ಅನಾವಶ್ಯಕವಾಗಿ ರಸ್ತೆಗಿಳಿದ ವಾಹನಗಳು ಪೋಲಿಸ್ ವಶಕ್ಕೆ ಸಾರ್ವಜನಿಕ ಓಡಾಟ ನಿಷೇಧ

(ಸಂಜೆವಾಣಿ ವಾರ್ತೆ)
ಶಹಾಪುರ:ಎ.28:ಕೊವಿಡ್-19 ಸೊಂಕು ಹರಡುವದನ್ನು ತಡೆಗಟ್ಟಲು ರಾಜ್ಯ ಸರ್ಕಾರ ಕೈಗೊಂಡ ನೈಟ್ ಕಪ್ರ್ಯೂ ಕಠಿಣವಾಗಿ ಜಾರಿಗೊಳಿಸಲು ಸಜ್ಜಾಗಿದೆ. ಬಸ್ ಸಂಚಾರ, ಖಾsಗಿ ವಾಹನಗಳಲ್ಲಿ ಪ್ರಯಾಣ, ಅನಾವಶ್ಯಕವಾಗಿ ಬೈಕ್‍ಗಳಲ್ಲಿ ಓಡಾಡುವದು, ಅಟೋ ಚಾಲನೆ ಮಾಡಿದಲ್ಲಿ ನಿರ್ಧಾಕ್ಷಣ್ಯವಾಗಿ ಸ್ಥಳಿಯ ಪೋಲಿಸ್ ವಶಕ್ಕೆ ಪಡೆಯಲಾಗುವದು.
ಅಲ್ಲದೆ 27ರಿಂದ ರಾತ್ರಿ 9 ಗಂಟೆಯಿಂದ ಮೇ 12 ಬೆಳಗಿನ 6 ಗಂಟೆಯವರೆಗೆ ಈ ಲಾಕ್ ಡೌನ ಮಾದರಿಯ ಕಪ್ರ್ಯೂ ಜಾರಿಗೊಳಿಸಲಾಗುತ್ತಿದ್ದು. ಸಾರ್ವನಿಕರು ಸಹಕರಿಸಬೇಕು ಎಂದು ತಹಸಿಲ್ದಾರ ಜಗನಾಥರಡ್ಡಿ, ನಗರ ಪೌರಾಯುಕ್ತ ರಮೇಶ ಪಟ್ಟೆದಾರ. ಸಿ.ಪಿ.ಐ ಶ್ರಿನಿವಾಸ್ ಅಲ್ಲಾಪುರ, ಪಿ.ಐ ಚೆನ್ನಯ್ಯ ಹಿರೆಮಠರವರು ಜಂಟಿ ಸಾರ್ವತ್ರಿಕವಾಗಿ ಕರೆ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು. ತಾಲೂಕು ಆಡಳಿತ ತಾಲೂಕಿನ್ಯಾಧ್ಯಾಂತ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದು, ಅಗತ್ಯ ವಸ್ತುಗಳಿಗಾಗಿ ಬೆಳಗಿನ 6 ಗಂಟೆಯಿಂದ ಬೆಳಗಿನ 10 ಗಂಟೆಯವರೆಗೆ ಅವಕಾಶ ನೀಡಲಾಗಿದೆ. ಮಾಸ್ಕ, ಸಾಮಾಜಿಕ ಅಂತರ ಕಾಯ್ದುಕೊಂಡು ತರಕಾರಿ ವೈವಾಟು ಮಾಡಿಕೊಳ್ಳಲು ಸೂಚನೆ ನೀಡಲಾಗಿದೆ. ಎಂದ ಅವರು ಮೆಡಿಕಲ್. ಬಂಕ್, ಆಸ್ಪತ್ರೆಗಳು ಎಂದಿನಂತೆ 24/7 ಅನುಪಾತದಲ್ಲಿ ಕಾರ್ಯನಿರ್ವಹಿಸಲ್ಲಿವೆ. 10 ಗಂಟೆಯ ತದರನಂತರದಲ್ಲಿ ಅಂಗಡಿ ಮುಗ್ಗಟ್ಟುಗಳು ಸೇರಿದಂತೆ ವ್ಯಾಪಾರ ವೈವಾಟು ಸಂಪೂರ್ಣ ಬಂದ್ ಹಾಗೂ ವಾಹನಗಳ ಓಡಾಟ, ಜನರು ಹೊರಗಡೆ ಬಾರದಂತೆ ನಿರ್ಭಂಧ ವಿಧಿಸಲಾಗಿದೆ.
ಅನವಾಶ್ಯಕವಾಗಿ ಹೊರಬರುವ ಬೈಕ ಸವಾರರು ಮತ್ತು ಇತರೆ ವಾಹನಗಳು ರಸ್ತರೆಗಿಳಿವಂತಿಲ್ಲ. ನೀಯಮ ಉಲ್ಲಂಘಿಸಿದಲ್ಲಿ ದಂಡ ಮತ್ತು ವಾಹನಗಳ ಜಪ್ತಿಗೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದ ಅವರು. ಕೊರಾನ್ ಅಲೆ ತಿವೃ ಆತಂಕದ ದುಸ್ಥಿತಿ ಉಂಟಾಗಿದ್ದು. ಜನರ ಆರೋಗ್ಯದ ದೃಷ್ಟಿಯಿಂದ ಹೊರಗಡೆ ಬರಬಾರದು ಎಂದು ಮನವರಿಕೆ ಮಾಡಿದರು. ಮೇ 12ರವರೆಗೆ ವಿಧಿಸಲಾದ ಕರ್ಪೂವ್ಯ ಮಾರ್ಗಸೂಚಿಯಂತೆ. ತಾಲೂಕು ಆಡಳಿತ ನಗರಸಭೆ ಪೋಲಿಸ್ ಇಲಾಖೆ ಅಧಿಕಾರಿಗಳು, ನಗರಸಭೆ ಅಧಿಕಾರಿಗಳು ನಗರದ ಪ್ರಮುಖ ಮಾರುಕಟ್ಟೆಗಳ ಮತ್ತು ಅಂಗಡಿಮುಗ್ಗಟ್ಟುಗಳ ಮೇಲೆ ನಿಗಾವಹಿಸುವಂತೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ವಾರದ ಸಂತೆ ರದ್ದು..
ಮೇ. 12ರವರೆಗೆ ತಾಲೂಕಿನ ದೋರನಹಳ್ಳಿ, ಸಗರ, ಗೋಗಿ, ಹತ್ತಿಗೂಡೂರ. ಭೀಮರಾಯನಗುಡಿ ಗಳಲ್ಲಿ ನೆಡೆಯುವ ವಾರದ ಸಂತೆ ಸಂಪೂರ್ಣ ನಿಷೇಧ ಮಾಡಲಾಗಿದೆ. ಆಯಾ ಗ್ರಾ.ಪಂ. ಆಡಳಿತ ಅಧಿಕಾರಿಗಳು ಈ ಕುರಿತು ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಅಲ್ಲದೆ ಪ್ರತಿ ಗ್ರಾಮಗಳಲ್ಲಿ ಸೂಕ್ತ ಬಿಗಿ ಬಂದೋಬಸ್ತ ಎರ್ಪಡಿಸಲಾಗಿದೆ. ಎಂದು ಶ್ರೀನಿವಾಸ ಅಲ್ಲಾಪುರೆ ತಿಳಿಸಿದರು. ತಾಲೂಕಿನ ಮೂಡಬೂಳ ಕ್ರಾಸ್ ಬಳಿ ಪ್ರವೇಶ ಪಡೆಯುವ ಎಲ್ಲಾ ವಾಹನಗಳಿಗೆ ಸೂಕ್ತ ಪರೀಶೀಲನೆ ಮತ್ತು ಪ್ರಯಾಣದಲ್ಲಿರುವ ಹೊರ ರಾಜ್ಯದ ಪ್ರಯಾಣಿಕರಿಗೆ ಸ್ವಾಬ್ ಟೆಷ್ಟಿಂಗ್ ವ್ಯವಸ್ಥೆ ಮಾಡಲಾಗಿದೆ ಎಂದು ಅವರು ಪೋಲಿಸ್ ಗಸ್ತಿಯಲ್ಲಿ ಗಡಿ ಪ್ರೇವೇಶ ಬಿಗಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ವಿವರ ನೀಡಿದರು.
ಗೋಗಿ ಪಿ,ಎಸ್.ಐ ಒಡೆಯರ್, ಭೀಮರಾಯನಗುಡಿ ಪಿ.ಎಸ್.ಐ ಸುಶೀಲ್‍ಕುಮಾರಯವರು ಆಯಾ ಗ್ರಾಮಗಳಲ್ಲಿ ಬೀಟ್ ಪೋಲಿಸರ ಮುಖಾಂತರ ಗ್ರಾಮಗಳ ವ್ಯವಹಾರಗಳು ಮತ್ತು ಕಪ್ರ್ಯೂ ಕುರಿತು ಮಾಹಿತಿ ಪಡೆದುಕೊಳ್ಳಲಾಗುತ್ತದೆ ಎಂದು ಅಲ್ಲಾಪುರೆ ತಿಳಿಸಿದರು.