ಅನಿಲ್ ಲಾಡ್ ಜೆಡಿಎಸ್ ಗೆ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಎ,18- ನಗರದ ಮಾಜಿ ಶಾಸಕ. ಅನಿಲ್ ಹೆಚ್.ಲಾಡ್ ಜೆಡಿಎಸ್ ಪಕ್ಷಕ್ಕೆ ಜಂಪ್ ಆಗುತ್ತಿದ್ದಾರೆಂದು ತಿಳಿದು ಬಂದಿದೆ.
ಈ ಬಗ್ಗೆ ಸಂಜೆವಾಣಿ ಅವರನ್ನು ದೂರವಾಣಿಯಲ್ಲಿ ಸಂಪರ್ಕ ಮಾಡಿದರೆ. ಜೆಡಿಎಸ್ ನಿಂದ ಕರೆ ಬಂದಿದೆ. ಮೊದಲಿನಿಂದಲೂ ಕುಮಾರಣ್ಣನವರ ಸಂಪರ್ಕ ನಮಗಿದೆ. ಕಾಂಗ್ರೆಸ್ ಟಿಕೆಟ್ ನಿರಾಕರಿಸಿದ್ದರಿಂದ ಸಹಜವಾಗಿ ಕರೆದಿದ್ದಾರೆ. ಬೆಂಗಳೂರಿಗೆ ಹೊರಟಿರುವೆ ಎಂದರು.
ನೀವು ಬಳ್ಳಾರಿಯ ಅಭ್ಯರ್ಥಿಯಾಗುತ್ತೀರಾ ಎಂಬ ಪ್ರಶ್ನೆಗೆ ಈ ಬಗ್ಗೆ ಇನ್ನು ಚರ್ಚಿಸಿಲ್ಲ ಹೋದ ಮೇಲೆ ಕುಮಾರಣ್ಣ ಏನು ಹೇಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಾರೆ ಜೆಡಿಎಸ್ ಗೆ ಹೋಗುವುದು ಬಹುತೇಕ ಖಚಿತ ಎಂದರು.
ಬಳ್ಳಾರಿಯಲ್ಲಿ ಲಾಡ್ ಜೆಡಿಎಸ್ ಅಭ್ಯರ್ಥಿಯಾದರೆ ಚತುಷ್ಕೋನ್ ಸ್ಪರ್ಧೆ ಏರ್ಪಾಡಾಗಲಿದೆ.