ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ

ಕಲಬುರಗಿ:ಜ.26: ನಗರದ ಅನನ್ಯ ಪದವಿ ಮಹಾವಿದ್ಯಾಲಯದಲ್ಲಿ 75ನೇ ಗಣರಾಜ್ಯೋತ್ಸವ ದಿನಾಚರಣೆ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಶರಣು.ಬಿ.ಹೊನ್ನಗೆಜ್ಜಿ ಹಾಗೂ ಅಧ್ಯಕ್ಷೆ ಸುಷ್ಮಾವತಿ.ಎಸ್.ಹೊನ್ನಗೆಜ್ಜಿ ಅವರು ಸಂವಿದಾನದ ಗುರಿ, ಉದ್ದೇಶಗಳನ್ನು ಕುರಿತು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಆಶಾರಾಣಿ ಕಲ್ಕೋರಿ, ಡಾ. ಸರಿತಾ ಕರಿಗುಡ್ಡ, ರಾಜೇಶ್ವರಿ ಕಿರಣಗಿ, ಕಾವ್ಯಾ ಪಾಟೀಲ, ಸುಜಾತ ದೇವುನರಕರ್, ರಾಹುಲ ಸೇರಿಕಾರ್, ಭಾಗ್ಯಾಶ್ರೀ, ಪ್ರಯಾಂಕ, ಸಿದ್ದಮ್ಮ, ಮುರಗೇಂದ್ರ ಸೇರಿದಂತೆ ಇತರರು ವಿದ್ಯಾರ್ಥಿಗಳು ಭಾಗವಹಿಸಿದ್ದರು.