ಹುಣಸೂರು,ಏ.06:- ನನ್ನ ವಿರುದ್ದ ಖಾಸಗಿ ಟಿ.ವಿ ಚಾನಲ್ ಒಂದು ನಡೆಸಿರುವ ಸ್ಟಿಂಗ್ ಆಪರೇಷನ್ ಹಿಂದೆ ದೊಡ್ಡ ಷಡ್ಯಂತ್ರ ಇದ್ದು, ಇದು ರಾಜಕಿಯದುರುದ್ದೇಶ ಹಾಗೂ ನನ್ನ ತೇಜೋವಧೇ ಮಾಡಲು ನಡೆಸಿರುವ ಹುನ್ನಾರ. ಇಂಥವರ ವಿರುದ್ದ ಕಾನೂನು ರೀತ್ಯಕ್ರಮ ವಹಿಸುವುದಾಗಿ ಶಾಸಕ ಹೆಚ್.ಪಿ.ಮಂಜುನಾಥ್ ಎಚ್ಚರಿಸಿದ್ದಾರೆ.
ಪತ್ರಕರ್ತರ ಸಂಘದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈ ಘಟನೆಇಂದ ನನ್ನ ವ್ಯಕ್ತಿತ್ವಕ್ಕೆಧಕ್ಕೆ ಬರುವ ಪ್ರಶ್ನೆಇಲ್ಲ. ನಾನು ಯಾರು, ಏನು ಅಂತ ತಾಲ್ಲೂಕಿನ ಜನತೆಗೆ ಗೊತ್ತು. ನನ್ನ 20 ವರ್ಷ ರಾಜಕಿಯದಲ್ಲಿ ಶುದ್ದ ಹಸ್ತನಾಗಿದ್ದೆನೆ, ಈ ಸ್ಟಿಂಗ್ ಆಪರೇಷನ್ ವಿಚಾರವಾಗಿ ಬೆಂಗಳೂರು ನಗರ ನ್ಯಾಯಲಯದಿಂದ ತಡೆಯಾಜ್ಷೆತಂದಿದ್ದು, ಯಾರದರೂ ಇದ್ದನು ತಮ್ಮ ಸ್ವಾರ್ಥಕ್ಕೆ ಬಳಸಿದರೆ, ಅವರ ವಿರುದ್ದ ಕಾನೂನು ಕ್ರಮವಹಿಸಲಾಗುವುದು ಎಂದ ಅವರು, ಈ ವಿಚಾರವಾಗಿಯಾವ ತನಿಖೆಗೂ ನಾನು ಸಿದ್ದ ಎಂದರು.
ಈ ದುರ್ಘಟನೆಯಿಂದ ನನ್ನ ಕುಟುಂಬಸ್ಥರಿಗೆ, ಸ್ನೇಹಿತರಿಗೆ ಹಾಗೂ ನನ್ನ ಹಿತೈಷಿಗಳಿಗೆ ನೋವಾಗಿರುವ ಬಗ್ಗೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದರು.
ಸಹಕಾರಿ ಕ್ಷೇತ್ರ ದುರುಪಯೋಗ
ತಮ್ಮ ಚುನಾವಣೆ ಸ್ವಾರ್ಥಕ್ಕಾಗಿ ಜೆ.ಡಿ.ಎಸ್ ನಿಯೋಜಿತ ಅಭ್ಯರ್ಥಿ ಜಿ.ಡಿ.ಹರೀಶ್‍ಗೌಡ ಹಾಗೂ ಸಂಗಡಿಗರು ಸಹಕಾರಿ ಕ್ಷೇತ್ರ ಹಾಗೂ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ, ಇದು ಸಂವಿಧಾನ ಬಾಹಿರ ಎಂದ ುಶಾಸಕ ಎಚ್.ಪಿ.ಮಂಜುನಾಥ್ ಗಂಭಿರವಾಗಿ ಆರೋಪಿಸಿದರು.
ತಾಲ್ಲೂಕಿನ ಸಹಕಾರಿ ಕ್ಷೇತ್ರದ ಅಧಿಕಾರಿಗಳು ಮತ್ತು ನೌಕರರನ್ನು ಬಳಸಿಕೊಂಡು ಜೆಡಿಎಸ್ ಪಕ್ಷದ ಪರವಾಗಿ ಹೈನುಗಾರರು, ರೈತರಿಗೆ, ಷೇರುದಾರರಿಗೆ, ಸಹಕಾರಿ ಬ್ಯಾಂಕಿಗೆ ಬರುವ ಸಾರ್ವಜನಿಕರಿಗೆ, ರೈತರಿಗೆ, ಮಹಿಳೆಯರಿಗೆ ಮತ್ತು ಮತದಾರರಿಗೆ ಹಣ, ಅಧಿಕಾರದ ಆಸೆ, ಆಮಿಷಗಳನ್ನು ಒಡ್ಡುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಸಹಕಾರಿ ಕ್ಷೇತ್ರದ ನೌಕರರು ಸರ್ಕಾರಅನುದಾನ ಸವಲತ್ತುಗಳನ್ನು ಪಡೆಯುತ್ತಾರೆ.ಸರಕಾರಿ ನೌಕರರ ನಿಯಮಾವಳಿ ಅಡಿಯಲ್ಲಿ ಬರುವುದರಿಂದ ಸಹಕಾರಿ ಕ್ಷೇತ್ರದ ನೌಕರರು, ಅಧಿಕಾರಿಗಳು ಪ್ರಾಮಾಣಿಕವಾಗಿ ತಮ್ಮ ಕೆಲಸ ಮಾಡಬೇಕು. ಅದನ್ನು ಬಿಟ್ಟುಯಾರದೋ ಪಕ್ಷದ ಮರ್ಜಿಗೆ ಒಳಗಾಗಿ ಒಂದು ಪಕ್ಷದ ಪರವಾಗಿ ಕೆಲಸ ಮಾಡುತ್ತಿರುವುದು ತರವಲ್ಲ, ಸಹಕಾರಿ ಕ್ಷೇತ್ರದ ನೌಕರರುಕೂಡ ಮಾದರಿ ನೀತಿ ಸಂಹಿತೆಗೆ ಒಳಪಡಲಿದ್ದು ಕಾನೂನು ರೀತ್ಯಕ್ರಮಎದುರಿಸಬೇಕಾಗುವುದು.ಈ ಬಗ್ಗೆ ಸಹಕಾರ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಮುಂದಿನ ದಿನಗಳಲ್ಲಿ ನಿಸ್ಪಕ್ಷಪಾತವಾಗಿ ನಡೆದುಕೊಳ್ಳಿರೆಂದು ಮನವಿ ಮಾಡಿ, ನಿಮ್ಮ ಕೆಲಸಕ್ಕೆ ದ್ರೋಹ ಮಾಡಿಕೊಳ್ಳಬೇಡಿ ಎಂದÀರು.
ರಾಜ್ಯದಲ್ಲೂ ಕಾಂಗ್ರೆಸ್, ಹುಣಸೂರಿನಲ್ಲೂ ಕಾಂಗ್ರೆಸ್
ಈ ಬಾರಿಯಚುನಾವಣೆಯಲ್ಲಿ ರಾಜ್ಯದಲ್ಲೂ ಕಾಂಗ್ರೆಸ್ ಪಕ್ಷಅಧಿಕಾರಕ್ಕೆ ಬರಲಿದೆ ಹಾಗೇ ಹುಣಸೂರಲ್ಲೂ ಪಕ್ಷಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಪಕ್ಷಾಂತರ ಪರ್ವ ನಡೆಯುತ್ತಿರುವ ಬಗೆಗಿನ ಪ್ರಶ್ನೆಗೆ ಚುನಾವಣಾ ಸಮಯದಲ್ಲಿ ಇದು ಸರ್ವೇ ಸಾಮಾನ್ಯ, ಮತದಾರರೇ ಮುಖ್ಯವೆಂದರು.
ದಲಿತರಿಗೆ ಅನ್ಯಾಯ ಮಾಡಿಲ್ಲ
ದಸಂಸದ ಕೆಲ ಮುಖಂಡರುದಲಿತರಿಗೆ ಅಧಿಕಾರ ನೀಡಿಲ್ಲವೆಂಬ ಆರೋಪದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಶಾಸಕರು ಇವರೆಲ್ಲರೂ ನನ್ನಲ್ಲಿ ಬಹಳ ಅನುಕೂಲ ಮತ್ತು ಸಹಾಯವನ್ನು ಪಡೆದವರು. ಇವರುಗಳು ಕೆಲವು ವರ್ಷಗಳಿಂದ ನಮ್ಮ ವಿರೋಧಿ ಬಣದಲ್ಲಿದ್ದಾರೆ.ನಾನು ಇವರ ಸುಳ್ಳು ಆರೋಪಗಳಿಗೆಲ್ಲಾ ಸೊಪ್ಪು ಹಾಕುವ ಅಗತ್ಯವಿಲ್ಲ. ಮಂಜುನಾಥ್ ಏನು ಎನ್ನುವುದು ತಾಲೂಕಿನ ಜನತೆಗೆಗೊತ್ತಿದೆ. ದಲಿತರ ಮೀಸಲಾತಿ, ನಾಯಕತ್ವ, ಪಕ್ಷದ ಸ್ಥಾನಮಾನಗಳ ಬಗ್ಗೆ ನನ್ನ ಪಕ್ಷದ ಪ್ರಾಮಾಣಿಕ ಕಾರ್ಯಕರ್ತರು ಮತ್ತು ಮುಖಂಡರು ಕೇಳುವ ಪ್ರಶ್ನೆ ಮತ್ತು ಅವರ ಅಭಿಪ್ರಾಯಕ್ಕೆ ನಾನು ಉತ್ತರಿಸುತ್ತೇನೆಎಂದರು.
ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಟಿ.ವಿ.ನಾರಾಯಣ್, ರಮೇಶ್, ಕಾರ್ಯಾಧ್ಯಕ್ಷ ವಕೀಲ ಪುಟ್ಟರಾಜು ಇತರರಿದ್ದರು.