
ಸಂಜೆವಾಣಿ ವಾರ್ತೆ
ಕೂಡ್ಲಿಗಿ. ಆ.27 :- ಬಹಳಷ್ಟು ಅನಾಥರ ಪಾಲಿನ ಜೀವನಕ್ಕೆ ಮದರ್ ಥೆರೇಸಾ ಬೆಳಕಾದರೆ,ಸುಮಾರು 23ಸಾವಿರಕ್ಕೂ ಹೆಚ್ಚು ಕಣ್ಣಿನ ಶಸ್ತ್ರ ಚಿಕಿತ್ಸೆ ಮಾಡುವ ಮೂಲಕ ಅನೇಕ ಅಂಧರ ಪಾಲಿಗೆ ಬೆಳಕಿನ ದಾರಿ ತೋರಿಸಿದ ಕಣ್ಣಿನ ತಜ್ಞ ಡಾ ಶ್ರೀನಿವಾಸ ಹಾಲಿ ಕೂಡ್ಲಿಗಿ ಕ್ಷೇತ್ರದ ಶಾಸಕರಾಗಿದ್ದರೂ ಎಲ್ಲಿಯೂ ಹುಟ್ಟುಹಬ್ಬದ ಆಚರಣೆಯನ್ನು ಆಚರಿಸದೇ ಸರಳತೆ ಮೆರೆದು ಎಲ್ಲರಿಗೂ ಮಾದರಿಯಾಗಿದ್ದಾರೆಂದು ಎಂದು ಡಾ ಶ್ರೀನಿವಾಸ ಅಭಿಮಾನಿಬಳಗದ ಕಂಪ್ಲಿ ಅಮೀರ್ ಹಮ್ಜಾ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ಪಟ್ಟಣದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆ (ಮೇನ್ ಬಾಯ್ಸ್ ಸ್ಕೂಲ್ )ಯಲ್ಲಿ ತಂದೆ ಮಾಜಿ ಶಾಸಕ ಎನ್ ಟಿ ಬೊಮ್ಮಣ್ಣ ಅವರಂತೆ ಶಿಕ್ಷಣ ಪ್ರೇಮಿಯಾಗಿರುವ ಡಾ ಶ್ರೀನಿವಾಸ ಎನ್ ಟಿ ಅವರ ಹುಟ್ಟುಹಬ್ಬದ ದಿನವಾದ ನಿನ್ನೆ ಕ್ಷೇತ್ರದಲ್ಲಿ ತನ್ನ ಹುಟ್ಟುಹಬ್ಬಕ್ಕೆ ಎಲ್ಲಿಯೂ ಫ್ಲಾಕ್ಸಿ ಹಾಗೂ ಬ್ಯಾನರ್ ಹಾಕಿ ದುಂದು ವೆಚ್ಚ ಮಾಡಬೇಡಿ ಎಂದು ಅಭಿಮಾನಿಗಳಿಗೆ ಹೇಳಿದ್ದರಿಂದ ಅಭಿಮಾನಿ ಬಳಗ ಶಾಲಾ ಮಕ್ಕಳಿಗೆ ಪುಸ್ತಕ ಪೆನ್ನು ವಿತರಣೆ, ಗ್ರಾಮದಲ್ಲಿ ಸ್ವಚ್ಛತೆ ಮಾಡಿ ವೃದ್ಧರಿಗೆ ಹಾಲು ಬ್ರೆಡ್ ವಿತರಿಸಿ ಕೂಡ್ಲಿಗಿ ಶಾಸಕ ಡಾ ಶ್ರೀನಿವಾಸ ಅವರ ಹುಟ್ಟುಹಬ್ಬವನ್ನು ಸರಳವಾಗಿ ಹಾಗೂ ಮಾದರಿಯಾಗಿ ಆಚರಿಸಲಾಗಿದೆ ಎಂದು ತಿಳಿಸಿದರು.
ಶಾಸಕರ ಆಶಯದಂತೆ ಕ್ಷೇತ್ರದ ಅಭಿಮಾನಿ ಬಳಗ ಯಾವುದೇ ಬ್ಯಾನರ್ ಹಾಗೂ ಫ್ಲಾಕ್ಸಿ ಹಾಕದಂತೆ ದುಂದುವೆಚ್ಚ ಮಾಡದೆ ಆ ಹಣವನ್ನು ವಿದ್ಯಾಭ್ಯಾಸ ಮಾಡುವ ಬಡಮಕ್ಕಳಿಗೆ ಉಪಯೋಗವಾಗುವಂತೆ ಒಂದನೇ ತರಗತಿಯಿಂದ ಏಳನೇ ತರಗತಿ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಪೆನ್ನು, ಪೆನ್ಸಿಲ್, ಕಂಪಾಸ್, ಸ್ಲೇಟ್ ವಿತರಿಸಿ ಸಿಹಿ ಹಂಚುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ಆಚರಿಸಿದ್ದಾರೆ.
ಈ ಸಂದರ್ಭದಲ್ಲಿ ಬಿ.ವೆಂಕಣ್ಣ ಕಾಟೇರ್ ಲಂಕೇಶ್, ಸರ್ಮಸ್ ಹುಸೇನ್ (ಬಾಬು) ರಾಮದುರ್ಗ,ಬದ್ದಕಟ್ಟೆ ರಿಯಾಜ್ ಅಹಮದ್, ಮಾಬು ಸುಬಾನಿ, ಟಿ ಓ ನರಸಿಂಹ, ಗೋಮಾಲರ್ ಮಾರುತಿ, ಟಿ. ಜಾವಿದ್, ತಲಾಸ್ ಶ್ರೀನಿವಾಸ್ ಇತರರು ಶಾಸಕರ ಹುಟ್ಟುಹಬ್ಬದ ಆಚರಣೆಯಲ್ಲಿ ಭಾಗವಹಿಸಿದ ಅಭಿಮಾನಿಬಳಗದವರಾಗಿದ್ದಾರೆ.
ಅದೇ ರೀತಿಯಾಗಿ ಶಾಸಕ ಡಾ ಶ್ರೀನಿವಾಸ ಹುಟ್ಟುಹಬ್ಬವನ್ನು ಕೂಡ್ಲಿಗಿ ಬ್ಲಾಕ್ ಕಾಂಗ್ರೆಸ್, ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಪದಾಧಿಕಾರಿಗಳು ಹಾಗೂ ಶಾಸಕರ ಅಭಿಮಾನಿ ಬಳಗ ಸೇರಿ ಪ್ರವಾಸಿ ಮಂದಿರದಲ್ಲಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಗುರುಸಿದ್ದನಗೌಡ, ಕಾವಲ್ಲಿ ಶಿವಪ್ಪನಾಯಕ, ಇತರರು ಕೇಕ್ ಕತ್ತರಿಸಿ ಸಂಭ್ರಮಿಸಿದರೆ , ಅಸಂಘಟಿತ ಕಾರ್ಮಿಕ ಕಾಂಗ್ರೆಸ್ ಪದಾಧಿಕಾರಿಗಳು ಪಟ್ಟಣದ ಪುನಃಚೇತನ ವೃದ್ದಾಶ್ರಮದಲ್ಲಿ ವೃದ್ಧರಿಗೆ ಹಾಲು ಬ್ರೆಡ್ ವಿತರಿಸಿದರು, ಮತ್ತು ಕರಡಿಹಳ್ಳಿಯಲ್ಲಿ ಅಭಿಮಾನಿ ಬಳಗ ಗ್ರಾಮದಲ್ಲಿ ಚರಂಡಿ ಹಾಗೂ ಗ್ರಾಮವನ್ನು ಸ್ವಚ್ಛಗೊಳಿಸುವ ಮೂಲಕ ಶಾಸಕರ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರೆ ಕೆರೆಕಾವಲರಹಟ್ಟಿಯ ರಾಘವೇಂದ್ರ ಹಾಗೂ ಇತರರು ಶ್ರೀ ಮಂಜುನಾಥ ಹಾಗೂ ಕುಕ್ಕೆ ಸುಬ್ರoಮಣ್ಯ ದೇವರ ದರ್ಶನಕ್ಕೆ ತೆರಳಿ ಶಾಸಕರ ಆರೋಗ್ಯ ಆಯುಷ್ಯ ಕ್ಷೇತ್ರದ ಅಭಿವೃದ್ಧಿಗೆ ಕರುಣಿಸುವಂತೆ ಪ್ರಾರ್ಥನೆ ಸಲ್ಲಿಸಿದ್ದಾರೆಂದು ತಿಳಿದಿದೆ. ಇಂತಹ ಕಲಿಗಾಲದಲ್ಲಿ ಮೋಜು ಮಸ್ತಿಗೆ ಹೆಚ್ಚು ಮುಂದಾಗುವ ದಿನಗಳಲ್ಲಿ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಹಣವಿದ್ದರೂ ಅಬ್ಬರ ತೋರಿಸದೆ ಹಾಗೂ ಮಳೆ ಇಲ್ಲದೆ ಕ್ಷೇತ್ರದಲ್ಲಿ ಬರದ ಛಾಯೆ ಮೂಡುತ್ತಿರುವ ದಿನದಲ್ಲಿ ಶಾಸಕರ ಸರಳ ನಡೆಯನ್ನು ಕ್ಷೇತ್ರದ ಜನತೆ ಮೆಚ್ಚಿದ್ದಾರೆಂದು ಹೇಳಬಹುದಾಗಿದೆ.