ಅನಾಥ ಆಶ್ರಮದಲ್ಲಿ ಚಿರಾಗ್ ಪಾಸ್ವಾನ್ ಹುಟ್ಟುಹಬ್ಬ ಆಚರಣೆ

ರಾಯಚೂರು.ನ.೦೨- ಲೋಕ ಜನಶಕ್ತಿ ಪಕ್ಷದ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಚಿರಾಗ್ ಪಾಸ್ವಾನ್ ಅವರ ೪೯ ನೇ ಹುಟ್ಟುಹಬ್ಬವನ್ನು ಜಿಲ್ಲಾಧ್ಯಕ್ಷ ಜಿ. ಗೋಪಾಲರೆಡ್ಡಿ ಅವರ ನೇತೃತ್ವದಲ್ಲಿ ನಗರದ ಹೈದ್ರಾಬಾದ್ ರಸ್ತೆಯಲ್ಲಿ ಇರುವ ಕನಕದಾಸ ಅನಾಥ ಆಶ್ರಮದ ಮಕ್ಳಳೊಂದಿಗೆ ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಕನಕದಾಸ ಅನಾಥ ಆಶ್ರಮದ ಮಕ್ಕಳಿಗೆ ಹಣ್ಣು ಹಂಪಲು ವಿತರಿಸಿ ಅರ್ಥಪೂರ್ಣವಾಗಿ ಹುಟ್ಟುಹಬ್ಬ ಆಚರಣೆ ಮಾಡಲಾಯಿತು. ಲೋಕ ಜನಶಕ್ತಿ ಜಿಲ್ಲಾಧ್ಯಕ್ಷ ಜಿ.ಗೋಪಲರೆಡ್ಡಿ ಮಾತನಾಡುತ್ತಾ, ಸರಳ ಸಜ್ಜಿನಿಕೆಯ ಬಡವರ ಆಶಾಕಿರಣ ಚಿರಾಗ್ ಪಾಶ್ವನ್ ಅವರ ಸಾಮಾಜಿಕ ಕಾರ್ಯ ನಮಗೆ ಆದರ್ಶ. ಸಾಮಾಜಿಕ ಕಾಳಜಿ ಮೂಲಕ ನಿರಂತರ ಬಡ ಜನರ ದ್ವನಿಯಾಗಿ ಕಾರ್ಯ ನಿರ್ವಹಿಸಲಿ ಎಂದರು. ಚಿರಾಗ್ ಪಾಶ್ವನ್ ಅವರು ನೂರು ವರ್ಷ ಸುಖ ಶಾಂತಿ ನೆಮ್ಮದಿಯಿಂದ ಜೀವನ ಸಾಗಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಜಿ.ಎಲ್.ರಂಗಪ್ಪ ವಕೀಲರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಎಸ್ಸಿ ಎಸ್ಟಿ ಗ್ರಾಮಾಂತರ ಅಧ್ಯಕ್ಷ ಹಂಪಯ್ಯ ಚಿಕ್ಕಸೂಗೂರು, ತಿಮ್ಮಪ್ಪ ಸ್ವಾಮಿ ಸೇರಿದಂತೆ ಉಪಸ್ಥಿತರಿದ್ದರು.