ಅನಾವಶ್ಯಕವಾಗಿ ತಿರುಗಾಡುವವರ ಮೇಲೆ ಬಿಗಿಕ್ರಮ

ಹರಿಹರ.ಏ.25 : ವೀಕೆಂಡ್ ಕರ್ಫ್ಯೂ  ಇದ್ದರೂ ಅನಾವಶ್ಯಕವಾಗಿ ಬೈಕ್ ವಾಹನದಲ್ಲಿ ಓಡಾಡುತ್ತಿರುವವರಿಗೆ ವೃತ್ತನಿರೀಕ್ಷಕ ತಹಶೀಲ್ದಾರ್ ಆರೋಗ್ಯ ಇಲಾಖೆಯವರು ಮಹಾತ್ಮ ಗಾಂಧಿ ವೃತ್ತದಲ್ಲಿ ಬಿಗಿ ಭದ್ರತೆ ಕ್ರಮಕ್ಕೆ ಮುಂದಾದರು 
ದಿನದಿನಕ್ಕೆ ಸಾವುಗಳ ಸಂಖ್ಯೆ ಹೆಚ್ಚೆಚ್ಚು ಆಗುತ್ತಿದೆ ಸರ್ಕಾರ ಕಟ್ಟುನಿಟ್ಟಾಗಿ ಕಾನೂನು ಕ್ರಮ ಜರುಗಿಸುವಂತೆ ಆದೇಶ ಮಾಡಿದರು ನಿಮಗೆ ಯಾವುದೇ ಭಯ ಇಲ್ಲದೆ ಅನವಶ್ಯಕವಾಗಿ ತಿರುಗಾಡುತ್ತಿದ್ದೀರಿ  ನಾಚಿಕೆ ಮಾನ ಮರ್ಯಾದೆ ಭಯ ವಿಲ್ಲದಂಗೆ ತಿರುಗಾಡುತ್ತಿದ್ದರು ಇವರ ಬೈಕ್ ಗಳನ್ನು ಸೀಜ್ ಮಾಡಿರಿ ಎಂದು ಪೋಲಿಸರಿಗೆ ವೃತ್ತ ನಿರೀಕ್ಷಕ ಸತೀಶ್ ಕುಮಾರ್ ಯು  ಹೇಳಿದರು ಡೆಡ್ಲಿ ವೈರಸ್ಸಿನ ಸೋಂಕಿತರ ಸಾವಿನ ಸಂಖ್ಯೆ ದಿನದಿನಕ್ಕೆ ಪ್ರಮಾಣ ಹೆಚ್ಚಾಗುತ್ತಿದೆ ಆದರೂ ಸಾರ್ವಜನಿಕರಿಗೆ ಭಯಭೀತಿಯಿಲ್ಲದೆ ಅನವಶ್ಯಕವಾಗಿ ತಿರುಗಾಡುತ್ತಿದ್ದಾರೆ ವೈರಸ್ಸಿನ ಪ್ರಮಾಣ ಯಾವ ರೀತಿ ನಿಯಂತ್ರಣಕ್ಕೆ ಬರುವುದಕ್ಕೆ ಸಾಧ್ಯವಾಗುತ್ತದೆ ಇಲಾಖೆ ಅಧಿಕಾರಿಗಳೇ ಬಿಗಿ ಕ್ರಮ ವನ್ನು ಮಾಡಿದರೆ ಸಾಲದು ಸಾರ್ವಜನಿಕರು ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ನಗರಸಭೆ ಕಂದಾಯ ಆರೋಗ್ಯ ಪೋಲಿಸ್ ಇಲಾಖೆ ವೈದ್ಯರುಗಳು ಸಿಬ್ಬಂದಿ ವರ್ಗದವರು ತಮ್ಮ ಪ್ರಾಣದ ಹಂಗನ್ನು ತೊರೆದು ಸಾರ್ವಜನಿಕರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಹಗಲಿರುಳು ಮಳೆ ಬಿಸಿಲು ಎನ್ನದೆ  ಕರ್ತವ್ಯದಲ್ಲಿ ತೊಡಗಿರುವ ಅಧಿಕಾರಿಗಳ ಕರ್ತವ್ಯಕ್ಕೆ ಬೆಲೆಯೇ ಇಲ್ಲದಂತಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು 
ಕಣ್ಣಿಗೆ ಕಾಣದ  ವೈರಸ್ಸನ್ನು ನಿಯಂತ್ರಣ ಗೊಳಿಸುವುದಕ್ಕಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಾಗೃತಿ ಅರಿವನ್ನು ಮೂಡಿಸಿದರು  ನಾಗರಿಕರು ಮಾತ್ರ ನಿರ್ಲಕ್ಷ್ಯ ವಹಿಸಿ ಭಯ ಭೀತಿಯಿಲ್ಲದೆ ಅನಾವಶ್ಯಕವಾಗಿ ತಿರುಗಾಡುತ್ತಿದ್ದಾರೆ ವೀಕೆಂಡ್ ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ಬೈಕ್ ಕಾರ್ ಇತರೆ ವಾಹನಗಳಲ್ಲಿ ತಿರುಗಾಡುವವರಿಗೆ ಮುಲಾಜಿಲ್ಲದೆ ಅಂಥವರ ವಾಹನಗಳನ್ನು ಸೀಜ್ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದರು ಮುಂದಾದರು  ಸಾರ್ವಜನಿಕರು ಎಚ್ಚೆತ್ತುಕೊಂಡು ಮನೆಯಲ್ಲೇಇರಬೇಕು  ಅನವಶ್ಯಕವಾಗಿ ತಿರುಗಾಡದೆ ತುರ್ತು ಸಂದರ್ಭದಲ್ಲಿ ಮಾತ್ರ ಮನೆಯಿಂದ ಆಚೆಗೆ ಬರಬೇಕು .ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಮಹಾಮಾರಿ ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಇಲಾಖೆಗಳೊಂದಿಗೆ ಸಹಕರಿಸಬೇಕೆಂದು ಹೇಳಿದರು ತಹಸೀಲ್ದಾರ್  ಕೆ ಬಿ ರಾಮಚಂದ್ರಪ್ಪ .ತಾಲ್ಲೂಕು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಡಳಿತ ವೈದ್ಯಾಧಿಕಾರಿ ಡಾ ಡಿ ಚಂದ್ರಮೋಹನ್ .ರಾಜಸ್ವ ನಿರೀಕ್ಷಕರು ಗಳಾದ ಆನಂದ್ .ಸಮೀರ್ ಅಹ್ಮದ್ .ಗ್ರಾಮ ಲೆಕ್ಕಾಧಿಕಾರಿ ಎಚ್ ಜಿ ಹೇಮಂತ್ ಕುಮಾರ್ .ಪೊಲೀಸ್ ಪೇದೆಗಳಾದ ಲಿಂಗರಾಜ್. ಉತೆಶ.ಸಂತೋಷ್ ಮತ್ತಿತರರು ಇದ್ದರು