ಅನಿಮಲ್ ನಂತರ ಆಕ್ಷನ್ ಚಿತ್ರಗಳು ನಕಲಿ

ಮುಂಬೈ,ಮೇ.೧೫-ಸಂದೀಪ್ ರೆಡ್ಡಿ ವಂಗ ನಿರ್ದೇಶನದ ಅನಿಮಲ್ ಚಿತ್ರ ಕಳೆದ ವರ್ಷ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ರಣಬೀರ್ ಕಪೂರ್ ಮತ್ತು ರಶ್ಮಿಕಾ ಮಂದಣ್ಣ ಮುಖ್ಯ ಭೂಮಿಕೆಯಲ್ಲಿದ್ದರು. ಇದು ಪ್ರೇಕ್ಷಕರಿಂದ ಅಪಾರ ಮೆಚ್ಚುಗೆ ಪಡೆಯಿತು ಮತ್ತು ಚಿತ್ರವು ಬ್ಲಾಕ್ಬಸ್ಟರ್ ಎಂದು ಸಾಬೀತಾಯಿತು. ಇದೀಗ ನಿರ್ದೇಶಕ ಅನುರಾಗ್ ಕಶ್ಯಪ್ ಅನಿಮಲ್ ಚಿತ್ರದ ಬಗ್ಗೆ ಮಾತನಾಡಿದ್ದಾರೆ.
ಅನಿಮಲ್ ಒಟಿಟಿಯಲ್ಲಿ ಬಂದಾಗಲೂ ಈ ಚಿತ್ರಕ್ಕೆ ಜನರಿಂದ ಅಪಾರ ಬೆಂಬಲ ಸಿಕ್ಕಿದೆ. ಕೆಲವರು ಈ ಚಿತ್ರವನ್ನು ಟೀಕಿಸಿದರೆ, ಹಲವರು ತುಂಬಾ ಹೊಗಳಿದ್ದಾರೆ. ಈ ಹೆಸರುಗಳಲ್ಲಿ ಒಂದು ಗ್ಯಾಂಗ್ಸ್ ಆಫ್ ವಾಸೇಪುರ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರದ್ದು. ಸಂದೀಪ್ ರೆಡ್ಡಿ ವಂಗಾ ಅವರ ಅನಿಮಲ್ ಚಿತ್ರ ಹೊಗಳಿದ ಅವರು, ಇದು ಹಿಂದಿ ಚಿತ್ರರಂಗಕ್ಕೆ ಗೇಮ್ ಚೇಂಜರ್ ಎಂದು ಕರೆದಿದ್ದಾರೆ. ಈಗ ಟೀಕೆಗಳ ನಡುವೆ ಸಂದೀಪ್ ರೆಡ್ಡಿ ವಂಗಾ ಅವರನ್ನು ಏಕೆ ಬೆಂಬಲಿಸಿದೆ ಎಂದು ಹೇಳಿದ್ದಾರೆ.
ಅನುರಾಗ್ ಕಶ್ಯಪ್ ಮತ್ತೊಮ್ಮೆ ಅನಿಮಲ್ ಚಿತ್ರವನ್ನು ಹೊಗಳಿದ್ದು, ೫-೧೦ ವರ್ಷಗಳ ನಂತರ ಚಿತ್ರದ ಪ್ರಭಾವವನ್ನು ಜನರು ಅರ್ಥಮಾಡಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಚಿತ್ರದ ಆ?ಯಕ್ಷನ್ ಶ್ಲಾಘಿಸಿದ ಅವರು, ಈ ಚಿತ್ರದ ನಂತರ ಪ್ರತಿ ಚಿತ್ರದ ಆ?ಯಕ್ಷನ್ ಹುಸಿ ಎನಿಸುತ್ತದೆ ಎಂದಿದ್ದಾರೆ.ಅವರು ಬಡೆ ಮಿಯಾನ್ ಛೋಟೆ ಮಿಯಾನ್ ಚಿತ್ರವನ್ನು ಉದಾಹರಣೆಯಾಗಿ ತೆಗೆದುಕೊಂಡಿದ್ದಾರೆ ಚಿತ್ರದ ಎಲ್ಲಾ ಹೊಡೆದಾಟಗಳು, ಸಾಹಸ ದೃಶ್ಯಗಳು ಎಲ್ಲವೂ ನಕಲಿ ಎಂದು ತೋರುತ್ತದೆ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.