ಅನವಶ್ಯಕವಾಗಿ ರಸ್ತೆಗಿಳಿದ ವಾಹನ ಸವಾರರಿಗೆ ಡಿವೈಎಸ್ಪಿ ಎಚ್ಚರಿಕೆ

ರಾಯಚೂರು.ಜೂ.೪-ಕೊರೊನ ಹಿನ್ನಲೆಯಲ್ಲಿ ಜಿಲ್ಲೆಯಲ್ಲಿ ಲಾಗ್ ಡೌನ್ ಜಾರಿಯಲ್ಲಿದ್ದು ಕೆಲವು ವಾಹನ ಸವಾರರು ಅನವಶ್ಯಕವಾಗಿ ರಸ್ತೆಗಿಳಿದ ಇಂಥ ಸಂದರ್ಭದಲ್ಲಿ ರಾಯಚೂರಿನ ಡಿವೈಎಸ್ಪಿ ಶಿವನಗೌಡ ಪಾಟೀಲ ಇವರು ಇಂದು ಸ್ಟೇಷನ್ ಸರ್ಕಲಿನಲ್ಲಿ ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು .ವಾಹನ ಸವಾರರು ಮಾಸ್ಕ್ ಇಲ್ಲದೆ ಅನವಶ್ಯಕವಾಗಿ ರಸ್ತೆ ಬ೦ದ ಸವಾರರಿಗೆ ದಂಡ ಹಾಕುವ ಪ್ರಕ್ರಿಯೆ ಜರುಗಿತು.
ಅನವಶ್ಯಕವಾಗಿ ಯಾರೂ ರಸ್ತೆಗೆ ಬರಬಾರದು ವಾಹನ ಸವಾರರೇ ಈಗ ಪ್ರತಿಯೊಬ್ಬರ ಜೀವನದ ರಕ್ಷಣೆಗಾಗಿ ಅವರ ಸಂರಕ್ಷಣೆಗಾಗಿ ಕೆಲಸವನ್ನು ಮಾಡುತ್ತಿದೆ ನಮ್ಮ ಇಲಾಖೆಯ ಉನ್ನತ ಅಧಿಕಾರಿಗಳು ಸೇರಿದಂತೆ ಎಲ್ಲಾ ಪೋಲಿಸ್ ಸಿಬ್ಬಂದಿಯವರು ಹಿಮ ಸಂರಕ್ಷಣೆಗಾಗಿ ನಾವು ಕಾರ್ಯ ನಿರ್ವಹಿಸುತ್ತಿದ್ದೇವೆ .ಈಗ ಪ್ರತಿಯೊಬ್ಬರೂ ನಿಮ್ಮ ಜೀವನವನ್ನ ರಕ್ಷಿಸಿಕೊಳ್ಳಿ ಈಗ ಜೀವವಿದ್ದರೆ ಮುಂದಿನ ಜೀವನ ಮಾಡಬಹುದು .ಬೆಲೆ ಕಟ್ಟಲಾರದ ಜೀವ ಹೋದರೆ ಮುಂದೆ ನಿಮ್ಮನ್ನು ಅವಲಂಬಿಸಿದ ಕುಟುಂಬದ ಗತಿಯೇನು .ನೀವು ನಿಮ್ಮ ಕುಟುಂಬದ ಸದಸ್ಯರೊಂದಿಗೆ ಸುರಕ್ಷಿತವಾಗಿ ಮನೆ ಯಲ್ಲಿ ಇದ್ದರೆ ಕೊರೊನ ವನ್ನು ತೀವ್ರಗತಿ ವಾಗಿ ನಿಯಂತ್ರಿಸಬಹುದು ದಯವಿಟ್ಟು ಅನವಶ್ಯಕವಾಗಿ ರಸ್ತೆಗೆ ಇಳಿಯಬಾರದೆಂದು ವಾಹನ ಸವಾರರಿಗೆ ಖಡಕ್ಕಾಗಿ ಹೇಳಿದರು .ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ಶಿಕ್ಷಣ ವಿಭಾಗದ ಜಿಲ್ಲಾ ಸಂಚಾಲಕರಾದ ದಂಡಪ್ಪ ಬಿರಾದಾರ್ ಹಾಗೂ ಲೋಕೇಶಪ್ಪ ಪಿ.ಐ ಡಿ.ಸಿ.ಆರ್.ಬಿ , ಪ್ರಮಾನಂದ ಘೋಡಕೆ .ಡಿ.ವ್ಯ.ಎಸ್,ಪಿ. ಡಿ.ಎ.ಆರ್., ಮಹೇಶ ಪಿ.ಎಸ್.ಐ ನಿಸ್ತಂತು ಘಟಕ, ಜನಾರಧನ ಎ.ಎಸ್.ಐ ಪಶ್ಚಿಮ ರಾಣೆ ಈ ಸಂದರ್ಭದಲ್ಲಿ ಈ ಕೆಳಗಿನ ಅಧಿಕಾರಿಗಳು ಕರ್ತವ್ಯದಲ್ಲಿದ್ದರು.