ಅನಾಥ ನಿರ್ಗತಿಕರಿಗೆ ಜಲಚರ ಜೀವರಾಶಿಗಳಿಗೆ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ: ಸತೀಶ್ ಸುವರ್ಣ

ಸೇಡಂ,ಎ,02: ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಕೂಡ ಬಡವ ನಿರ್ಗತಿಕರಿಗೆ ಹಾಗೂ ಜಲಚರ ಜೀವಿಗಳಿಗೂ ಮತ್ತು ಐತಿಹಾಸಿಕ ದೇವಸ್ಥಾನಗಳ ಅಭಿವೃದ್ಧಿ ಜೊತೆಗೆ ಮಹಿಳೆಯರು ಸ್ವಾಭಿಮಾನದ ಬದುಕು ಕಟ್ಟಿಕೊಳ್ಳುವಲ್ಲಿ, ಹಾಗೂ ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿಯ ಕಾರ್ಯಗಳು ನಿರಂತರವಾಗಿ ಸಂಜೀವಿನಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಟ್ರಸ್ಟ್ ಕಲಬುರ್ಗಿ ಜಿಲ್ಲಾ ನಿರ್ದೇಶಕರಾದ ಸತೀಶ್ ಸುವರ್ಣ ಅಭಿಪ್ರಾಯಪಟ್ಟರು. ತಾಲೂಕಿನ ಸಂಗಾವಿ ಗ್ರಾಮದಲ್ಲಿರುವ ನಿರ್ಗತಿಕ ಮಹಿಳೆಯಾದ ಖಾಸಿಮ್ ಬಿ ಅವರು ಬಹು ವರ್ಷಗಳಿಂದ ಗುಡಿಸಲ ಮನೆಯಲ್ಲಿ ವಾಸಿಸಿರುವುದನ್ನು ಕಂಡು ತಾಲೂಕ ಧರ್ಮಸ್ಥಳ ಸಿಬ್ಬಂದಿ ವರ್ಗದವರು ಗುರುತಿಸಿ ಪರಮ ಪೂಜ್ಯ ಡಾ. ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತ್ತೃ ಶ್ರೀ ಡಾ.ಹೇಮಾವತಿ ಅಮ್ಮನವರ ಆಶಿರ್ವಾದೋಂದಿಗೆ ಮಹಿಳಾ ಜ್ಞಾನ ವಿಕಾಸ ಕಾರ್ಯಕ್ರಮದಡಿ ಅವರಿಗೆ ನೂತನ ವಾತ್ಸಲ್ಯ ಮನೆ ನಿರ್ಮಿಸಿ ಹಸ್ತಾಂತರಿಸಿ ಅವರು ಮಾತನಾಡಿದರು.
ಈ ವೇಳೆಯಲ್ಲಿ ಪರಮ ಪೂಜ್ಯ ಶ್ರೀ ಅಭಿನವ ಕಾರ್ತಿಕೇಶ್ವರ, ಮಳಖೇಡ ಟಿ ಎಸ್ ಐ ಮಹಿಂದ್ರ ಕುಮಾರ್, ಮಾತನಾಡಿದರು.ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿಸಿ ಟ್ರಸ್ಟ್ ,ಯೋಜನಾಧಿಕಾರಿ ಮಂಜುನಾಥ ಪ್ರಾಸ್ತಾವಿಕ ಮಾತನಾಡಿದರು.ಈ ವೇಳೆಯಲ್ಲಿ ಗ್ರಾಮದ ಮುಖಂಡರಾದ ಜಗನ್ನಾಥ್ ಹಾಗರಗಿ, ಸಂದೀಪ್ ಮಳಖೇಡ, ರಾಜು ಕಟ್ಟಿ, ನೀಲಕಂಠ, ಸುವರ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು