ಅನಾಹುತಕ್ಕೆ ಎಡೆ ಮಾಡದಿರಿ ಸಿದ್ದು ಎಚ್ಚರಿಕೆ

ಬೆಂಗಳೂರು,ನ,೬- ರಾಜ್ಯದಲ್ಲಿ ಕೊರೊನಾ ಸೋಂಕು ನಡುವೆಯೂ ಶಾಲೆಗಳ ಆರಂಭಿಸಲು ಮುಂದಾಗಿರುವ ಸರ್ಕಾರದ ನಡೆಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿ ಸದ್ಯಕ್ಕೆ ಶಾಲೆ ತೆರೆಯುವುದು ಬೇಡ ಎಂದಿದ್ದಾರೆ

ಸದ್ಯದ ಪರಿಸ್ಥಿತಿಯಲ್ಲಿ ಶಾಲೆಗಳನ್ನು ಆರಂಭ ಮಾಡುವುದು ಬೇಡ. ಆತುರದ ನಿರ್ಧಾರ ತೆಗೆದುಕೊಂಡು ಅನಾಹುತಕ್ಕೆ ಅವಕಾಶ ಕಲ್ಪಿಸಬೇಕೆಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದಾರೆ.

ರಾಜ್ಯದಲ್ಲಿ ಶಾಲೆಗಳನ್ನು ಜನಪ್ರತಿನಿಧಿಗಳು, ಶಿಕ್ಷಕರು, ಪೋಷಕರ ಅಭಿಪ್ರಾಯ ಸಂಗ್ರಹಕ್ಕೆ ಸರ್ಕಾತ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಅವರು ಪತ್ರ ಬರೆದಿದ್ದಾರೆ

ಕೊರೋನಾದಿಂದ ಒಂದು ಮಗು ಸತ್ತರೂ ಅದು ಕಗ್ಗೋಲೆ. ಯಮನ ಬಾಯಿಗೆ ಮಕ್ಕಳನ್ನ ತಳ್ಳಿದಂತೆ. ಹೀಗಾಗಿ ಈ ವರ್ಷ ಎಲ್ಲಾ ಮಕ್ಕಳನ್ನ ಪಾಸ್ ಮಾಡಿಬಿಡಿ. ಶಾಲೆ ಆರಂಭಿಸುವುದು ಬೇಡ ಎಂದು ಸಿದ್ಧರಾಮಯ್ಯ ಪತ್ರದ ಮೂಲಕ ಸರ್ಕಾರಕ್ಕೆ ಸಲಹೆ ನೀಡಿದ್ದಾರೆ.

ಒಂದುವರ್ಷ ಶಾಲಾ ಮಕ್ಕಳಿಗೆ ತರಗತಿ ನಡೆಸದೆ ಅವರನ್ನು ಪಾಸ್ ಮಾಡುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ ಸರ್ಕಾರ ಈ ಬಗ್ಗೆ ನಿರ್ದಾರ ಕೈಗೊಳ್ಳಬೇಕು ಎಂದು ಹೇಳಿದರು.