ಅನಾಥನ ಜೀವರಕ್ಷಣೆಗೆ ಆಶ್ರಮ ಸೇರಿಸಿದ ಕೂಡ್ಲಿಗಿ ಆರಕ್ಷಕರು.

ಕೂಡ್ಲಿಗಿ.ಸೆ.13 :- ಎಲ್ಲಾ ಇದ್ದವರು ಬೆಚ್ಚನೆಯ ಜೀವನ ಸಾಗಿಸುತ್ತಿರುವಾಗ ಬುದ್ದಿಮಾಂದ್ಯರ  ಜೀವನ ಕಷ್ಟಕರವಾಗಿದ್ದು ಒಪ್ಪತ್ತಿನ ಊಟಕ್ಕಾಗಿ ಅಲ್ಲಿಲ್ಲಿ ಓಡಾಡುವಾಗ ವಾಹನಗಳ ಸಂಚಾರದಲ್ಲಿ ಯಾವುದೇ ಅಪಘಾತವಾಗಬಾರದೆಂದು ಅವರ ಜೀವರಕ್ಷಣೆ ಅರಿತ ಕೂಡ್ಲಿಗಿ ಆರಕ್ಷಕರಾದ ಕೂಡ್ಲಿಗಿ ಸಿಪಿಐ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿ ಸೇರಿ ಕೂಡ್ಲಿಗಿ ಪಟ್ಟಣದಲ್ಲಿ ಸುತ್ತಾಡುತ್ತಿದ್ದ ಅರೆ ಬುದ್ದಿಮಾಂದ್ಯ ಮಾತು ಬಾರದ ಅನಾಮಧೇಯನನ್ನು ಸಿಂಧನೂರಿನ ಕಾರುಣ್ಯ ಎಂಬ ಆಶ್ರಮಕ್ಕೆ ಹೊಸಬಟ್ಟೆ ತೊಡಿಸಿ ಕಳುಹಿಸಿದ ಕರುಣಾಜನಕ ಮಾನವೀಯ ಜನಸ್ನೇಹಿ ಪೊಲೀಸರು ಎಂದು ತೋರಿಸಿರುವ ಘಟನೆ ಭಾನುವಾರ ಮಧ್ಯಾಹ್ನ ಜರುಗಿದೆ.  ಪೊಲೀಸರು ಬರೀ ಲಾಠಿ ಹಿಡಿದು ಹೊಡೆದು ಬಡಿಯುವ ಕೆಲಸವಲ್ಲ ಅವರು ತಮ್ಮ ಪ್ರಾಣ ಲೆಕ್ಕಿಸದೆ ಮತ್ತೊಬ್ಬರ ಪ್ರಾಣ ರಕ್ಷಣೆ ಮಾಡುತ್ತಾರೆಂಬುವುದಕ್ಕೆ ಕೊರೋನಾ ಮಹಾಮಾರಿಯ ತಾಂಡವದಲ್ಲಿ ಜನರನ್ನು ರಕ್ಷಿಸಿದ ಘಟನೆ ಎಲ್ಲರಿಗೂ ತಿಳಿದಿದೆ ಅದರಂತೆ ತಮ್ಮ ಕರ್ತವ್ಯಕ್ಕೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕೂಡ್ಲಿಗಿ ಪಟ್ಟಣದಲ್ಲಿ ತಿರುಗಾಡುತ್ತಿರುವ ಬುದ್ದಿಮಾಂದ್ಯರನ್ನು ಅವರ ಸಂಬಂಧಿಕರಿದ್ದರೆ ಅವರ ಸುಪರ್ದಿಗೆ ಕಳಿಹಿಸುವುದು ಇಲ್ಲವಾದರೆ ಆಶ್ರಮಕ್ಕೆ ಕಳುಹಿಸುವ ತೀರ್ಮಾನಕ್ಕೆ ಕೂಡ್ಲಿಗಿ ಆರಕ್ಷಕ ಪಡೆ ಮುಂದಾಗಿದೆ ಕೆಲದಿನಗಳ ಹಿಂದಷ್ಟೇ ಅರೇ ಹುಚ್ಚಿಯಂತೆ ಪಟ್ಟಣದಲ್ಲಿ ತಿರುಗುತ್ತಿದ್ದ ಮಹಿಳೆಯನ್ನು ಯಾರು ಯಾವ ಊರು ಎಂದು ತಿಳಿದು ಅವರ ಸಂಬಂಧಿಕರನ್ನು ಕರೆಹಿಸಿ ಅವಳನ್ನು ಅವರಿಗೆ ಕೂಡ್ಲಿಗಿ ಸಿಪಿಐ ಹಾಗೂ ಪಿಎಸ್ಐ ಮತ್ತು ಸಿಬ್ಬಂದಿಯವರು ಕೂಡ್ಲಿಗಿ ಡಿವೈಎಸ್ ಪಿ ಮಾರ್ಗದರ್ಶನದಲ್ಲಿ ಕಳುಹಿಸಿದ್ದರು ಅದರಂತೆ ನಿನ್ನೆ ಮಧ್ಯಾಹ್ನ ಸಹ ಮಾತು ಬಾರದ ಅರೇ ಬುದ್ದಿಮಾಂದ್ಯ ವ್ಯಕ್ತಿಯನ್ನು ಸಿಂಧನೂರು ಕಾರುಣ್ಯ ಆಶ್ರಮಕ್ಕೆ ಸೇರಿಸಿ ಅವನ ಜೀವರಕ್ಷಣೆ ಜೊತೆಗೆ ಆರೋಗ್ಯ ಊಟಕ್ಕೂ ಯಾವುದೇ ಕೊರತೆ ಕಾಣದಂತೆ ನೆಲೆಕಾಣಿಸಿದ ಮಾನವೀಯ ಜನಸ್ನೇಹಿ ಆರಕ್ಷಕ ಪಡೆ ಕೂಡ್ಲಿಗಿಯಲ್ಲಿರುವುದು ಸಂತಸ ತಂದಿದೆ ಎಂದು ಕೂಡ್ಲಿಗಿ ಜನತೆ ಪೊಲೀಸರ ಕಾರ್ಯವನ್ನು ಶ್ಲಾಘಿಸಿದ್ದಾರೆ. ಈ ಸಂದರ್ಭದಲ್ಲಿ ಕೂಡ್ಲಿಗಿ ಪಿಎಸ್ಐ ಶರತಕುಮಾರ, ಸಿಬ್ಬಂದಿ ಮತ್ತು ಪಟ್ಟಣದ ಕಾವಲ್ಲಿ ಶಿವಪ್ಪನಾಯಕ, ವಾಲ್ಮೀಕಿ ಮಹಾಸಭಾದ ಅಧ್ಯಕ್ಷ ಎಸ್. ಸುರೇಶ, ಪ್ರಭಾಕರ ಹಾಗೂ ಕಾರುಣ್ಯ ಆಶ್ರಮದ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.                    

ಇತ್ತೀಚಿಗೆ ಕಳೆದೆರಡು ದಿನದ ಹಿಂದೆ ಕೂಡ್ಲಿಗಿ ಹೊರವಲಯದ ಹೈವೇ 50ರಲ್ಲಿ ಬುದ್ದಿಮಾಂದ್ಯನೋರ್ವ ಊಟಕ್ಕಾಗಿ ನಡೆದುಕೊಂಡು ಹೋಗುತ್ತಿರುವಾಗ್ಗೆ ಅಪರಿಚಿತ ವಾಹನಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡಿದ್ದು  ಅವರ ಸಂಬಂದಿ ಯಾರು ಎಂದು ಇದುವರೆಗೂ ಪತ್ತೆಯಾಗಿಲ್ಲ ಆ ಘಟನೆ ನೆನಪಿಸಿಕೊಂಡಂತೆ ಪಟ್ಟಣ ಹಾಗೂ ಸುತ್ತಮುತ್ತಲಿನಲ್ಲಿ ಸುತ್ತಾಡುವ ಬುದ್ದಿಮಾಂದ್ಯರನ್ನು ಗುರುತಿಸಿ ಅವರನ್ನು ಪ್ರಾಣ ರಕ್ಷಣೆಯಿಂದ ಕಾಪಾಡಬೇಕೆಂದು ಅಂದುಕೊಂಡ ನಾನು ಮೇಲಧಿಕಾರಿಗಳ ಮಾರ್ಗದರ್ಶನದಂತೆ ಕೂಡ್ಲಿಗಿ ಪಟ್ಟಣದಲ್ಲಿ ಸುತ್ತಾಡುತ್ತಿದ್ದ ಮಾತು ಬಾರದ ತಮಿಳುನಾಡು ಮೂಲದಂತೆ ಕಾಣುವ ಅರೇ ಬುದ್ದಿಮಾಂದ್ಯ ವ್ಯಕ್ತಿಯನ್ನು ಪೊಲೀಸ್ ಠಾಣೆಯತ್ತ ಕರೆಹಿಸಿ ಆತನಿಗೆ ಹೊಸಬಟ್ಟೆ ತರಿಸಿ ಹಾಕಿಸುವ ಮೂಲಕ ಆತನ ಹೆಸರು ಗೊತ್ತಾಗದೆ ಇದ್ದು ಪೆನ್ನು ಪೇಪರ್ ಕೊಟ್ಟರೆ ಇಂಗ್ಲಿಷ್ ನಲ್ಲಿ ಅಮ್ಮ ಅನ್ನೋಪದ ಮಾತ್ರ ಬಳಸಿದ ಮತ್ತೇನು ಬರೆಯದೆ ಇದ್ದುದರಿಂದ ಕೂಡ್ಲಿಗಿ ಆರಾಧ್ಯ ದೈವ ಕೊತ್ತಲಾಂಜನೇಯ ಸ್ವಾಮಿಯ ನೆನೆದು ಆತನಿಗೆ ನಾವೇ ಕೊತ್ತಲೇಶ ಎಂದು ನಾಮಕರಣ ನೀಡಿ ಸಿಂಧನೂರಿನ ಕಾರುಣ್ಯ ನೆಲೆ ವೃದ್ದಾಶ್ರಮ ಮತ್ತು ವಯಸ್ಕರ ಬುದ್ದಿಮಾಂದ್ಯ ಆಶ್ರಮದ ಮಾಹಿತಿ ಪಡೆದು ಅವರನ್ನು ಕರೆಹಿಸಿ ಅವರ ವಾಹನದಲ್ಲಿ ಬುದ್ದಿಮಾಂದ್ಯನನ್ನು ನಿನ್ನೆ ಮಧ್ಯಾಹ್ನ ಕಳುಹಿಸಿಕೊಡಲಾಯಿತು ಎನ್ನುತ್ತಾರೆ  ಈ ಕಾರ್ಯದ ರೂವಾರಿ  ಕೂಡ್ಲಿಗಿ ಸಿಪಿಐ  ವಸಂತ ವಿ ಆಸೋದೆ.                                               

 ಕೊರೋನಾ ಮಹಾಮಾರಿ ತಾಂಡವವಾಡೊ ಸಂದರ್ಭದಲ್ಲಿ ತಮ್ಮ ಪ್ರಾಣಗಳನ್ನು ಲೆಕ್ಕಿಸದೆ ವಾರಿಯರ್ಸ್ ಗಳಂತೆ ಕರ್ತವ್ಯ ನಿರ್ವಹಿಸಿ ಅನೇಕರ ಪ್ರಾಣ ರಕ್ಷಿಸಿದ ಜನಸ್ನೇಹಿ ಪೊಲೀಸರು ಬುದ್ದಿಮಾಂದ್ಯರ ಪ್ರಾಣರಕ್ಷಣೆಗೆ ಮುಂದಾಗಿ ಅಂತವರನ್ನು ಗುರುತಿಸಿ ಆಶ್ರಮಕ್ಕೆ ಸೇರಿಸುವುದು ಅವರ ಮಾನವೀಯತೆಯನ್ನು ಎತ್ತಿಹಿಡಿಯುತ್ತಿದೆ ಎನ್ನುತ್ತಾರೆ ಕೂಡ್ಲಿಗಿ ನಾಗರೀಕ ಹಿತರಕ್ಷಣಾ ವೇದಿಕೆ ಅಧ್ಯಕ್ಷ ಹಾಗೂ ಪಟ್ಟಣಪಂಚಾಯತಿ ಸದಸ್ಯ ಕಾವಲ್ಲಿ ಶಿವಪ್ಪನಾಯಕ.