಸಲ್ಲಿಸಿದ್ದ ನಾಮಪತ್ರ ಸ್ವೀಕೃತಗೊಂಡಿದೆ.
ಹೀಗಾಗಿ ನಗರ ಕ್ಷೇತ್ರದಲ್ಲಿ 28 ಹುರಿಯಾಳುಗಳ 37 ನಾಮಪತ್ರಗಳುನ್ನು ಸ್ವೀಕರಸಿದೆ.
ಎ.24 ನಾಮಪತ್ರ ಹಿಂದಕ್ಕೆ ಪಡೆಯಲು ಕೊನೆ ದಿನವಾಗಿದೆ.

One attachment • Scanned by Gmail