ಅನಧಿಕೃತ ಮಂಡಕ್ಕಿ ಭಟ್ಟಿ-ಅವಲಕ್ಕಿ ಮಿಲ್ ತೆರವಿಗೆ ಮನವಿ


ದಾವಣಗೆರೆ.ನ.೧೭; ಇಲ್ಲಿನ ಬಾಷಾನಗರದ ಬಳಿ ಇರುವ ರುದ್ರಭೂಮಿ ಪಕ್ಕದ ಭಾಗದಲ್ಲಿ ಅಕ್ರಮವಾಗಿ ಮಂಡಕ್ಕಿಭಟ್ಟಿ ಹಾಗೂ ಅವಲಕ್ಕಿ ಮಿಲ್ ಗಳು ಕಾರ್ಯನಿರ್ವಹಿಸುತ್ತಿವೆ ಇದರಿಂದ ಸ್ಥಳಿಯರಿಗೆ ತೊಂದರೆಯಾಗುತ್ತಿದೆ ಶೀಘ್ರದಲ್ಲೇ ಇವುಗಳನ್ನು ತೆರವುಗೊಳಿಸಬೇಕೆಂದು ಅಜಾದ್ ನಗರ ನಿವಾಸಿ ದಸ್ತಗೀರ್ ಎಸ್ ಅಸಾದುಲ್ಲಾ ಒತ್ತಾಯಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು ರುದ್ರಭೂಮಿ ಪಕ್ಕದ ಭಾಗದಲ್ಲಿ ಮತ್ತು ಬಾಷಾನಗರದ ೩ ನೇ ಕ್ರಾಸ್ ನಿಂದ ೭ ನೇ ಕ್ರಾಸ್ ವರೆಗೆ ಇರುವ ವಸತಿ ಪ್ರದೇಶದ ಮಧ್ಯಭಾಗದಲ್ಲಿ ಅಕ್ರಮವಾಗಿ ಮಂಡಕ್ಕಿ ಭಟ್ಟಿ ಮತ್ತು ಅವಲಕ್ಕಿ ಮಿಲ್ ಗಳನ್ನು ನಿರ್ಮಿಸಿ ಇಲ್ಲಿನ ನಾಗರೀಕರಿಗೆ ತೀವ್ರ ತೊಂದರೆ ನೀಡಲಾಗುತ್ತಿದೆ. ಇದರಿಂದಾಗಿ ಶೇ ೯೦ ರಷ್ಟು ಜನರು ಹಲವಾರು ರೋಗಗಳಿಂದ ಬಳಲುತ್ತಿದ್ದಾರೆ. ಮಂಡಕ್ಕಿ ಭಟ್ಟಿ ಮತ್ತು ಅವಲಕ್ಕಿ ಮಿಲ್ ಗಳಿಂದ ಹೊರಸೂಸುವ ಧೂಳಿನಿಂದ ರೋಗಗಳು ಉಲ್ಬಣಿಸುತ್ತಿವೆ.ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಾಕಷ್ಟು ದೂರು ನೀಡಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಹಿರಿಯ ಅಧಿಕಾರಿಗಳಿಗೆ ಸಂಪೂರ್ಣ ಮಾಹಿತಿಯ ಲಗತ್ತಿನೊಂದಿಗೆ ಅರ್ಜಿ ಸಲ್ಲಿಸಲಾಗುವುದು ಎಂದರು.