ಅನಾರೋಗ್ಯ ಪೀಡಿತ ಶಾಮೀದ್ ಸಾಬ್ ಗೆ ಆಶ್ರಯ ನೀಡಿದ ಕಾರುಣ್ಯ ಆಶ್ರಮ

ಸಿಂಧನೂರು,ಅ.೫-ಕಾಲಿನ ತೊಂದರೆಯಿಂದ ಬಳಲುತ್ತಿದ್ದು ಆಶ್ರಯ ನೀಡುವಂತೆ ನಗರದಲ್ಲಿರುವ ವೃದ್ದಾಶ್ರಮಗಳಿಗೆ ಅಲೆದಾಡಿ ತನ್ನ ಕಷ್ಷ ಹೇಳಿಕೊಂಡರು ಸಹ ಯಾರು ಆಶ್ರಯ ನೀಡದೆ ತಿರಸ್ಕರಿಸಿದ ಶಾಮೀದ್ ಸಾಬ್ ತಂ/ಶಾಮ್ ಸಾಬ್ ೭೬ ಎನ್ನುವ ವೃದ್ದನನ್ನು ಆಟೋ ಚಾಲಕರಾದ ಚಾಂದ್ ಸಾಬ್ ನೆರವಿನೊಂದಿಗೆ ಕಾರುಣ್ಯ ಆಶ್ರಮಕ್ಕೆ ಬಂದಾಗ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹರೇಟನೂರು ಅಕ್ಕೆರೆಯಿಂದಲೆ ಆಶ್ರಮದೊಳಗೆ ಬರಮಾಡಿಕೊಂಡು ಆಶ್ರಯ ನೀಡಿದರು.
ಶಾಮೀದ್ ಸಾಬ ಲಿಂಗಸುಗೂರು ತಾಲೂಕಿನ ವ್ಯಾಕರನಾಳ ಗ್ರಾಮದವರಾಗಿದ್ದು ಇತನಿಗೆ ಒಬ್ಬ ಮಗಳಿದ್ದು ಆಕೆ ತನ್ನ ಕುಟುಂಬದೊಂದಿಗೆ ಮಂಗಳೂರಿನಲ್ಲಿ ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದಾಳೆ ಮಗಳಿಗೆ ಹೊರೆಯಾಗಬಾರದು ಎಂದು ಸಿಂಧನೂರಿಗೆ ಬಂದಿದ್ದೇನು ದಯವಿಟ್ಟು ಕಾರುಣ್ಯ ಆಶ್ರಮದಲ್ಲಿ ನನಗೆ ಬದುಕಲು ಅವಕಾಶ ನೀಡಿ ಎಂದು ವೃದ್ಧ ಬೇಡಿಕೊಂಡಾಗ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ನಿನ್ನ ಪರಿಸ್ಥಿತಿ ನೋಡಿದರೆ ಕರುಳು ಕಿತ್ತಿ ಬರುತ್ತಿದ್ದು ನಗರದಲ್ಲಿರುವ ಇತರ ಆಶ್ರಮಗಳಿಗೆ ಹೋಗಿ ಆಶ್ರಯ ಕೇಳಿದಾಗ ನಿರಾಕರಿಸಿದ ಬಗ್ಗೆ ನನ್ನ ಗಮನಕ್ಕೆ ಬಂದಿದೆ ಇದು ವಿಷಾದನೀಯ ಸಂಗತಿಯಾಗಿದೆ.
ಕಾರುಣ್ಯ ಆಶ್ರಮಕ್ಕೆ ಆಶ್ರಯ ಕೇಳಿ ಬರುವ ಯಾರೆ ಯಾಗಿರಲಿ ನಾವು ಅವರನ್ನು ತಂದೆ ತಾಯಿಗಳ ರೂಪದಲ್ಲಿ ನೋಡಿಕೊಳ್ಳುವ ಜೊತೆಗೆ ಜೀವ ಇರುವ ತನಕ ಇವರುಗಳ ಆಸೆಗಳನ್ನು ಪೂರೈಸಿ ಆರೈಕೆ ಮಾಡುವದೆ ಕಾರುಣ್ಯ ಕುಟುಂಬದ ಕನಸ್ಸಾಗಿದೆ ನಾವು ಸೇವೆ ಮಾಡಲು ನಮಗೆ ದಾನಿಗಳೆ ಸ್ಪೂರ್ತಿಯಾಗಿದ್ಧು
ನಗರದ ಆಟೋ ಚಾಲಕರ ಕಾರ್ಯ ಮೆಚ್ಚುವಂತದು.
ನಿರಂತರ ೨೪ ತಾಸುಗಳ ಸೇವೆ ಮಾಡುವ ಆಟೋ ಚಾಲಕರು ಪ್ರತಿಯೊಬ್ಬ ಪ್ರಯಾಣಿಕರಿಗೂ ಸಹ ಸಹೋದರರ ತರಹ ನಡೆದುಕೊಳ್ಳುತ್ತಿರುವುದು ನಮ್ಮ ಸಿಂಧನೂರಿನ ಘನತೆ ಗೌರವವನ್ನು ಹೆಚ್ಚಿಸುತ್ತಿದೆ. ಇಂತಹ ನೊಂದ ಜೀವಿಗಳು ಕಣ್ಣಿಗೆ ಬಿದ್ದ ತಕ್ಷಣ ಕಾರುಣ್ಯ ಕುಟುಂಬಕ್ಕೆ ಸಂಪರ್ಕ ಮಾಡಿ ಅವರುಗಳಿಗೆ ಶಾಶ್ವತ ನೆಲೆಗಾಗಿ ಆಶ್ರಮ ಸೇರಿಸುವ ಸೇವೆ ಮಾಡುವ ಆಟೋ ಚಾಲಕರ ಸೇವೆಯನ್ನು ಆಶ್ರಮ ಮೆರೆಯದೆ ನೆನಪಿನಲ್ಲಿಟ್ಟುಕೊಳ್ಳುತ್ತದೆ ಎಂದರು
ಸರ್ಕಾರದ ಸಹಾಯ ಸಹಕಾರ ಇಲ್ಲದೆ ಧಾನಿಗಳ ನೆರವಿನೊಂದಿಗೆ ಆಶ್ರಮವನ್ನು ನಡೆಸಿಕೊಂಡು ಬರಲಾಗುತ್ತಿದ್ದು ನಿರಂತರವಾಗಿ ಆಶ್ರಮ ನಡೆಯಲು ಸಹೃದಯ ಸಾರ್ವಜನಿಕರು ತಮ್ಮ ಕೈಲಾದ ಸಹಾಯ ಸಹಕಾರ ನೀಡಬೇಕು ಇದು ನಮ್ಮ ಆಶ್ರಮ ಅಲ್ಲ ನಿಮ್ಮಲರ ಕಾರುಣ್ಯ ಆಶ್ರಮವಾಗಿ ಬೆಳೆಯಲು ಸಹಾಯ ಮಾಡುವಂತೆ ಕಾರುಣ್ಯ ಆಶ್ರಮದ ಆಡಳಿತಾಧಿಕಾರಿಗಳಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಸಾರ್ವಜನಿಕರು. ದಾನಿಗಳು. ಜನಪ್ರತಿನಿಧಿಗಳು,ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡರು.
ಆಟೋ ಚಾಲಕರಾದ ಚಾಂದ್ ಪಾಷಾ. ಆಶ್ರಮದ ಸಿಬ್ಬಂದಿಗಳಾದ ಇಂದುಮತಿ ಏಕನಾಥ. ಗೀತಾ ಕುಲಕರ್ಣಿ. ಮರಿಯಪ್ಪ ಶರಣಮ್ಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.