ಅನಧಿಕೃತ ಪಂಪ್ ಹೌಸ ನಿರ್ಮಾಣ: ಕ್ರಮಕ್ಕೆ ಒತ್ತಾಯ

ರಾಯಚೂರು,ಜು.22- ತಾಲೂಕಿನ ಚಿಕ್ಕಸೂಗುರು ಗ್ರಾಮದ ಹತ್ತಿರ ಪಟ್ರೋಲ್ ಪಂಪ್ ಭಾಗದಲ್ಲಿ ಅನಧಿಕೃತವಾಗಿ ಪಂಪ್ ಹೌಸ ನಿರ್ಮಾಣ ಮಾಡಿದ್ದು,ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ರಾಜ್ಯ ದಿ.ಲೆಜೆಂಡ್ ಟಿಪ್ಪು ಸುಲ್ತಾನ್ ಸಂಘ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.

ಚಿಕ್ಕಸುಗುರು ಗ್ರಾಮದ ಹತ್ತಿರ ವಿರುವ ಹಂಚಿಕೊಂಡರೆ ಕಾರ್ಖಾನೆಯು ಶಿವನ ನಳದ ಸಂಪರ್ಕ ಪರವಾನಿಗೆ ಪಡೆದುಕೊಂಡು ಅದರಲ್ಲಿ ಪಂಪ್ ಹೌಸ್ ನಿರ್ಮಾಣ ಮಾಡಿ ಹರಾಜಿನಲ್ಲಿ ಆರು ಜನರನ್ನು ಅಳವಡಿಸಿ ನೀರನ್ನು ಕಾರ್ಖಾನೆಗೆ ಬಳಸಿ ಕೊಳ್ಳುತ್ತಿದ್ದು, ಕಾನೂನು ಬಾಹಿರವಾಗಿದೆ ಎಂದು ಆರೋಪಿಸಿದರು.

ಕೃಷ್ಣಾನದಿಯಿಂದ ರೆಚರ್ಗೆ ಸಂಪರ್ಕ ಕಲ್ಪಿಸಿದ ಪೈಪ್ ಲೈನ್ ಮೂಲಕ ಹಂಚಿಕೊಂಡರೆ ನೀರನ್ನು ಪೈಪ್ ಲೈನ್ ನಿಂದ ಪಡೆದುಕೊಂಡು ಅನಧಿಕೃತವಾಗಿ ನೀರನ್ನು ಬಳಸಿಕೊಳ್ಳುತ್ತಿ ದ್ದಾರೆ,ಕೇವಲ ನಳದ ಸಂಪರ್ಕಕ್ಕೆ ಪರವಾನಿಗೆ ಪಡೆದು ಅದರಲ್ಲಿ ಪಂಪ್ ಹೌಸ್ ನಿರ್ಮಾಣ ಮಾಡಿಕೊಂಡು,ಕಾರ್ಖಾನೆಗೆ ಬಳಕೆ ಮಾಡಿಕೊಳ್ಳುತ್ತಿ ದ್ದಾರೆ,ಇದರಿಂದ ನಗರದಲ್ಲಿ ಕುಡಿನಿ ರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದರು. 

ಈ ಕೂಡಲೇ ಮಂಚಿಕೊಂಡ ರೈಸ್ ಮಿಲ್ ಮೇಲೆ ಕಾನೂನು ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾದ್ಯಕ್ಷ ನರಸಿಂಹಲು, ನರಸಪ್ಪ,ಪರಶುರಾಮ,ಮಲ್ಲೇಶ,ಕೆ ವೆಂಕಟೇಶ್,ಅನಿಲ್,ಸುರೇಶ,ವಸಂತಕುಮಾರ,ಅಬ್ದುಲ್ ವಾಹೀದ್,ಸುರೇಶ ಸೇರಿದಂತೆ ಅನೇಕರು ಭಾಗವಹಿಸಿದ್ದರು.