ಅನಧಿಕೃತ ಮಣ್ಣು ಸಾಗಿಸುತ್ತಿದ್ದ ವಾಹನಗಳ ವಶ

ಇಂಡಿ, ಜೂ.8-ಅನಧಿಕೃತವಾಗಿ ಸಾಗಿಸುತ್ತಿದ್ದ ಮೂರು ಟಿಪ್ಪರ ಮಣ್ಣನ್ನು ವಶಪಡಿಸಿಕೊಂಡು ಪೋಲಿಸ್ ಇಲಾಖೆಗೆ ಒಪ್ಪಿಸಲಾಗಿದೆ ಎಂದು ಕಂದಾಯ ಉಪವಿಬಾಗಾಧಿಕಾರಿ ರಾಹುಲ್ ಶಿಂಧೆ ತಿಳಿಸಿದ್ದಾರೆ.
ಅಧಿಕೃತ ಮಾಹಿತಿ ಮೇರೆಗೆ ಅಗರಖೇಡ ರಸ್ತೆಯಲ್ಲಿರುವ ಕ್ಷೇತ್ರಶಿಕ್ಷಣಾಧಿಕಾರಿಗಳ ಕಾರ್ಯಾಲಯದ ಎದುರಿಗೆ ಇಂಡಿಯ ತಹಸೀಲ್ದಾರ್, ಕಂದಾಯ ನೀರೀಕ್ಷಕರು ಮತ್ತು ಗ್ರಾಮಲೆಕ್ಕಾಧಿಕಾರಿಗಳು ಸೇರಿ ಈ ವಾಹನ ತಪಾಸಣೆ ನಡೆಸಿದ ವೇಳೆ ಅವರ ಹತ್ತಿರ ಯಾವದೇ ಪರವಾನಿಕೆ ಇರಲಿಲ್ಲ.
ಅಂದಾಜು 17500 ರೂ ಬೆಲೆ ಬಾಳುವ ಸರಕಾರದ ಪರವಾನಿಕೆ ಇಲ್ಲದೆ ಫಲವತ್ತಾದ ಮಣ್ಣನ್ನು ಸಾಗಿಸುತ್ತಿದ್ದ ಕಾರಣ ಮೂರು ಹೈವಾ ಗಳನ್ನು ಜಪ್ತಿ ಮಾಡಲಾಗಿದೆ, ಸರಕಾರದ ಪರವಾನಿಕೆ ಇಲ್ಲದೆ ಮಣ್ಣು ಅಥವಾ ಮರಳು ಸಾಗಿಸುವದು ಕಾನೂನು ಬಾಹಿರ ಅಂತಹ ಮಣ್ಣು, ಮರಳು ಜಪ್ತು ಮಾಡಲಾಗುವದೆಂದು ಶಿಂಧೆ ತಿಳಿಸಿದ್ದಾರೆ.