ಅನಧಿಕೃತ ತಗಡ್ ಶಡ್ ಗಳ ನಿರ್ಮಾಣ ತೆರವುಗೊಳಿಸಲು ಸ್ಥಳೀಯರ ಪ್ರತಿಭಟನೆ

ಅಥಣಿ :ಆ.18: ತಾಲೂಕಿನ ಸಂಕ್ಕೋನಟ್ಟಿ ಗ್ರಾಮ ಪಂಚಾಯಿತ (ಅಥಣಿ ಗ್ರಾಮೀಣ) ವ್ಯಾಪ್ತಿಯಲ್ಲಿ ಬರುವ ವಿಜಯಪೂರ ರಸ್ತೆಗೆ ಹೊಂದಿಕೊಂಡಿರುವ ಬಿಸಿಎಂ ವಸತಿ ನಿಲಯದ ಮುಂಭಾಗದ ಸರಕಾರಿ ಜಾಗವನ್ನು ಅನಧಿಕೃತವಾಗಿ ವಶಪಡಿಸಿಕೊಂಡು ಕಾನೂನು ಬಾಹಿರವಾಗಿ ತಗಡ್ ಶಡ್ ಗಳನ್ನು ಹಾಕುತ್ತಿದ್ದಾರೆ ಇದರಿಂದ ಶಾಲೆ ಹಾಗೂ ವಸತಿ ಶಾಲೆಯ ಮಕ್ಕಳಿಗೆ ತೀವ್ರ ಸಮಸ್ಯೆ ಉಂಟಾಗುತ್ತಿದೆ ಎಂದು ಸ್ಥಳೀಯರು ಕೆಲ ಕಾಲ ಪ್ರತಿಭಟನೆ ನಡೆಸಿದರು.
ಈ ಕುರಿತು ಸ್ಥಳೀಯ ಉಮೇಶ ಕಟ್ಟಿಮನಿ ಮಾತನಾಡಿ ರಾಜ್ಯ ಹೆದ್ದಾರಿಗೆ ಹೊಂದಿಕೊಂಡಿರುವ ಕನ್ನಡ ಶಾಲೆಗೆ ಪ್ರತಿನಿತ್ಯ ಮಕ್ಕಳು ಸಂಚಾರ ಮಾಡಲು ಈ ಸರಕಾರಿ ಜಾಗ ಅನುಕೂಲವಾಗುತ್ತದ ಆದರೆ ಈ ಜಾಗದಲ್ಲಿ ಅನಧಿಕೃತವಾಗಿ ತಗಡ್ ಶಡ್ ಗಳು ಹಾಕಿದ್ದರಿಂದ ಮಕ್ಕಳಿಗೆ ತೀವ್ರ ಸಮಸ್ಯೆ ಉಂಟು ಮಾಡಿದ್ದಾರೆ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಅನಧಿಕೃತ ಶೆಡ್ ಗಳನ್ನು ತೆರವುಗೊಳಿಸಬೇಕು ಎಂದು ಮನವಿ ಮಾಡಿದರು.

ಅನಂತರ ಮತ್ತೋರ್ವ ಸ್ಥಳೀಯರಾದ ಮೈಬೂಬ ಭಾಗವಾನ ಮಾತನಾಡಿ ಸರಕಾರಿ ಜಾಗವನ್ನು ಆಕ್ರಮಿಸಿ ಅಂಗಡಿ ಹಾಕುತ್ತಿರುವ ಬಗ್ಗೆ ಈಗಾಗಲೇ ಸಂಬಂಧ ಪಟ್ಟ ಗ್ರಾಮ ಪಂಚಾಯಿತಿ ಪಿಡಿಓ, ತಾಪಂ ಅಧಿಕಾರಿ ಹಾಗೂ ತಹಶೀಲ್ದಾರ ಅವರಿಗೆ ಮನವಿ ಮಾಡಿದರೂ ಪ್ರಯೋಜನವಾಗಲ್ಲ, ಇನ್ನಾದರೂ ಸಮಸ್ಯೆ ನಿವಾರಣೆಯಾಗದಿದ್ದರೆ ರಸ್ತೆ ಬಂದ್ ಮಾಡಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದರು
ಈ ಸಂದರ್ಭದಲ್ಲಿ ಎಸ್ ಡಿ ಎಮ್ ಸಿ ಅಧ್ಯಕ್ಷ ವಿರೇಶ ಶೇಡಬಾಳ ಮಾತನಾಡಿ ಪ್ರತಿನಿತ್ಯ ನೂರಾರು ವಿದ್ಯಾರ್ಥಿಗಳಿಗೆ ಶಾಲೆಗೆ ಹೋಗಲು ಅನಧಿಕೃತ ತಗಡ್ ಶಡ್ ಗಳಿಂದ ಸಮಸ್ಯೆ ಆಗುತ್ತಿದ್ದು ಅಧಿಕಾರಿಗಳು ಕೂಡಲೇ ತೆರವುಗೊಳಿಸಬೇಕು ಎಂದರು.