ಅನಿಲ್ ಕಪೂರ್ ರಿಂದ ಪತ್ನಿ ಸುನೀತಾ ರ ಹುಟ್ಟುಹಬ್ಬಕ್ಕೆ ಮರ್ಸಿಡೀಸ್-ಬೆಂಝ್ ಕಾರು ಉಡುಗೊರೆ, ಅದರ ಬೆಲೆ ಒಂದು ಕೋಟಿ ರೂಪಾಯಿ.

ಪತ್ನಿ ಸುನೀತಾ ಕಪೂರ್ ಅವರ ೫೬ನೇ ಜನ್ಮದಿನದಂದು ನಟ ಅನಿಲ್ ಕಪೂರ್ ಕೆಲವು ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ .ಜೊತೆಗೆ ಕೆಲವು ಸುಂದರ ಮಾತುಗಳನ್ನೂ ತನ್ನ ಅಕೌಂಟ್ ನಲ್ಲಿ ಪೋಸ್ಟ್ ಮಾಡುತ್ತಾ ಪತ್ನಿ ಸುನೀತಾರಿಗೆ ಗಿಫ್ಟ್ ರೂಪದಲ್ಲಿ ಮರ್ಸಿಡೀಸ್ ಬೆಂಝ್ ಜಿ ಎಲ್ ಎಸ್ ಕಾರು ಉಡುಗೊರೆ ನೀಡಿರುವುದನ್ನು ತಿಳಿಸಿದ್ದಾರೆ. ಇದರ ಬೆಲೆ ಒಂದು ಕೋಟಿ ರೂಪಾಯಿ ಎನ್ನಲಾಗಿದೆ.
ಅನಿಲ್ ತಮ್ಮ ಪೋಸ್ಟ್ ನಲ್ಲಿ ಹೀಗೆ ಬರೆದಿದ್ದರು-


” ನನ್ನ ಬದುಕಿನ ಪ್ರೀತಿಯ ಸುನೀತಾ ಕಪೂರ್ ಗಾಗಿ….. ಥರ್ಡ್ ಕ್ಲಾಸ್ ಟ್ರೈನ್ ನ ಬೋಗಿಯ ಪ್ರಯಾಣದಿಂದ ಹಿಡಿದು ,ಲೋಕಲ್ ಬಸ್ಸುಗಳಿಂದ ರಿಕ್ಷಾದಿಂದ ಕಪ್ಪು ಹಳದಿ ಟ್ಯಾಕ್ಸಿಯ ತನಕ ,ಇಕಾನಮಿಯ ವಿಮಾನ ಪ್ರಯಾಣದಿಂದ ಬಿಜಿನೆಸ್ಸಿನ ಫಸ್ಟ್ ಕ್ಲಾಸ್ ಸೀಟಿನ ತನಕ, ದಕ್ಷಿಣದ ಕರೈಕುಡಿ ಇಂತಹ ಊರಿನ ಚಿಕ್ಕ ಹೋಟೆಲಿನಲ್ಲಿ ಉಳಕೊಳ್ಳುವುದರಿಂದ ಹಿಡಿದು ಲೇಹ ಲಡ್ಡಾಕ್ ನಲ್ಲಿ ಒಂದು ಟೆಂಟಿನಲ್ಲಿ ಉಳಕೊಳ್ಳುವ ತನಕ… ನಾವು ನಮ್ಮ ಮುಖದಲ್ಲಿ ನಗುವನ್ನು ಮತ್ತು ಹೃದಯದಲ್ಲಿ ಪ್ರೀತಿಯನ್ನು ಜೊತೆಯಾಗಿ ಹಂಚಿಕೊಂಡಿದ್ದವರು. ಇಂತಹ ಲಕ್ಷಗಟ್ಟಲೆ ಕಾರಣಗಳಿಂದ ನಾನು ನಿಮ್ಮನ್ನು ಪ್ರೀತಿ ಮಾಡುತ್ತಾ ಇದ್ದೇನೆ…..”
ಅನಿಲ್ ಕಪೂರ್ ಮುಂದುವರಿದು ಬರೆಯುತ್ತಾರೆ-
“ನೀವು ನನ್ನ ನಗುವಿನ ಮುಖ್ಯಕಾರಣ. ನಿಮ್ಮ ಕಾರಣದಿಂದ ನಮ್ಮ ಬದುಕಿನ ಜರ್ನಿ ಇಷ್ಟೊಂದು ಖುಷಿಯಿಂದ ಮುಂದುವರಿದಿದೆ. ನನ್ನ ಬದುಕಿನ ಪಾರ್ಟ್ನರ್ ಆಗಿ ಬಂದಿರುವುದು ಇಷ್ಟಕ್ಕೆಲ್ಲ ಕಾರಣ.ಇಂದು, ಪ್ರತೀದಿನ , ಸದಾಕಾಲ ಹ್ಯಾಪಿ ಬರ್ತ್ ಡೇ .ಸದಾ ಪ್ರೀತಿ ಮಾಡುತ್ತಾ ಇರುತ್ತೇನೆ.” ಅನಿಲ್ ಕಪೂರ್ ಮತ್ತು ಸುನೀತಾ ೧೯೮೪ ರಲ್ಲಿ ವಿವಾಹವಾಗಿದ್ದರು. ಇವರಿಬ್ಬರೂ ಮೊದಲ ಬಾರಿ ಮೇರಿ ಜಂಗ್ ಫಿಲ್ಮ್ ನ ಸೆಟ್ ನಲ್ಲಿ ಭೇಟಿಯಾಗಿದ್ದರು .ಇವರ ಮಕ್ಕಳಾದ ಸೋನಮ್ ಮತ್ತು ಹರ್ಷವರ್ಧನ್ ಕಪೂರ್ ಬಾಲಿವುಡ್ ಕಲಾವಿದರಾಗಿದ್ದಾರೆ.ಇನ್ನೊಬ್ಬ ಪುತ್ರಿ ರಿಯಾ ಫಿಲ್ಮ್ ನಿರ್ಮಾಪಕಿಯಾಗಿದ್ದಾರೆ.

ಧರ್ಮೇಂದ್ರರ ’ಫ್ಯಾಮಿಲಿ’ಯಲ್ಲಿ ಕೊರೊನಾ: ೮೫ ರ ಧರ್ಮೇಂದ್ರರ ರಿಪೋರ್ಟ್ ನೆಗೆಟಿವ್

ಬಾಲಿವುಡ್ ನ ದಿಗ್ಗಜ ನಟ ಧರ್ಮೇಂದ್ರರ ಸ್ಟಾಫ್ ನ ಮೂವರು ಸದಸ್ಯರು ಕರೋನಾವೈರಸ್ ಸೋಂಕು ಪೀಡಿತರಾಗಿದ್ದಾರೆ. ಅನಂತರ ಸೂಪರ್ ಸ್ಟಾರ್ ಧರ್ಮೇಂದ್ರ ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಂಡರು. ಅವರ ರಿಪೋರ್ಟು ನೆಗೆಟಿವ್ ಬಂದಿದೆ .
೮೫ ವರ್ಷದ ಧರ್ಮೇಂದ್ರ ಅವರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ “ನನ್ನ ಮೇಲೆ ಭಗವಂತನ ಕೃಪೆ ಇದೆ .ನನ್ನ ರಿಪೋರ್ಟು ನೆಗೆಟಿವ್ ಬಂದಿದೆ. ಕೋವಿಡ್ ನ ಎರಡನೇ ಅಲೆ ಏನಾಗಬಹುದು ಎಂದು ನನಗೆ ತಿಳಿದಿಲ್ಲ. ಆದರೆ ಅದು ಅಪಾಯಕಾರಿಯಾಗಿದೆ .ಸಿಚುವೇಶನ್ ನ ಮೇಲೆ ಕಂಟ್ರೋಲ್ ಮಾಡಬೇಕಾಗುತ್ತದೆ. ಇಲ್ಲವಾದರೆ ಪರಿಸ್ಥಿತಿ ಕೈಮೀರಬಹುದು” ಎಂದಿದ್ದಾರೆ .


ಧರ್ಮೇಂದ್ರರು ಸ್ಟಾಫ್ ಮೆಂಬರ್ಸ್ ಕುರಿತಂತೆ ಉತ್ತಮ ಕಾಳಜಿ ವಹಿಸುತ್ತಾರೆ. ಯಾರು ಕೊರೊನಾ ಸೋಂಕು ಪೀಡಿತರಾಗಿದ್ದಾರೋ ಅವರ ಫ್ಯಾಮಿಲಿ ಮೆಂಬರ್ಸ್ ನಿಂದ ಐಸೋಲೆಟೆಡ್ ಇರಿಸಿದ್ದಾರೆ.
ಕಳೆದ ವಾರ ಧರ್ಮೇಂದ್ರ ಕೊರೊನಾ ವ್ಯಾಕ್ಸಿನ್ ನ ಮೊದಲ ಡೋಸ್ ಪಡೆದಿದ್ದಾರೆ .ಅವರು ವ್ಯಾಕ್ಸಿನೇಷನ್ ನ ವೀಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ “ನಾನು ತೋರಿಕೆಗಾಗಿ ಈ ವೀಡಿಯೋ ಹಾಕಿಲ್ಲ, ಲಸಿಕೆ ಹಾಕಿಸಿಕೊಳ್ಳಲು ನಿಮಗೂ ಪ್ರೇರಣೆಗಾಗಿ ಇದನ್ನು ಹಾಕಿದ್ದೇನೆ .ಸ್ನೇಹಿತರೆ , ನಿಮ್ಮ ಆರೋಗ್ಯದ ಗಮನ ನಿಮಗಿರಲಿ “ಎಂದಿದ್ದಾರೆ.
ಧರ್ಮೇಂದ್ರ ಸೋಶಿಯಲ್ ಮೀಡಿಯಾದಲ್ಲಿ ಬಹಳಷ್ಟು ಸಕ್ರಿಯರಿದ್ದಾರೆ. ಕೆಲವು ದಿನಗಳ ಹಿಂದೆ ಬರೆದಿದ್ದರು- “ನನಗೀಗ ನನ್ನ ಫಾಲೋ ಮಾಡುವವರ ಹೆಚ್ಚಿನ ಹೆಸರುಗಳು ನೆನಪಿದೆ. ಯಾರು ನನ್ನನ್ನು ಟೀಕಿಸುತ್ತಾರೋ ಅವರು ಖುಷಿ ಇರಬೇಕು ಎಂದು ಬಯಸುವೆ” ಎಂದಿದ್ದರು.

ಕೊರೊನಾ ಇಫೆಕ್ಟ್: ರಾಕೇಶ್ ರೋಶನ್ ಪತ್ನಿ ಪಿಂಕಿ ಮತ್ತು ಮಗಳು ಸುನೈನಾ ಜೊತೆ ಲೋನಾವಾಲಾ ಶಿಫ್ಟ್, ಹೃತಿಕ್ ರೋಶನ್ ಮುಂಬೈಯಲ್ಲಿ.

ಬಾಲಿವುಡ್ ದಿಗ್ಗಜ ನಟ ನಿರ್ದೇಶಕ ರಾಕೇಶ್ ರೋಶನ್ ತಮ್ಮ ಪತ್ನಿ ಪಿಂಕಿ ಮತ್ತು ಮಗಳು ಸುನೈನಾ ಜೊತೆ ಮುಂಬೈನಿಂದ ಲೋನಾವಾಲಾ ಗೆ ಶಿಫ್ಟ್ ಆಗಿದ್ದಾರೆ .
ಬಾಲಿವುಡ್ ವರದಿ ಅನುಸಾರ ಮುಂಬೈಯ ಜುಹು ನ ಪ್ಲಾಜೋ ಬಿಲ್ಡಿಂಗಿನ ಎಂಟನೇ, ೯ನೇ ಮತ್ತು ೧೦ನೇ ಫ್ಲೋರ್ ನಲ್ಲಿ ಬಹಳ ಸಮಯದಿಂದ ಇವರಲ್ಲಿ ಯಾರೂ ಕಾಣಿಸಿಕೊಂಡಿರಲಿಲ್ಲ .ಅಲ್ಲಿ ರಾಕೇಶ್ ರೋಶನ್ ತಮ್ಮ ಫ್ಯಾಮಿಲಿಯ ಜೊತೆ ವಾಸಿಸುತ್ತಿದ್ದರು. ಆದರೆ ಇತ್ತೀಚೆಗೆ ಅವರು ಬ್ಯಾಗ್ ಮತ್ತು ಅಗತ್ಯ ಸಾಮಾನುಗಳನ್ನು ಹಿಡಿದುಕೊಂಡು ತಮ್ಮ ಫ್ಯಾಮಿಲಿಯ ಜೊತೆ ಮುಂಬೈಯಿಂದ ಲೋನಾವಾಲಾಗೆ ಶಿಫ್ಟ್ ಆಗಿದ್ದಾರೆ. ಹೃತಿಕ್ ರೋಷನ್ ಜುಹುನಲ್ಲಿರುವ ತನ್ನ ಸ್ವಂತ ಅಪಾರ್ಟ್ಮೆಂಟ್ನಲ್ಲಿ ಇದ್ದಾರೆ.


ಬಾಲಿವುಡ್ ಮೂಲಗಳು ತಿಳಿಸುವಂತೆ ರಾಕೇಶ್ ರೋಶನ್ ಈ ದಿನಗಳಲ್ಲಿ ಕೇವಲ ಮೀಟಿಂಗ್ ಗಾಗಿ ಮಾತ್ರ ಮುಂಬೈಗೆ ಬಂದು ಹೋಗುತ್ತಾರೆ. ಅವರು ಸದ್ಯ ಲೋನಾವಾಲಾದಲ್ಲಿ ವಾಸಿಸುತ್ತಿದ್ದಾರೆ. ವಾರದಲ್ಲಿ ಎರಡು ಅಥವಾ ಮೂರು ದಿನ ಮಾತ್ರ ಮುಂಬೈಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಯಾಕೆ ಹೀಗೆ?
ಇದಕ್ಕೆ ಕಾರಣ ಕೋವಿಡ್ ನ ಎರಡನೇ ಅಲೆ. ಬಾಲಿವುಡ್ ನಲ್ಲಿ ಈವಾಗ ಮತ್ತೆ ಶೂಟಿಂಗ್ ಮತ್ತು ಮೀಟಿಂಗ್ ಕಡಿಮೆಯಾಗುತ್ತಿದೆ. ಬಾಲಿವುಡ್ ಈ ದಿನಗಳಲ್ಲಿ ಮತ್ತೆ ಸಂಕಷ್ಟದ ದಿನಗಳಲ್ಲಿ ಕಳೆಯುವಂತಾಗಿದೆ. ಕೆಲವು ಫಿಲ್ಮ್ ಗಳ ರಿಲೀಸ್ ಡೇಟ್ ಬಂದಿದ್ದರೂ ಮತ್ತೆ ಮುಂದೂಡಲ್ಪಡುತ್ತಿದೆ. ಈವಾಗ ಬಾಲಿವುಡ್ ನ ವಾತಾವರಣ ಮತ್ತೆ ಕೆಟ್ಟ ದಿನಗಳನ್ನು ಕಾಣಿಸಿದೆ.


ಲೋನಾವಾಲಾದಲ್ಲಿ ರಾಕೇಶ್ ರೋಶನ್ ರ ಬಹಳ ದೊಡ್ಡ ಬಂಗಲೆ ಇದೆ. ಹಾಗಿರುವಾಗ ಮುಂಬೈಯಲ್ಲಿ ಯಾಕೆ ತನ್ನ ಫ್ಯಾಮಿಲಿಯನ್ನು ಅಪಾಯಕ್ಕೆ ಒಡ್ಡಬೇಕು? ಕಳೆದ ವರ್ಷವಷ್ಟೇ ಅವರು ಕ್ಯಾನ್ಸರ್ ನ ಹೋರಾಟದಿಂದ ಬದುಕಿ ಬಂದಿದ್ದರು .ಹೀಗಾಗಿ ಅವರು ಮುಂಬೈಯಿಂದ ಲೋನವಾಲಾ ಕ್ಕೆ ಶಿಫ್ಟ್ ಆಗಿದ್ದಾರೆ. ಮುಂಬೈಗೆ ಮೀಟಿಂಗ್ ಗೆ ಬಂದರೂ ತಕ್ಷಣ ಮೀಟಿಂಗ್ ಮುಗಿಸಿ ಲೋನಾವಾಲಾಗೆ ಹೊರಡುತ್ತಾರೆ.