ಅನಧಿಕೃತ ಡಬ್ಬೆ ಅಂಗಡಿ ತೇರುವೆಗೆ ಡಿಎಸ್‌ಎಸ್ ಆಗ್ರಹ

ರಾಯಚೂರು, ಸೆ.೧೯- ನಗರದ ಗಂಜ್ ವೃತ್ತ ಪೋಸ್ಟ್ ಆಫೀಸ್ ಕಂಪೌಂಡ್ ಹತ್ತಿರ ಅನಧಿಕೃತ ಡಬ್ಬೆ ಅಂಗಡಿ ತೆರವುಗೊಳಿಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮತಿ ಪದಾಧಿಕಾರಿಗಳು ನಗರಸಭೆ ಆಯುಕ್ತರಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು.
ನಗರದ ಗಂಜ್ ವೃತ್ತ ಪೊಸ್ಟ್ ಆಫೀಸ್ ಹತ್ತಿರ ಸಾರ್ವಜನಿಕರು, ಪಾದಾಚಾರಿಗಳು, ನಡೆದಾಡುವ ಸ್ಥಳದಲ್ಲಿ ಬಾರೀ ಡಬ್ಬಾ ಅಂಗಡಿಯನ್ನು ಅಳವಡಿಸಿದ್ದು, ಡಬ್ಬಿ ಅಂಗಡಿಯಿಂದ ಸಾರ್ವಜನಿಕರಿಗೆ, ಪಾದಾಚಾರಿಗಳಿಗೆ ತುಂಬಾ ತೊಂದರೆಯಾಗುತ್ತಿದ್ದು, ಗಂಜ್ ವೃತ್ತ ಜನ ಸಮೂಹ ಮತ್ತು ವಾಹನಗಳು ಸಂಚಾರ ಈ ರಸ್ತೆಯು ಅಂತರರಾಜ್ಯ ರಸ್ತೆಯಾಗಿದ್ದು, ಸದರಿ ವೃತ್ತದಲ್ಲಿ ಜನದಟ್ಟಣೆ ಕೂಲಿಕಾರ್ಮಿಕರು, ಹಮಾಲಿ ಕಟ್ಟಡ ಕಾರ್ಮಿಕರು, ಕಾರ್ಖಾನೆಗಳ ಕಾರ್ಮಿಕರು ಹಾಗೂ ರೈತರು ಸತತ ಜನ ಸಾಗರ ಓಡಾಡುತ್ತಿದ್ದು, ಇಂತಹ ರಸ್ತೆಯಲ್ಲಿ ಪಾದಾಚಾರಿಗಳು ನಡೆದಾಡುವ ರಸ್ತೆಯಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿ ಅಳವಡಿಸಿದ್ದು ಕಾನೂನು ಬಾಹಿರವಾಗಿರುತ್ತದೆ ಎಂದು ಆಗ್ರಹಿಸಿದರು.
ಸಾರ್ವಜನಿಕರು, ಪಾದಾಚಾರಿಗಳ ಹಿತಾದೃಷ್ಠಿಯಿಂದ ಯಾವುದೇ ಅಪಘಾತಗಳು ಆಗದಂತೆ ನೋಡಿಕೊಳ್ಳುವುದು ತಮ್ಮ ಕರ್ತವ್ಯವಾಗಿದ್ದು, ಈ ಕೂಡಲೇ ಡಬ್ಬಾ ಅಂಗಡಿಯನ್ನು ತೆರವುಗೊಳಿಸಿ ಅಂಗಡಿ ಮಾಲೀಕರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಎಂ.ಭರತ್ ಕುಮಾರ, ಈರೇಶ, ನರೇಶ ಸೇರಿದಂತೆ ಉಪಸ್ಥಿತರಿದ್ದರು.