ಅನರ್ಹ ಕುಟುಂಬಗಳು ಜೂ. 30 ರೊಳಗಾಗಿ ಪಡಿತರ ಚೀಟಿಯನ್ನು ವಾಪಸ್ಸು ನೀಡಿದ್ದಲ್ಲಿ ದಂಡ ಇಲ್ಲ

ಕಲಬುರಗಿ.ಜೂ.1:ಕಲಬುರಗಿ ಜಿಲ್ಲೆಯಲ್ಲಿ ಅಂತ್ಯೋದಯ ಅನ್ನ (ಂಂಙ) ಹಾಗೂ ಆದ್ಯತಾ ಪಡಿತರ ಚೀಟಿ (PHH) ಗಳನ್ನು ಹೊಂದಿರುವ (ಅನರ್ಹ ಕುಟುಂಬಗಳು) ಅನರ್ಹ ಫಲಾನುಭವಿಗಳು ಸ್ವಯಂ ಪ್ರೇರಿತವಾಗಿ ತಾವು ಪಡೆದ ಪಡಿತರ ಚೀಟಿಗಳನ್ನು 2021ರ ಜೂನ್ 30 ರೊಳಗಾಗಿ ಆಹಾರ ಇಲಾಖೆಗೆ ಮರಳಿ ನೀಡಿದ್ದಲ್ಲಿ ಅಂತಹ ಪಡಿತರ ಚೀಟಿದಾರರಿಗೆ ಯಾವುದೇ ದಂಡ ವಿಧಿಸಲಾಗುವುದಿಲ್ಲ ಎಂದು ಕಲಬುರಗಿ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಅಂತ್ಯೋದಯ ಅನ್ನ (AAY) ಮತ್ತು ಆದ್ಯತಾ (PHH) ಪಡಿತರ ಚೀಟಿಗಳನ್ನು ಹೊಂದಿರುವ ಅನರ್ಹ ಕುಟುಂಬಗಳು ಪಡಿತರ ಚೀಟಿಗಳನ್ನು ದಂಡರಹಿತವಾಗಿ 2021ರ ಜೂನ್ 30 ರೊಳಗೆ ಹಿಂದಿರುಗಿಸಲು ಸರ್ಕಾರವು ಅವಕಾಶ ಕಲ್ಪಿಸಿದೆ ಎಂದು ಅವರು ತಿಳಿಸಿದ್ದಾರೆ.