ಅನಾಥರೊಂದಿಗೆ ಹುಟ್ಟುಹಬ್ಬ ಆಚರಣೆ

ಕೊಟ್ಟೂರು ಮಾ 24: ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಳ್ಳುವ ಬದಲು ಇಂತಹ ಸಂಭ್ರಮಕ್ಕೆ ಖರ್ಚು ಮಾಡುವ ಹಣದಲ್ಲಿ ವೃದ್ಧರಿಗೆ, ಅನಾಥರಿಗೆ, ಬಡವರಿಗೆ, ಕೈಲಾದ ಊಟ, ಬಟ್ಟೆಗಳನ್ನು ದಾನ ಮಾಡುವ ಮೂಲಕ ಜನ್ಮದಿನಾಚರಣೆ ಆಚರಿಸಿಕೊಂಡರೆ ನಿಜವಾದ ಆತ್ಮ ತೃಪ್ತಿ ಮತ್ತು ಸಂತಸ ಸಿಗುತ್ತದೆ ಎಂದು ಮುತ್ತೂಟ್ ಬ್ಯಾಂಕ ವ್ಯವಸ್ಥಾಪಕ ಕೆ.ರಾಘವೇಂದ್ರ ಹೇಳಿದರು. ಪಟ್ಟಣದ ಉತ್ತಂಗಿ ರುದ್ರಮ್ಮ ಅನಾಥರ ವೃದ್ಧಾಶ್ರಮದಲ್ಲಿ ತಮ್ಮಸುಪುತ್ರ ಶ್ರೀತನ್ 1ನೇ ಹುಟ್ಟುಹಬ್ಬದ ವಿಭಿನ್ನವಾಗಿ ಆಚರಿಸಿದರು. ನಿಬ್ಗೂರು ಕೊಟ್ರೇಶ, ರುದ್ರಮ್ಮ ಸೇರಿದಂತೆ ಆನೇಕರಿದ್ದರು.