ಅನಿಲ್ ಕುಮಾರ್ ಪಾಟೀಲ ತೇಲ್ಕೂರ್ ಗೆಲುವು…

ಸೇಡಂ: ವಾಸವದತ್ ಸಿಮೆಂಟ್ ಕಂಪನಿಯ ಯೂನಿಯನ್ ಗೆ ಇಂದು ನಡೆದ ಚುನಾವಣೆಯಲ್ಲಿ ಭಾರತೀಯ ಮಜ್ದೂರ್ ಸಂಘಟನೆಯ ಅಭ್ಯರ್ಥಿ ( ತಕ್ಕಡಿ ಗುರುತಿನ) ಅನಿಲ್ ಕುಮಾರ್ ಪಾಟೀಲ ತೇಲ್ಕೂರ್ ಅವರು ಗೆಲುವು ಸಾಧಿಸಿದ್ದಾರೆ. ಈ ವೇಳೆ ಶಾಸಕ, ಈಕರಸಾ ಸಂಸ್ಥೆ ಅಧ್ಯಕ್ಷ ಹಾಗೂ ಡಿಸಿಸಿ ಬ್ಯಾಂಕ್ ನೂತನ ಅಧ್ಯಕ್ಷರಾದ ರಾಜಕುಮಾರ ಪಾಟೀಲ ತೇಲ್ಕೂರ್ ಅವರು ಕಾರ್ಮಿಕರನ್ನುದ್ದೇಶಿಸಿ ಮಾತನಾಡಿದರು.