ಅನಧಿಕೃತ ಕೀಟನಾಶಕ ಮಾರಾಟ: ಅಧಿಕಾರಿಗಳು ದಾಳಿ


ಸಂಜೆವಾಣಿ ವಾರ್ತೆ
ಗಂಗಾವತಿ, ಮೇ.27: ನಗರದ ಸಿಬಿಎಸ್ ಗಂಜ್ ನಲ್ಲಿರುವ ಮಹೇಶ ಏಜೆನ್ಸಿಸ್ ಅಂಗಡಿಯಲ್ಲಿ ಅನಧಿಕೃತವಾಗಿ ಕೀಟನಾಶಕ ಮಾರಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಕೃಷಿ ಇಲಾಖೆಯ ಅಧಿಕಾರಿಗಳು ದಾಳಿ ಮಾಡಿ ಕೀಟನಾಶಕವನ್ನು ಜಪ್ತಿ ಮಾಡಿದ್ದಾರೆ.
ತಾಲೂಕಿನ ಜಂಗಮರ ಕಲ್ಗುಡಿ ಗ್ರಾಮದಲ್ಲಿ ಕೀಟನಾಶಕ ಮಾಡಲು ಪರವಾನಿಗೆ ಪಡೆದು ಗಂಗಾವತಿ ನಗರದಲ್ಲಿ ಮಾರಾಟ ಮಾಡಲಾಗುತ್ತಿದೆ ಎಂಬ ದೂರು ಅಧಾರಿಸಿ ಖಚಿತ ಮಾಹಿತಿ ಪಡೆದುಕೊಂಡು ಕೃಷಿ ಜಾಗೃತದಳ ಸಹಾಯಕ ನಿರ್ಧೇಶಕ ನಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಕೀಟನಾಶಕ ಕಾಯ್ದೆ 1968ರ ಕಲಂ  13(1) ಮತ್ತು ಕೀಟನಾಶಕ ನಿಯಮ 1971ರ ನಿಯಮ 10(1)ರ ಉಲ್ಲಂಘನೆಯಾಗಿರುತ್ತದೆ. ರೂ. 1,98,178 ಮೌಲ್ಯದ 232 ಲೀ ಕೀಟನಾಶಕ  ದಾಸ್ತಾನನ್ನು ಜಪ್ತಿ ಮಾಡಲಾಗಿದೆ. ಎಂದು ಅಧಿಕಾರಿಗಳು ತಿಳಿಸಿದರು. ಈ ವೇಳೆ ಸಹಾಯಕ ಕೃಷಿ ನಿರ್ದೇಶಕರು (ಜಾರಿ ದಳ) ಕೆ. ಕುಮಾರಸ್ವಾಮಿ, ಕೃಷಿ ಅಧಿಕಾರಿ ಪ್ರಕಾಶ್ ಹಾಗೂ ಇತರರು  ಹಾಜರಿದ್ದರು.

One attachment • Scanned by Gmail