ಅನಾಥರಿಗೆ ವೃದ್ಧರಿಗೆ ಸಾಕುವುದು ಮಹತ್ವದ ಕೆಲಸ

ಹಿರಿಯೂರು.ಜ.3: ಅನಾಥರಿಗೆ ಮತ್ತು ವೃದ್ಧರಿಗೆ  ಸಾಕುವುದು ತುಂಬಾ ಮಹತ್ವದ ಕೆಲಸ ಎಂದು ನಗರಸಭೆ ಸದಸ್ಯೆ ಶಿವರಂಜನಿ ಹೇಳಿದರು. ಇಲ್ಲಿನ ಕೆ.ಎಂ.ಕೊಟ್ಟಿಗೆ ಶ್ರೀ ಕಣಿವೆ ಮಾರಿಕಾಂಬ ಟ್ರಸ್ಟ್ ವತಿಯಿಂದ ಅನಾಥ ಮಕ್ಕಳಿಗೆ ಪುಸ್ತಕ ಪೆನ್ನು ವಿತರಿಸಿ  ಅವರು ಮಾತನಾಡಿದರು. ನಗರಸಭೆ ಸದಸ್ಯೆ ಅಂಬಿಕಾ ಆರಾಧ್ಯ ಮಾತನಾಡಿ ಶ್ರೀ ಕಣಿವೆ ಮಾರಿಕಾಂಬ ಟ್ರಸ್ಟ್ ನವರು ಉತ್ತಮ ಕೆಲಸ ಮಾಡುತ್ತಿದ್ದು ಶ್ಲಾಘನೀಯ ಕಾರ್ಯ ಎಂದರು. ಮಕ್ಕಳಿಗೆ ಆಯೋಜಿಸಿದ್ದ ವಿವಿಧ ಸ್ಪರ್ದೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಚಿತ್ರದುರ್ಗ ಜಿಲ್ಲಾ ಅರೆ ಅಲೆಮಾರಿ ಸಂಘದ ಅಧ್ಯಕ್ಷರಾದ ಕೆ.ಎಂ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸಿದರು. ಜಿಲ್ಲಾ ಸಂಘದ ಗೌರವ ಅಧ್ಯಕ್ಷ ರಂಗಪ್ಪ, ಈಶ್ವರಪ್ಪ, ಟ್ರಸ್ಟ್ ಅಧ್ಯಕ್ಷರಾದ ಕೃಷ್ಣಪ್ಪ, ಗುರುಮೂರ್ತಿ, ಚಂದ್ರಶೇಖರ್, ಮೋಹನ್, ರಂಗನಾಥ್,ರವಿಕುಮಾರ್, ಗೀತಾ, ಅಂಬಿಕಾ, ರಂಜಿತ, ವಸಂತಕುಮಾರ್, ಪಾಲ್ಗೊಂಡಿದ್ದರು.