ಅನಧಿಕೃತ ನೀರಿನ ಘಟಕ ನಿಷೇಧಕ್ಕೆ ಮನವಿ

ಕಲಬುರಗಿ,ಜೂ 5: ನಗರದಲ್ಲಿ ಅನಧಿಕೃತ ಕುಡಿಯುವ ನೀರಿನ ಘಟಕ ನಿಷೇಧ ಮಾಡುವಂತೆ ಕರವೇ ಕಾವಲುಪಡೆಯ ರಾಜ್ಯ ವಕ್ತಾರ ಮತ್ತು ಕಲಬುರಗಿ ಜಿಲ್ಲೆ ಸಂಘಟನೆಯ ಉಸ್ತುವಾರಿ ಮಂಜುನಾಥ ನಾಲವಾರಕರ್ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕಲಬುರಗಿ ನಗರದಲ್ಲಿ ಸರಕಾರದಿಂದ ಮಾನ್ಯತೆ ಪಡೆದ ಅನೇಕ ಶುದ್ಧ ಕುಡಿಯುವ ನೀರಿನ ಘಟಕಗಳು ಸರಕಾರ ನಿಯಮದ ಪ್ರಕಾರ ಜನತೆಗೆ ಶುದ್ಧವಾದ ಕುಡಿಯುವ ನೀರು ಪೂರೈಕೆ ಮಾಡುತ್ತಿವೆ.
ಆದರೇ ಹೆಚ್ಚಿನ ತಾಪಮಾನದಿಂದ ಕಲಬುರಗಿ ನಗರದಲ್ಲಿ ಸರಕಾರದಿಂದ ಮಾನ್ಯತೆ ಪಡೆಯದೇ,ಶುಧ್ಧ ಕುಡಿಯುವ ನೀರು ಪೂರೈಕೆ ಮಾಡದೇ ಇರುವ ಅನಧಿಕೃತ ನೀರಿನ ಘಟಕದ ಮೇಲೆ ಕ್ರಮ ಕೈಗೊಳ್ಳಲು ಮಂಜುನಾಥ ನಾಲವಾರಕರ್ ಮನವಿ ಮಾಡಿದ್ದಾರೆ.