ಸಿಂಧನೂರು,ಏ.೧೦- ಅನಧಿಕೃತ ವಾಟರ್ ಪ್ಲಾಂಟ್‌ಗೆ ನಗರಸಭೆಯಿಂದ ಕಾನೂನು ಬಾಹಿರವಾಗಿ ಅನುಮತಿ ನೀಡಿದ್ದು, ಕೂಡಲೆ ಅನುಮತಿ ರದ್ದುಗೊಳಿಸುವಂತೆ ಜಿಲ್ಲಾಧಿಕಾರಿಗಳನ್ನು ಜಿಲ್ಲಾ ಹಿತಾ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷರಾದ ಶಾಂತಗೌಡ ಜಾಗೀರದಾರ ಅಗ್ರಹಪಡಿಸಿದರು.
ನಗರದ ಪಿಡಬ್ಲ್ಯೂಡಿ ಕ್ಯಾಂಪ್‌ನಲ್ಲಿರುವ ವೇದಿಕೆಯ ಕಛೇರಿಯಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಸುಜಲಾ ಆಕ್ಟಾ ವಾಟರ್ ಪ್ಲಾಂಟ್ ೨೦೧೫ರಿಂದ ೨೦೧೬ ರ ತನಕ ಯಾವುದೇ ಅನುಮತಿ ಪಡೆಯದೆ ಕಾನೂನುಬಾಹಿರ ವಾಗಿ ಪ್ಲಾಂಟ್ ನಡೆಸಲಾಗುತ್ತಿದೆ ಎಂದು ಅವರು ಆರೋಪಿಸಿದರು.
ಕೈಗಾರಿಕಾ ಪ್ರದೇಶದಲ್ಲಿ ಅದು ಕೃಷಿ ರಹಿತ ಜಾಗದಲ್ಲಿ ಮಾತ್ರ ಕಮರ್ಷಿಯಲ್ ಯುನಿಟ್ ಕುಡಿಯುವ ನೀರಿನ ಘಟಕ ಆರಂಭ ಮಾಡಲು ನಗರಸಭೆ ಅನುಮತಿ ನೀಡಬೇಕೆಂಬ ನಿಯಮ ಇದ್ದರು ಸಹ ಅದನ್ನು ಉಲ್ಲಂಘನೆ ಮಾಡಿ ಹಿಂದಿನ ನಗರಸಭೆಯ ಪೌರಾಯುಕ್ತ ರಾಗಿದ್ದ ವೀರುಪಾಕ್ಷಿ ಮೂರ್ತಿ ೨೦೧೯.೨೦ ರಲ್ಲಿ ೬೫ ಹೆಚ್. ಪಿ.ಗೆ ಕಾನೂನುಬಾಹಿರವಾಗಿ ಅನುಮತಿ ನೀಡಿದ್ದಾರೆ ಎಂದರು.
ದೂರು ನೀಡಿದರು ಸಹ ಕ್ರಮ ತೆಗೆದುಕೊಳ್ಳದೆ ಈಗಿನ ನಗರ ಸಭೆಯ ಪೌರಾಯುಕ್ತರಾದ ಮಂಜುನಾಥ ಗುಂಡುರ ಪುನ ಅನುಮತಿ ನೀಡಿದ್ದು ನೋಡಿದರೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ನಗರ ಸಭೆಯ ಕೆಲವು ಸದಸ್ಯರ ಸ್ವಹ ಹಿತಾಸಕ್ತಿ ಸಹ ಇದರಲ್ಲಿ ಅಡಗಿದೆ ಇವರೆ ಅಧಿಕಾರಿಗಳ ಮೇಲೆ ಪ್ರಭಾವ ಬೀರಿ ಒತ್ತಡ ಹಾಕಿ ಅನುಮತಿ ಕೊಡಿಸಿದ್ದಾರೆ ಎಂದರು.
ಪ್ಲಾಂಟ್‌ನಿಂದ ಹೊರ ಬರುವ ಕಲುಷಿತ ನೀರು ಅಕ್ಕಪಕ್ಕದ ಖಾಲಿ ಜಾಗದಲ್ಲಿ ಹರಿಬಿಡುವುದರಿಂದ ರೋಗ ರುಜಿನಗಳು ಹರಡುವ ಸಂಭವ ಇದೆ ಇದರ ಬಗ್ಗೆ ಕ್ರಮ ಜರುಗಿಸಲು ನಗರ ಸಭೆ ಹಾಗೂ ಯೋಜನಾ ನಿರ್ದೇಶಕರಿಗೆ ದೂರು ನೀಡಿದ ಮೇಲೆ ಕ್ರಮಕ್ಕಾಗಿ ನಗರ ಸಭೆ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ಗುಲ್ಬರ್ಗ ಉಚಿತ ನ್ಯಾಯಾಲಯ ೮,೨೦೨೩ ರಲ್ಲಿ ಕ್ರಮ ಕೈಗೊಳ್ಳುವಂತೆ ಜೆಸ್ಕಾಂ ಅಧಿಕಾರಿಗಳಿಗೆ ಆದೇಶ ಹೊರಡಿಸಿದೆ. ಆದರು ನಗರ ಸಭೆಯ ಅಧಿಕಾರಿಗಳು ಘಟಕವನ್ನು ಬಂದು ಮಾಡಲು ಮೀನಾ ವೇಷಾ ಮಾಡುತ್ತಿದ್ದು ಸಾರ್ವಜನಿಕರಿಗೆ ತೊಂದರೆಯಾಗುವ ಅನಧಿಕೃತ ಸುಜಲಾ ಸಾಯಿ ಎಕ್ಸಲೆಂಟ್ ವಾಟರ್ ಪ್ಲಾಂಟ್‌ಗಳನ್ನು ರದ್ದುಗೊಳಿಸಬೇಕು ಇಲ್ಲದಿದ್ದರೆ ಸಿದ್ಧ ಗಂಗಾ ನಿವಾಸಿಗಳ ಜೊತೆ ನಗರ ಸಭೆಯ ಮುಂದೆ ಹೋರಾಟ ಮಾಡಲಾಗುತ್ತೇದೆ ಎಂದು ಶಾಂತಗೌಡ ಜಾಗೀರದಾರ ತಿಳಿಸಿದರು.
ಮಹಾಂತೇಶ ಗೌಡ, ಹಿತೇಶ ಕುಮಾರ ಸೇರಿದಂತೆ ಇತರರು ಪತ್ರಿಕಾ ಗೋಷ್ಠಿಯಲ್ಲಿ ಹಾಜರಿದ್ದರು.