ಅನಾಥರಿಗೆ ದಿನಸಿ ಕಿಟ್ ವಿತರಣೆ

ಬೀದರ:ಜ.11: ವಿಕ್ಟರಿ ವರ್ಷಿಪ್ ಸೆಂಟರ್ ಶೆಂಬೆಳ್ಳಿ ವತಿಯಿಂದ ಹೊಸ ವರ್ಷದ ನಿಮಿತ್ತ ನಗರದ ಜ್ಯೋತಿಭಾ ಫುಲೆ ವೃದ್ಧಾಶ್ರಮದಲ್ಲಿ ಆಹಾರ, ಬಟ್ಟೆಗಳನ್ನು ವಿತರಣೆ ಮಾಡಲಾಯಿತು. ಆಶ್ರಮದ ಅನಾಥರಿಗೆ ಹಾಗೂ ಬೀದಿ ಭೀಕ್ಷಕರಿಗೆ ದಿನಸಿ ಕಿಟ್, ಹಣ್ಣು, ಬಟ್ಟೆ ಗಳನ್ನು ವಿತರಣೆ ಮಾಡಲಾಯಿತು.
ಪಾಸ್ಟಾರ್ ರಜನಿಕಾಂತ್ ಮಾತನಾಡಿ, ವಿವಿಧ ಕಾರ್ಯಕ್ರಮ ನಿಮಿತ್ತ ದುಂದು ವೆಚ್ಚ ಮಾಡದೆ ಸಮಾಜದಲ್ಲಿರುವ ಅನಾಥ, ಬಡವರಿಗೆ ಸಹಾಯಕ್ಕೆ ಬರುವ ಕೆಲಸ ಮಾಡಬೇಕು. ಇಂಥ ಸಾಮಾಜಿಕ ಕೆಲಸಗಳನ್ನು ಪ್ರತಿಯೊಬ್ಬರು ಮಾಡಬೇಕು ಎಂದು ಹೇಳಿದರು.
ಪ್ರಮುಖರಾದ ಹನಮಂತ ಮಡಿಕೆ, ಜಾಜ್೯ ಬುಷ್, ರವೀಂದ್ರ, ದೇವರಾಜ, ವಿಜಯ, ಪ್ರಶಾಂತ, ಶ್ಯಾಮ, ಅಬ್ರಹಾಂ, ಸುಧೀರ ಇತರರಿದ್ದರು.