ಅನಾರೋಗ್ಯದಿಂದ ಮೃತಪಟ್ಟ ಕುಟುಂಬಗಳಿಗೆ ಪರಿಹಾರ ಚೆಕ್ ವಿತರಣೆ

ವಿಜಯಪುರ, ಮೇ.20-ಅನಾರೋಗ್ಯದಿಂದ ಮೃತಪಟ್ಟ ಕುಟುಂಬಗಳಿಗೆ ಉಕ್ಕಲಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಕ್ಕಲಿ ಗ್ರಾಮದ ಈ ಮೊದಲು ಮೂರು ಕುಟುಂಬಗಳಿಗೆ ಸದ್ಯ ಮೂರು ಕುಟುಂಬಗಳಿಗೆ ಗ್ರಾಮ ಪಂಚಾಯತಿ ಅಡಿಯಲ್ಲಿ ಬರುವ ವರ್ಗ-1, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದವರಿಗೆ ಮೀಸಲಿಟ್ಟ ಅನುದಾನದಲ್ಲಿ ಪ್ರತಿ ಕುಟುಂಬಕ್ಕೆ 3000 ಸಾವಿರ ರೂಪಾಯಿಗಳನ್ನು ಕುಟುಂಬಗಳಿಗೆ ಸಾಂತ್ವನ ಹೇಳುವ ಮೂಲಕ ಪರಿಹಾರ ಚೆಕ್ಕ್ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಉಕ್ಕಲಿ ಗ್ರಾಮ ಪಂಚಾಯತಿ ಅದ್ಯಕ್ಷರಾದ ಶ್ರೀಮತಿ ಶಬನಮ ಲಾಲಸಾಬ ಪಾಂಡುಗೋಳ, ಉಪಾಧ್ಯಕ್ಷರಾದ ಮಹೇಶ ಬಾಳಪ್ಪ ಕಾಮಗೊಂಡ, ಅಭಿವೃದ್ದಿ ಅಧಿಕಾರಿ ಮಾರುತಿ ತಿಪ್ಪಣ್ಣ ಬಂಡಿವಡ್ಡರ ಈ ಸಂದರ್ಭದಲ್ಲಿ ನರೇಗಾದ ತಾಂತ್ರಿಕ ಸಹಾಯಕರಾದ ಸಂಗಮೇಶ ಬಿರಾದಾರ ಹಾಗೂ ಈಶ್ವರ ಬಸರಿಗಿಡದ ಉಪಸ್ಥಿತರಿದ್ದರು.
ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ಮೈತ ಕುಟುಂಬವನ್ನು ಉದ್ದೇಶಿಸಿ ಮಾತನಾಡಿದರು. ಮೃತ ಕುಟುಂಬಕ್ಕೆ ಸಾಂತ್ವನ ಹೇಳಿ ಗ್ರಾಮ ಪಂಚಾಯತಿಯಿಂದ ಬರುವ ವರ್ಗ-1ರಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ದವರಿಗೆ ಮೀಸಲಿರಿಸಿದ ಅನುದಾನದಲ್ಲಿ ಸಹಾಯಧನ ನೀಡುವ ಮೂಲಕ ಅಂತ್ಯ ಸಂಸ್ಕಾರಕ್ಕೆ ಸಹಾಯಧನ ನೀಡಿ ಅವರಿಗೆ ಸಾಂತ್ವಾನ ಹೇಳಿ ಆತ್ಮಸ್ಥೈರ್ಯವನ್ನು ತುಂಬಿದರು.
ಹಾಗೂ ಗ್ರಾಮ ಪಂಚಾಯತಿ ಅಭಿವೃದ್ದಿ ಅಧಿಕಾರಿಗಳು ಮಾರುತಿ ತಿಪ್ಪಣ್ಣ ಬಂಡಿವಡ್ಡರ ಅವರು ಕೂಡಾ ತಮ್ಮ ಸಾಂತ್ವನ ನುಡಿ ಹೇಳಿದರು.