ಅನಾಥವಾಗಿ ಬಿದ್ದಿದ್ದ ಬ್ಯಾಗ್ ಗಳು: ಡಾಗ್ ಸ್ಕ್ವಾಡ್ ಪರಿಶೀಲನೆ

ವಿಜಯಪುರ, ಫೆ.22:ಕಳೆದ ಎರಡು ದಿನಗಳಿಂದ ಬ್ಯಾಗ್ ಗಳು ಅನಾಥವಾಗಿ ಬಿದ್ದಿದ್ದರಿಂದ ನಾಗರಿಕರು ಆತಂಕಕ್ಕೀಡಾದ ಘಟನೆ ನಗರದ ಮರಾಠಿ ವಿದ್ಯಾಲಯ ಬಳಿ ದರಬಾರ ಗಲ್ಲಿಯಲ್ಲಿ ನಡೆದಿದೆ.
ಸ್ಥಳೀಯರು ಭಯಭೀತರಾಗಿ ಬ್ಯಾಗ್ ಇಟ್ಟಿರುವ ಕಡೆಗೆ ಯಾರೂ ಸುಳಿದಿರಲಿಲ್ಲ. ಅಲ್ಲಿನ ಜನ ಬ್ಯಾಗ್ ನಲ್ಲಿ ಬಾಂಬ್ ಇದೆಯೋ ಏನೋ ಎಂದು ಗಾಬರಿ ಕೂಡಾ ಆಗಿದ್ದರು.
ಸುದ್ದಿ ತಿಳಿದ ತಕ್ಷಣ ಬಾಂಬ್ ನಿಷ್ಕ್ರಿಯ ದಳ ಹಾಗೂ ಗೋಳಗುಮ್ಮಟ ಪೆÇಲೀಸರು ಸ್ಥಳಕ್ಕೆ ದೌಡಾಯಿಸಿ ಶ್ವಾನ ಸಮೇತ ಪರಿಶೀಲನೆ ನಡೆಸಿದರು.
ನಾಲ್ಕು ಬ್ಯಾಗ್ ಗಳಲ್ಲಿ ಪರಿಶೀಲನೆ ನಡೆಸಿದ ನಂತರ ಎರಡು ಬ್ಯಾಗ್ ಗಳಲ್ಲಿ ನೋಟ್ ಬಕ್ ಗಳು, ಬಟ್ಟೆ ಬರೆ ಪತ್ತೆಯಾದವು. ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಲಿಲ್ಲ. ಇದರಿಂದಾಗಿ ಸ್ಥಳೀಯರ ಆತಂಕಕ್ಕೆ ತೆರೆ ಬಿದ್ದಿದೆ.
ಗೋಳಗುಮ್ಮಟ ಪೆÇಲೀಸ್ ಠಾಣೆ ಎಎಸ್ ಐ ಎನ್.ವಿ. ರಾಠೋಡ, ಹೆಡ್ ಕಾನ್ಸಸ್ಟೇಬಲ್ ಕೆ.ಬಿ. ಹುನ್ನೂರ, ಬಾಂಬ್ ನಿಷ್ಕ್ರಿಯ ದಳದ ಎಎಸ್ ಐ ಪ್ರಕಾಶ ದೊಡಮನಿ, ಸಿಬ್ಬಂದಿ ಪುಂಡಲೀಕ ಕೊಣ್ಣೂರ, ಮಲ್ಲಿಕಾರ್ಜುನ ಮುದಕವಿ, ನಾಗಪ್ಪ ಬೊಮ್ಮನಹಳ್ಳಿ ಮತ್ತಿತರರು ಇದ್ದರು.