ಜಗಳೂರು.ಜೂ.೧೪:- ರಾಜ್ಯಸರಕಾರದ ಗ್ಯಾರಂಟಿ ಯೋಜನೆ ಗಳಿಗೆ ಫಲಾನುಭವಿಗಳಿಗೆ ಅಗತ್ಯ ದಾಖಲೆಗಳನ್ನು ನಿಗದಿತ ಸಮಯದಲ್ಲಿ ವಿತರಿಸಲು ಅಧಿಕಾರಿಗಳು ಮುಂದಾಗ ಬೇಕು ಎಂದು ಶಾಸಕ ಬಿ.ದೇವೇಂದ್ರಪ್ಪ ತಾಕೀತು ಮಾಡಿದರು.ತಾಲೂಕಿನ ಅಣಬೂರು,ಕ್ಯಾಸನೇಹಳ್ಳಿ,ಹನುಮಂತಾಪುರ, ಕೆಚ್ಚೇನಹಳ್ಳಿ ಗ್ರಾಮಪಂಚಾಯಿತಿ ಕೇಂದ್ರಗಳಲ್ಲಿ ಮತದಾರರಿಗೆ ಕೃತಜ್ಞತೆ ಹಾಗೂ ನೂತನ ಶಾಸಕ ಬಿ.ದೆವೇಂದ್ರಪ್ಪ ಅವರಿಗೆ ಅಬಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.ನನಗೆ ಶಾಸಕನಾಗಿ ಆಯ್ಕೆಯಾಗಲು ಬೆಂಬಲಿಸಿದ ಪ್ರತಿಯೊಬ್ಬ ಮತದಾರರಿಗೆ ಕೃತಜ್ಞತೆಗಳು.ನಾನು ಜಾತ್ಯಾತೀತ ಆಡಳಿತ ಹಾಗೂ ಕ್ಷೇತ್ರದ ಅಭಿವೃದ್ದಿಗೆ ಬದ್ದನಾಗಿರುವೆ. ಶೇ. 40 ಪರ್ಸಂಟೇಜ್ ಬಿಜೆಪಿ ಸರಕಾರದ ಆಡಳಿತಾವಧಿಯಲ್ಲಿ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮಹತ್ತರ ಕೊಡುಗೆಯಾಗಿರುವ ಮನರೇಗಾ ಯೋಜನೆಯ ಡಿ ಕಾಮಗಾರಿಗಳು ಸಮರ್ಪಕ ಜಾರಿಗೊಂಡಿಲ್ಲ.ನಮ್ಮ 5 ವರ್ಷದ ಆಡಳಿತಾವಧಿಯಲ್ಲಿ ಕೂಲಿ ಕಾರ್ಮಿಕರಿಗೆ ವರದಾನವಾಗಿರುವ ಉದ್ಯೋಗಖಾತ್ರಿ ಕೆಲಸ ನೀಡುತ್ತೇವೆ.ಅಲ್ಲದೆ ರಾಜ್ಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ ಯಂತೆ 5 ವರ್ಷಕ್ಕೆ 20 ಲಕ್ಷ ಸೂರು ಕಲ್ಪಿಸಲಾಗುವುದು ಕ್ಷೇತ್ರದಲ್ಲಿಯೂ ಅರ್ಹ ಫಲಾನುಭವಿಗಳಿಗೆ ನೀಡಲಾಗುವುದು ಎಂದರು.ಕ್ಷೇತ್ರದಲ್ಲಿ ಅನಾಥ ನಿಧಿ ಸಂಗ್ರಹಣೆಗೆ ಸಂಕಲ್ಪಗೈದಿದ್ದು.ಶೀಘ್ರದಲ್ಲೇ ಸಮಾಲೋಚನೆ ನಡೆಸುವೆ.ನಾನು ₹50000 ಮೊದಲು ನಿಧಿಗೆ ನನ್ನ ಸಂಬಳದಿಂದ ಹಾಕುವೆ. ರಾಜಕೀಯೇತರವಾಗಿ ಸಂಗ್ರಹಣೆ ಮಾಡುವೆ.ನಂತರ ಬಡಜನರ ಚಿಕಿತ್ಸೆಗೆ ಅನಾಥರಿಗೆ ಶಿಕ್ಷಣ,ಇತರೆ ಸೌಲಭ್ಯಕ್ಕಾಗಿ ಸಹಾಯಸ್ತ ಚಾಚಲಾಗುವುದು ಎಂದು ತಿಳಿಸಿದರು.ಮಾಜಿ ಶಾಸಕ ಎಚ್.ಪಿ.ರಾಜೇಶ್ ಅವರು ನಮ್ಮ ಕಾಂಂಗ್ರೆಸ್ ಪಕ್ಷದಲ್ಲಿ ಇದ್ದರೆ ಇದೀಗ ಜೋಡೆತ್ತಿನ ಜೊತೆ ಸವಾರಿ ಮಾಡುತ್ತಿದ್ದ ರು.ಕಾಂಗ್ರೆಸ್ ಪಕ್ಷದ ಕೆಲ ಕಾರ್ಯಕರ್ತರ ಮಾತು ಕೇಳಿ ಪಕ್ಷ ತೊರೆದು ಸ್ಪರ್ಧಿಸಿ ಸೋಲು ಅನುಭವಿಸಿದ್ದು ನನಗೆ ತುಂಬಾ ನೋವು ಉಂಟುಮಾಡಿದೆ.ಪಕ್ಷ ಮುಖ್ಯ ವ್ಯಕ್ತಿಮುಖ್ಯವಲ್ಲ ಮನ ಸಾಕ್ಷಿಯಿಂದ ಕಾರ್ಯಕರ್ತರು ಪಕ್ಷಕ್ಕೆ ಶ್ರಮಿಸಬೇಕು ಎಂದರು.ಕೆಪಿಸಿಸಿ ಎಸ್ ಟಿ ಘಟಕದ ರಾಜ್ಯಾಧ್ಯಕ್ಷ ಕೆಪಿ ಪಾಲಯ್ಯ,ಕೆಪಿಸಿಸಿ ಉಸ್ತುವಾರಿ ಕಲ್ಲೇಶ್ ರಾಜ್ ಪಟೇಲ್ ಮಾತನಾಡಿದರು.ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಷಂಷೀರ್ ಅಹಮ್ಮದ್, ಪಲ್ಲಾಗಟ್ಟೆ ಶೇಖರಪ್ಪ,ಸಿ.ತಿಪ್ಪೇಸ್ವಾಮಿ,ಗ್ರಾ.ಪಂ ಅಧ್ಯಕ್ಷೆ ಕವಿತಾ ರೇಣುಕೇಶ್. ಉಪಾಧ್ಯಕ್ಷ ಸಣ್ಣ ನಾಗಮ್ಮ, ಗೋಗುದ್ದು ಗ್ರಾಮ ಪಂಚಾಯತಿ ಸದಸ್ಯರಾದ ದೇವಿರಮ್ಮ ಶಿವಣ್ಣ. ಸೋಮಶೇಖರ್ ಕ್ಯಾಸೇನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ ನಾಗರಾಜ್ ಅಣ ಬೂರು ವಿಎಸ್ಎಸ್ಎನ್ ಕಾರ್ಯದರ್ಶಿ ಮಂಜಣ್ಣ ಹಾಗೂ ಕಾರ್ಯಕರ್ತರು ಇದ್ದರು.