ಅನಧಿಕೃತ ನಳಗಳನ್ನು ಪತ್ತೆ ಹಚ್ಚಿ ಅಧಿಕೃತಗೊಳಿಸಲು ತಂಡ ರಚನೆ

ಕಲಬುರಗಿ,ಜು.19:ಮಳೆಗಾಲ ಪ್ರಾರಂಭವಾಗಿದ್ದು, ನಗರದ ಕುಡಿಯುವ ನೀರು ಸರಬರಾಜು ಕುರಿತು, ನೀರಿನ ಕರ ಸಂಗ್ರಹಣೆ ಮಾಡುವ ಪ್ರಮಾಣವನ್ನು ಹೆಚ್ಚಿಸಲು ಮನೆ-ಮನೆಗಳಿಗೆ ಭೇಟಿ, ಗ್ರಾಹಕರು ನೀರಿನ ಕರ ಪಾವತಿಸಲು ಹಾಗೂ ನಗರದಲ್ಲಿನ ಕಲುಷಿತ ನೀರಿನ ಸಮಸ್ಯೆಗಳನ್ನು ಬಗೆಹರಿಸಲು ಹಾಗೂ ಅನಧಿಕೃತ ನಳಗಳನ್ನು ಪತ್ತೆ ಹಚ್ಚಿ ಅಧಿಕೃತಗೊಳಿಸಲು ಕ್ರಮ ವಹಿಸಲು ಕೆಳಕಂಡಂತೆ ಅಧಿಕಾರಿಗಳನ್ನೊಳಗೊಂಡ ತಂಡಗಳನ್ನು ರಚಿಸಲಾಗಿದೆ ಎಂದು ಕಲಬುರಗಿ ಮಹಾನಗರ ಪಾಲಿಕೆಯ ಆಯುಕ್ತರು ಹಾಗೂ ಕುಸ್ಸಂಪ್ ಉಪ ಯೋಜನಾ ನಿರ್ದೇಶಕರು ತಿಳಿಸಿದ್ದಾರೆ.

 ವಾರ್ಡ್ ಸಂಖ್ಯೆ 1,2,3,4,5,6,7,8,9,10,11,12,13,14,15,16,17,18,19,20 (ಶೋರ್ ಗುಂಬಜ್ ಏರಿಯಾ) ಗಳಿಗೆ ಸಂಬಂಧಿಸಿಂತೆ ಕಲಬುರಗಿ ಕೆಯುಐಡಿಎಫ್‍ಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಶಿವಕುಮಾರ ಬಿ. ಪಾಟೀಲ ಇವರನ್ನು  (ಮೊಬೈಲ್ ಸಂಖ್ಯೆ 8970714205) ಸಂಪರ್ಕಿಸಬೇಕು. 

ವಾರ್ಡ್ ಸಂಖ್ಯೆ 21,22,23,25,26,28,29,32,34,35,36, 37,38,39,40,41 (ಶೋರಗುಂಬಜ್ ಏರಿಯಾ) ಗಳಿಗೆ ಸಂಬಂಧಿಸಿದಂತೆ ಕಲಬುರಗಿ ಕೆಯುಐಡಿಎಫ್‍ಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಸುರೇಶ (ಮೊಬೈಲ್ ಸಂಖ್ಯೆ 9739249544) ಇವರನ್ನು ಸಂಪರ್ಕಿಸಬೇಕು.

ವಾರ್ಡ್ ಸಂಖ್ಯೆ 17,24,27,29,30,31,33,43,44,45,47,48,49,52,53 (ಫಿಲ್ಟರ್ ಬೆಡ ಏರಿಯಾ) ಗೆ ಸಂಬಂಧಿಸಿದಂತೆ ಕಲಬುರಗಿ ಕೆಯುಐಡಿಎಫ್‍ಸಿ ತಾಂತ್ರಿಕ ಸಹಾಯಕರು/ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಕವಿತಾರಾಣಿ ಎನ್. (ಇವರನ್ನು 9035229933) ಸಂಪರ್ಕಿಸಬೇಕು.

ವಾರ್ಡ್ ಸಂಖ್ಯೆ 38,46,47,48,50,53,54,55 (ಕೋಟನೂರ ಕಮಾಂಡ್ ಏರಿಯಾ) ಗೆ ಸಂಬಂಧಿಸಿದಂತೆ ಕಲಬುರಗಿ ಕೆಯುಐಡಿಎಫ್‍ಸಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಿವಶರಣ ಬಿ. ಜೇವರ್ಗಿ (ಮೊಬೈಲ್ ಸಂಖ್ಯೆ 9448020234) ಗೆ ಸಂಪರ್ಕಿಸಬೇಕು.

ಕಲಬುರಗಿ ನಗರದ ಸಾರ್ವಜನಿಕರು ತುರ್ತಾಗಿ ಅಕ್ರಮ ನಳ ಸಂಪರ್ಕಗಳನ್ನು ಹೊಂದಿದಲ್ಲಿ http://mrc.gov.in/jalanidhi ವೆಬ್‍ಸೈಟ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಿ ಸಕ್ರಮಗೊಳಿಸಬೇಕೆಂದು ಅವರು ತಿಳಿಸಿದ್ದಾರೆ.