ಅನಾಥ ಮಕ್ಕಳೊಂದಿಗೆ ಅಭಯ್ ಹುಟ್ಟುಹಬ್ಬ

” ಮನಸಾಗಿದೆ ” ಚಿತ್ರದ ನಾಯಕ ಅಭಯ್ ಅನಾಥಾಶ್ರಮದ ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಿರ್ಮಾಪಕ ಚಂದ್ರಶೇಖರ್ ಪುತ್ರ ಅಭಯ್ ರನ್ನು ಮನಸಾಗಿದೆ ಚಿತ್ರದ ಮೂಲಕ ನಾಯಕನಾಗಿ ಚಿತ್ರರಂಗಕ್ಕೆ ಪರಿಚಯಿಸುತ್ತಿದ್ದಾರೆ.
ಚಿತ್ರ ಬಿಡುಗಡೆಗೆ ಸಿದ್ದವಾಗಿದ್ದು ಚಿತ್ರಕ್ಕೆ ಸೆನ್ಸಾರ್ ಮಂಡಳಿ ಯು/ಎ ಪ್ರಮಾಣಪತ್ರ ನೀಡಿದೆ.
ಈಗಾಗಲೇ ನಾಗೇಂದ್ರ ಪ್ರಸಾದ್, ಕೆ.ಕಲ್ಯಾಣ್ ರಚನೆಯ ಹಾಡುಗಳು ೫ ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗುವ ಮೂಲಕ ವೈರಲ್ ಆಗಿವೆ. ಉಳಿದ ಎರಡು ಹಾಡುಗಳು ಇನ್ನೂ ಬಿಡುಗಡೆಯಾಗಬೇಕಿದೆ. ನಿರ್ಮಾಪಕರೇ ಕಥೆ ಬರೆದಿದ್ದು, ಶ್ರೀನಿವಾಸ ಶಿಡ್ಲಘಟ್ಟ ನಿರ್ದೇಶನ ಮಾಡಿದ್ದಾರೆ. ರಘು ನಿಡವಳ್ಳಿ ಸಂಭಾಷಣೆ ಬರೆದಿದ್ದಾರೆ. ಚಿತ್ರದಲ್ಲಿ ಮೇಘಶ್ರೀ ಹಾಗೂ ಅಥಿರಾ ಇಬ್ಬರು ನಾಯಕಿಯರು. ಸಾಮಾನ್ಯವಾಗಿ ಪ್ರೇಮಕಥೆಗಳಲ್ಲಿ ಜಾತಿ, ಅಂತಸ್ತು, ಶ್ರೀಮಂತಿಕೆ ಅಡ್ಡ ಬಂದರೆ, ಕಥೆಯಲ್ಲಿ ಮನುಷ್ಯತ್ವ ಅಡ್ಡ ಬರುತ್ತದೆ. ಮಾನಸ ಹೊಳ್ಳ ಸಂಗೀತ ನಿರ್ದೇಶನವಿರುವ ಚಿತ್ರದ ಹಾಡುಗಳಿಗೆ ನಾಗೇಂದ್ರ ಅರಸ್, ಕೆ.ಕಲ್ಯಾಣ್, ಕವಿರಾಜ್, ಅರಸು ಅಂತಾರೆ ಸಾಹಿತ್ಯ ರಚಿಸಿದ್ದಾರೆ.