ಅನವಶ್ಯಕ ತಿರುಗಾಡಿದವರಿಗೆ ದಂಡ ವಿಧಿಸಿದ ಪೋಲಿಸರು.

ಹರಪನಹಳ್ಳಿ,ಏ,29- ಕೋವಿಡ್ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಹೇರಿರುವ 14 ದಿನಗಳ ಲಾಕ್ ಡೌನ್ ಪರಿಣಾಮ 10 ಗಂಟೆ ನಂತರ ಪಟ್ಟಣ ಸಂಪೂರ್ಣ ಸ್ತಬ್ಧವಾಗಿತ್ತು.ತಾಲೂಕಿನಲ್ಲಿ ನಿಗದಿತ ಅವಧಿ ಮೀರಿ ಹತ್ತು ಗಂಟೆಯ ಬಳಿಕವೂ ವ್ಯಾಪಾರ ನಿರತರಾಗಿದ್ದ ತರಕಾರಿ ಅಂಗಡಿಗಳ ಮಾಲೀಕರಿಗೆ ಪೆÇೀಲೀಸ್ ಅಧಿಕಾರಿಗಳು ಎಚ್ಚರಿಕೆ ನೀಡಿ ಕೋವಿಡ್ ನಿಯಮ ಉಲ್ಲಂಘಿಸಬಾರುದು. ಒಂದು ಪಕ್ಷ ಉಲ್ಲಂಘಿಸಿದರೆ ಕೇಸ್ ದಾಖಲಿಸಿ ದಂಡ ಕ್ರಮ ಜರಗಿಸಬೇಕಾಗುತ್ತೆ ಎಂದು ಹೇಳಿದರು.ಮದ್ಯ ಖರೀದಿಗೆ ನಿಗದಿತ 10 ಗಂಟೆಯವರೆಗೆ ಆವಕಾಶ ಕಲ್ಪಿಸಿದ್ದು, ಬೆಳ್ಳಂ ಬೆಳಿಗ್ಗೆ ಮದ್ಯ ಪ್ರೀಯರು ಮದ್ಯ ಖರೀದಿಗೆ ಮುಗಿಬಿದ್ದಿದ್ದು, ಪಟ್ಟಣದಲ್ಲಿ ಕಂಡು ಬಂತು. ಬಳಿಕ ಎಲ್ಲ ಮೆಡಿಕಲ್ ಹೊರತುಪಡಿಸಿ ಉಳಿದೆಲ್ಲ ಸೇವೆಗಳೂ ಬಂದ್ ಆಗಿದ್ದು. ಅಲ್ಲೊಂದಿಲ್ಲೊಂದು ಖಾಸಗಿ ವಾಹನಗಳ ಅನಿವಾರ್ಯ ಓಡಾಟ ಹೊರತುಪಡಿಸಿ ಎಲ್ಲವೂ ಬಂದ್ ಆಗಿದೆ. 
ಬ್ಯಾಂಕ್ ಕೆಲಸ ಎಂಬ ಹೆಸರಿನಲ್ಲಿ ಜನರು ಅನವಶ್ಯಕವಾಗಿ ತಿರುಗಾಡುತ್ತಿರುವುದು ಗಮನಕ್ಕೆ ಬಂದಿದೆ. ಯಾರು ನಿಜವಾಗಿಯೂ ವ್ಯವಹಾರಕ್ಕೆ ಹೊರಡುತ್ತಾರೆ ಎಂಬುದನ್ನು ಪರಿಶೀಲಿಸಲು ಸೂಚಿಸಿದ್ದೇವೆ. ಬ್ಯಾಂಕ್ ವ್ಯವಹಾರಕ್ಕೆ ಎಂದು ಸುಳ್ಳು ಹೇಳಿ ತಿರುಗಾಡುತ್ತಿರುವುದು ಸಾಭೀತಾದರೆ ವಾಹನ ಸೀಜ್ ಮಾಡುವ ಜೊತೆಯಲ್ಲಿ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.ಪಟ್ಟಣದ ಪ್ರವಾಸಿ ಮಂದಿರದ ಬಳಿ ಅಕ್ಕಪಕ್ಕದ  ಹೋಟೆಲ್ ಮಾಲೀಕರು ಕೂಡ ಬಲವಂತವಾಗಿ ಪೆÇಲೀಸರು ಬಾಗಿಲು ಹಾಕಿಸುತ್ತಿದ್ದಾರೆ. ಸರ್ಕಾರದ ಮಾರ್ಗಸೂಚಿಯಂತೆ ಪಾರ್ಸೆಲ್ ನೀಡಲು ಅವಕಾಶವಿದೆ. ಆದರೂ ಕೂಡ ಪೋಲಿಸರು ಬಂದ್ ಮಾಡಿಸಲು ಬರುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.