ಅನಧಿಕೃತ ಆಕ್ಸಿಜನ್ ಸಾಗಾಟ:ಇಬ್ಬರ ಬಂಧನ

ಕಲಬುರಗಿ ಮೇ 4: ಅನಧಿಕೃತವಾಗಿ ಹೈದರಾಬಾದ್ ಆಸ್ಪತ್ರೆಯೊಂದಕ್ಕೆ 30 ಆಕ್ಸಿಜನ್ ಸಿಲಿಂಡರ್ ಸಾಗಿಸುತ್ತಿದ್ದ ಇಬ್ಬರನ್ನು ಗ್ರಾಮೀಣ ಠಾಣೆ ಪೋಲಿಸರು ಬಂಧಿಸಿದ್ದಾರೆ.
ನಿನ್ನೆ ರಾತ್ರಿ ನಗರದ ಬಿದ್ದಾಪುರ ಕಾಲೋನಿ ಹನುಮಾನ ದೇವಸ್ಥಾನ ಹತ್ತಿರ ವಾಹನದಲ್ಲಿ ಆಕ್ಸಿಜನ್ ಸಿಲಿಂಡರ್ ಸಾಗಿಸುತ್ತಿದ್ದನ್ನು ಗಮನಿಸಿದ ನಾಗರಿಕರು ,ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಕ್ಷಣ ಸ್ಥಳಕ್ಕೆ ಧಾವಿಸಿದ ಗ್ರಾಮೀಣ ಠಾಣೆಯ ಪೊಲೀಸರು, ಚಾಲಕ ಮತ್ತು ಆತನ ಸಹಾಯಕನನ್ನು ಬಂಧಿಸಿದ್ದಾರೆ.
ಸಹಾಯಕ ಔಷಧ ನಿಯಂತ್ರಕ ಅಧಿಕಾರಿಗಳಾದ ಗೋಪಾಲರಾವ್ ಬಂಡಾರೆ ಅವರು ನೀಡಿದ ದೂರಿನ ಅನ್ವಯ ಆಕ್ಸಿಜನ್ ತಯಾರಿಕಾ ಘಟಕದ ಮಾಲೀಕ ವಿಜಯ ಮೆಹತಾ,ಹೈದರಾಬಾದ್ ಇಂಟೆಗ್ರೊ ಅಸ್ಪತ್ರೆಯ ಡಾ ಫೈಜುಲ್ಲಾ ಖಾನ್ ,ವಾಹನ ಚಾಲಕ ಮೊಹಮ್ಮದ್ ಇರ್ಫಾನ್, ಸಹಾಯಕ ಶೇಖ್ ಹಮೀದ್ ಎಂಬ ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.