ಅನಧಿಕೃತ ಕೋಚಿಂಗ್ ಸೆಂಟರ್: ಕಡಿವಾಣಕ್ಕೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಮೀನಾಮೇಷ

ದೇವದುರ್ಗ.ಡಿ.೩೧- ತಾಲೂಕಿನ ಗಬ್ಬೂರು, ಸಂಕೇಶ್ವರಹಾಳ ಗ್ರಾಮದಲ್ಲಿ ಅನಧಿಕೃತ ಕೋಚಿಂಗ್ ಸೆಂಟರ್ ಆರಂಭಿಸಿದ್ದು, ದೂರು ಕೊಟ್ಟರು ಕಡಿವಾಣಕ್ಕೆ ಶಿಕ್ಷಣ ಇಲಾಖೆಯ ಮೇಲಧಿಕಾರಿಗಳು ಮೀನಾಮೇಷ ಎಣುಸುತ್ತಿದ್ದಾರೆ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳ ಮುಖಸ್ಥ ಕಾರ್‍ಯದರ್ಶಿ ಶರಣು ಹುಣಸಗಿ ಆರೋಪಿಸಿದರು. ಪಟ್ಟಣದ ಪತ್ರಿಕಾ ಕಾರ್‍ಯಯಲದಲ್ಲಿ ಶುಕ್ರವಾರ ಅವರು ಮಾತನಾಡಿದರು.
ಅನಧಿಕೃತ ಕೋಚಿಂಗ್ ಸೆಂಟರ್ ನಡೆಸಲಾಗುತ್ತಿದೆ ಎಂದು ಜೂನ್ ತಿಂಗಳಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಲಾಗಿತ್ತು. ಅಧಿಕೃತ, ಅನಧಿಕೃತ ಕೋಚಿಂಗ್ ಪೂರಕ ಮಾಹಿತಿಗೆ ಅಧಿಕಾರಿಗಳು ತಂಡ ರಚನೆ ಮಾಡಿದರು. ಅನಧಿಕೃತ ಕೋಚಿಂಗ್ ಎಂದು ತಂಡ ಬಿಇಓಗೆ ವರದಿ ನೀಡಿದ್ದರು. ಇಲ್ಲಿನ ಅಧಿಕಾರಿಗಳು ಕ್ರಮಕ್ಕೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ವರದಿ ಸಲ್ಲಿಸಿದರು. ಆದರೆ ಇಲ್ಲಿವರೆಗೆ ಯಾವುದೇ ಕ್ರಮಕೈಗೊಳ್ಳದೇ ಇದ್ದರಿಂದ ಮೇಲಧಿಕಾರಿಗಳು ರಕ್ಷಣೆಗೆ ನಿಂತಿದ್ದಾರೆ ಎನ್ನುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ ಎಂದು ದೂರಿದರು. ಒಂದು ಕೋಚಿಂಗ್ ಸೆಂಟರ್‌ನಲ್ಲಿ ೪೦೦ ಅಧಿಕ ಮಕ್ಕಳು ತರಬೇತಿ ಪಡೆಯಲಾಗುತ್ತಿದೆ.
ಶಿಕ್ಷಣ ಇಲಾಖೆಯ ನಿಮಯದಡಿ ೪ಮತ್ತು ೫ನೇ ತರಗತಿ ಮಕ್ಕಳಿಗೆ ತರಬೇತಿಗೆ ವಸತಿ ನಿಲಯ ಸೌಲಭ್ಯಕ್ಕೆ ಅವಕಾಶವಿಲ್ಲ. ಆದರೂ ಪ್ರಭಾವಿಗಳ ಕೃಫೆಯಿಂದ ನಿಮಯಗಳು ಗಾಳಿಗೆ ತೋರಿ ಮನಬಂದಂತೆ ಕೋಚಿಂಗ್ ಆರಂಭಿಸಲಾಗಿದೆ. ಸರಕಾರಿ ಶಾಲೆಯಲ್ಲಿ ಪ್ರವೇಶ ಪಡೆದಿರುವಂತ ನೂರಾರು ಮಕ್ಕಳು ಕೋಚಿಂಗ್ ಸೌಲಭ್ಯ ಪಡೆಯಲಾಗುತ್ತಿದೆ. ಇಂತಹ ಅನಧಿಕೃತ ಸೆಂಟರ್‌ಗೆ ಸರಕಾರಿ ಶಾಲಾ ಶಿಕ್ಷಕರು ಕೃಫೆಯಿಂದೆ ಎಂದು ದೂರಿದರು. ಗಬ್ಬೂರು, ಸಂಕೇಶ್ವರಹಾಳ ಗ್ರಾಮದಲ್ಲಿ ನೆಡಸಲಾಗುತ್ತಿರುವ ಕೋಚಿಂಗ್ ಸೆಂಟರ್‌ಗಳ ವಿರುದ್ಧ ಮಕೈಗೊಳ್ಳಬೇಕಾದಂತಹ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ. ಒಂದು ರೀತಿಯಲ್ಲಿ ಶಿಕ್ಷಣ ಮಾಫಿಯ ದಂಧೆ ನಡೆದಂತೆ ಕಾಣುತ್ತಿದೆ. ತಂಡ ರಚಿಸಿದ ಶಿಕ್ಷಕರಿಂದ ಅನಧಿಕೃತ ಕೋಚಿಂಗ್ ಸೆಂಟರ್‌ಗಳು ವರದಿಯೂ ನೀಡಲಾಗಿದೆ. ಇಲ್ಲಿವರೆಗೆ ಅಧಿಕಾರಿಗಳು ಕ್ರಮಕೈಗೊಳ್ಳದೇ ಮೀನಾಮೇಷ ಎಣಿಸುತ್ತಿರುವುದು ಅನುಮಾನಕ್ಕೆ ಕಾರಣವಾಗಿದೆ ಎಂದು ದೂರಿದರು. ವೆಂಕಟೇಶ ನೀಲಗಲ್, ಶೀತಕಾಂತ್ ಗುಡಿ, ಪ್ರಾಣೇಶ ಗುಡಿ, ಬಸವರಾಜ ಮಡಿವಾಳ ಸೇರಿದಂತೆ ಇತರರು ಇದ್ದರು.