ಅನಾಮಧೇಯ ಶವ ಪತ್ತೆ


ಸಂಜೆವಾಣಿ ವಾರ್ತೆ
ಮೊಳಕಾಲ್ಮೂರು,ಏ.28: ತಾಲೂಕಿನ ಬಿಜಿ ಕೆರೆ ಹೊಸಕೆರೆ ಬಿಡ್ಜ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದ ಅರಣ್ಯ ಪ್ರದೇಶದಲ್ಲಿ ಅಪರಿಚಿತ ಶವಯೊಂದು ಪತ್ತೆಯಾಗಿದೆ.
ನಿನ್ನೇ, ಬೆಳ್ಳಗಿನ ಹನ್ನೊಂದು ಗಂಟೆ ಸಮಯದಲ್ಲಿ ಸುಮಾರು  45 ರಿಂದ 50 ವರ್ಷ ವಯಸ್ಸುಳ್ಳ  5 ಅಡಿ 6ಇಂಚು  ಎತ್ತರ, ದಢೂತಿ ದೇಹವಿರುವ ಕಪ್ಪು ಮೈಬಣ್ಣದ ಪುರುಷನ ದೇಹ ಪತ್ತೆ ಯಾಗಿದೆ.  ಬಿಳಿ ಪಂಚೇಯಿಂದ ನೇಣು ಬಿಗಿದುಕೊಂಡಿದ್ದು. ನೀಲಿ ಬಣ್ಣದ ತುಂಬು ತೋಳಿನ ಶರ್ಟ್ ನೀಲಿ ಬಣ್ಣದ ನಿಕ್ಕರ್ ಧರಿಸಿರುತ್ತಾನೆ ಪಕ್ಕದ ಗಿಡವೊಂದಕ್ಕೆ ನೀಲಿ ಬಣ್ಣದ ಟಾವೆಲ್ ನೇತ್ತು ಹಾಕ್ಕಿದ್ದು ಶರ್ಟ್ ಕಾಲರ್ ಮೇಲೆ ಧರ್ಗಿ  ಟೈಲರ್ ಸಿಎಲ್ ಕೆ ಎಂದು ಇರುತ್ತದೆ.   ಆಗಲೇ ಕೊಳೆತ ಸ್ಥಿತಿ ಯಲಿ ನೇಣು ಬಿಗಿದುಕೊಂಡ ಸ್ಥಿತಿ ಯಲ್ಲಿರುತ್ತದೆ ಎಂದು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪಿಎಸ್ಐ ಪಾಂಡುರಂಗ ತಿಳಿಸಿರುತ್ತಾರೆ
 ಈ ವ್ಯಕ್ತಿಯ ಪರಿಚಯ ಯಾರಿಗಾದರೂ ಪತ್ತೆ ಯಾದಲ್ಲಿ ಮೊಳಕಾಲ್ಮೂರು ಪೋಲೀಸ್ ಠಾಣೆ ಪಿಎಸ್ಐ ಪಾಂಡುರಂಗ ರವರ 9480803161 ಮೊಬೈಲ್ ನಂಬರ್ ಗೆ ಕರೆ ಮಾಡಿ ತಿಳಿಸಲು ಕೋರಿದೆ.