ಧಾರವಾಡ, ಜು 20: ಪವನ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಶಂಕರಗೌಡ ಪಾಟೀಲರ ಜನ್ಮದಿನವನ್ನು ಅನಾವರಣ ದಿನ ಎಂದು ಕಳೆದ ವರ್ಷ ಘೋಷಿಸಿದ್ದು, ಈ ವರ್ಷವೂ ಮುಂದುವರಿಸುತ್ತಾ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
“ಅನಾವರಣ ದಿನ” ದ ಮಹತ್ವ ಹಾಗೂ ವಿಶೇಷತೆಯ ಬಗ್ಗೆ ಶಾಲೆಯ ಹಿರಿಯ ಶಿಕ್ಷಕಿ ಶ್ರೀಮತಿ ಸುಜಾತ ಮೊಕಾಶಿ ವಿವರಿಸಿದರು.
2022 – 23ರ ಶೈಕ್ಷಣಿಕ ವರ್ಷದಲ್ಲಿ ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಧಾರವಾಡ ನಗರದಿಂದ ಅತ್ಯುನ್ನತ ಶ್ರೇಣಿಯನ್ನು ಪಡೆದ ವಿದ್ಯಾರ್ಥಿಗಳನ್ನು ಹಾಗೂ ಯಾವುದೇ ಪ್ರತಿಫಲ ಅಪೇಕ್ಷೆ ಇಲ್ಲದೆ ಎಲೆಮರೆಕಾಯಿಯಂತೆ ಸಮಾಜ ಸೇವೆಯಲ್ಲಿ ನಿರತರಾದ ಹೆಲ್ಪಿಂಗ್ ಹ್ಯಾಂಡ್ ಫೌಂಡೇಶನ್‍ದ ನವೀನ್ ಹೆಸರೆಡ್ಡಿ, ಕಿವುಡ ಮತ್ತು ಮೂಕ ಮಕ್ಕಳ ಶಾಲೆ ನಡೆಸುತ್ತಿರುವ ಸಂತೋಷ್ ಮೇಗೂರ್, ಹೋಪ್ ಎಂಬ ಸಂಸ್ಥೆಯ ಡಿ ಪ್ರಾಣಿಗಳ ಪಾಲನೆ ಉಳುವಿಗಾಗಿ ಸದಾ ಶ್ರಮಿಸುತ್ತಿರುವ ಸೋಮಶೇಖರ್, ವೃದ್ಧರ ಪಾಲಿನ ಆಶಾದೀಪವಾಗಿ ವೃದ್ಧಾಶ್ರಮ ನಡೆಸುತ್ತಿರುವ ಶ್ರೀಮತಿ ಶಿಲ್ಪಾ ಸರ್ಜಾಪುರ್ ಮುಂತಾದವರನ್ನು ಸನ್ಮಾನಿಸಲಾಯಿತು.
ಕಿರಣ್ ಶಿಂದೆಯವರು ಹಲವಾರು ರಂಗಗಳಲ್ಲಿ ಸಾಧನೆಗೈದಿರುವ ಸಮಾಜ ಸೇವಕರನ್ನು, ಹತ್ತನೇ ತರಗತಿಯಲ್ಲಿ ಅತ್ಯುನ್ನತ ಶ್ರೇಣಿ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಆಡಳಿತ ಮಂಡಳಿಯವರಿಗೂ ಹಾಗೂ ಶಿಕ್ಷಕರನ್ನು ಅಭಿನಂದಿಸಿದರು.
ಅಮಿತ್ ಪಾಟೀಲ್ ಮಾತನಾಡುತ್ತಾ ಶಂಕರ್ ಗೌಡ ಪಾಟೀಲ್ ನನ್ನ ಗುರುವಾಗಿದ್ದರು ಮಾರ್ಗದರ್ಶಕರು ಆಗಿದ್ದರು ಅವರ ಮಾರ್ಗದರ್ಶನದಲ್ಲಿ ಇಂದು ನಾನು ಒಬ್ಬ ವ್ಯಕ್ತಿ ಆಗಿರದೆ ಶಕ್ತಿಯಾಗಿದ್ದೇನೆ ಎಂದು ಹೇಳಿದರು.
ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀಮತಿ ರತ್ನ ಪಾಟೀಲ್, ಕಾರ್ಯದರ್ಶಿ ಮಹೇಶ್ ಪಾಟೀಲ್, ಸಿ ಇ ಓ ಶ್ರೀಮತಿ ಅಕ್ಷತಾ ಪಾಟೀಲ್, ಬಸವರಾಜ ಕೆ, ಪ್ರಾಂಶುಪಾಲರಾದ ವಿಕ್ರಂ ಮಹಾಶಬ್ದೆ, ಶ್ರೀಮತಿ ಪ್ರವೀಣ ಬ್ಯಾಹಟ್ಟಿ ಉಪಸ್ಥಿತರಿದ್ದರು.
ಶ್ರೀಮತಿ ಕಾವ್ಯ ಮಠದ ನಿರೂಪಿಸಿದರು.