ಅನರ್ಹತೆ ಹಿನ್ನೆಲೆ: ಬಂಗಲೆ ತೆರವಿಗೆ ರಾಹುಲ್ ಗಾಂಧಿ ಗೆ ನೋಟೀಸ್

ನವದೆಹಲಿ,ಮಾ.27-ಲೋಕಸಭಾ ಸ್ಥಾನದಿಂದ ಅನರ್ಹಗೊಂಡಿರುವ ಹಿನ್ನೆಲೆಯಲ್ಲಿ ಒಂದು ತಿಂಗಳ ಒಳಗಾಗಿ ತಾವು ವಾಸ ಮಾಡುತ್ತಿರುವ ಸರ್ಕಾರಿ ಬಂಗಲೆ ತೆರವು ಮಾಡುವಂತೆ ಲೋಕಸಭಾ ಸಚಿವಾಲಯ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಸೂಚನೆ ನೀಡಿದೆ

ದೆಹಲಿಯ ತುಘಲಕ್ ಮಾರ್ಗದಲ್ಲಿರುವ ನಿವಾಸದ ಸರ್ಕಾರಿ ಬಂಗಲೆ ತೆರವು ಮಾಡುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆ ಸಚಿವಾಲಯ ನೋಟಿಸ್ ನೀಡಿದೆ.

ನಿವಾಸವನ್ನು ಏಪ್ರಿಲ್ 23 ರಿಂದ ಅನ್ಚಯವಾಗುವಂತೆ ಸರ್ಕಾರಿ ಬಂಗಲೆಯ ಹಂಚಿಕೆಯನ್ನು ರದ್ದುಗೊಳಿಸಲಾಗುತ್ತದೆ. ಹೀಗಾಗಿ ಒಂದು ತಿಂಗಳ ಒಳಗಾಗಿ ಬಂಗಲೆ ಖಾಲು ಮಾಡಿ ಎಂದು ಸೂಚನೆ ತಿಳಿಸಿದೆ.

ಮೋದಿ ಉಪನಾಮದ ಕುರಿತು 2019 ರಲ್ಲಿ ರಾಹುಲ್ ಗಾಂಧಿ ಮಾಡಿದ ಭಾಷಣದ ಹಿನ್ನೆಲೆಯಲ್ಲಿ ಗುಜರಾತ್ ನ ಸೂರತ್ ನ್ಯಾಯಾಲಯ ರಾಹುಲ್ ಗಾಂಧಿ ಅವರಿಗೆ ಮಾನನಷ್ಡ ಪ್ರಕರಣದಡಿ 2 ವರ್ಷ ಜೈಲು ಶಿಕ್ಷೆ ನೀಡಿ ಜಾಮೀನು ಮಂಜೂರು ಮಾಡಿತ್ತು

ಜನಪ್ರತಿನಿಧಿ ಕಾಯ್ದೆ 1951 ರ ಅಡಿ ಸಂಸದ ಅಥವಾ ಶಾಸಕ 2 ವರ್ಷ ಜೈಲು ಶಿಕ್ಷೆಗೆ ಒಳಗಾದರೆ ತಕ್ಷಣದಿಂದ ಅನ್ವಯವಾಗುವಂತೆ ಅವರ ಸ್ಥಾನ ರದ್ದಾಗಲಿದೆ. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರ ಸಂಸದ ಸ್ಥಾನವನ್ನು ರದ್ದು ಮಾಡಿ ಲೋಕಸಭಾ ಸಚಿವಾಲಯ ಅಧಿಸೂಚನೆ ಹೊರಡಿಸಿತ್ತು

ಇದೀಗ ಒಂದು ತಿಂಗಳ ಒಳಗಾಗಿ ತಾವಿರುವ ಬಂಗಲೆ ಖಾಲಿ ಮಾಡುವಂತೆ ಲೋಕಸಭಾ ಸಚಿವಾಲಯ ರಾಹುಲ್ ಗಾಂಧಿ ಅವರಿಗೆ ನೋಟೀಸ್ ಜಾರಿ ಮಾಡಿದೆ.