ಅನಧಿಕೃತವಾಗಿ ಸಂಗ್ರಹಿಸಿ ಇಡಲಾಗಿದ್ದ 24 ಗ್ಯಾಸ್ ಸಿಲಿಂಡರ್ ಜಪ್ತಿ

ಕಲಬುರಗಿ,ಮೇ.30-ನರೋಣಾ ಪೊಲೀಸ್ ಠಾಣೆ ವ್ಯಾಪ್ತಿಯ ಮುನ್ನಹಳ್ಳಿ ಗ್ರಾಮದ ಪ್ರಭು ಶರಣಪ್ಪ ಜಾನೆ ಅವರ ಮನೆಯಲ್ಲಿ ಸಾರ್ವಜನಿಕ ವಿತರಣಾ ವ್ಯವಸ್ಥೆ ಸೇರಿದ ಅಡುಗೆ ಅನಿಲ ಸಿಲಿಂಡರ್‍ಗಳನ್ನು ಅನಧಿಕೃತವಾಗಿ ಸಂಗ್ರಹಿಸಿ ಇಡಲಾಗಿದೆ ಎಂಬ ಮಾಹಿತಿ ಮೇಲೆ ಪೊಲೀಸರು ಮತ್ತು ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ 26 ಸಾವಿರ ರೂ.ಮೌಲ್ಯದ 2 ತುಂಬಿದ ಮತ್ತು 22 ಖಾಲಿ ಇದ್ದ ಸಿಲಿಂಡರ್‍ಗಳನ್ನು ಜಪ್ತಿ ಮಾಡಿದ್ದಾರೆ.
ಎಸ್.ಪಿ.ಅಕ್ಷಯ್ ಹಾಕೆ, ಹೆಚ್ಚುವರಿ ಎಸ್‍ಪಿ ಶ್ರೀನಿಧಿ, ಆಳಂದ ಡಿಎಸ್‍ಪಿ ಮತ್ತು ಸಿಪಿಐ ಅವರ ಮಾರ್ಗದರ್ಶನದಲ್ಲಿ ಆಳಂದ ಆಹಾರ ಶಿರಸ್ತೆದಾರರಾದ ಅಮರೇಶ, ಸಿಂದಗಿ ಆಹಾರ ಶಿರಸ್ತೆದಾರರಾದ ಮುಜಾಹಿದ್, ನರೋಣಾ ಪಿಎಸ್‍ಐ ಭೀಮರಾಯ ಬಂಕ್ಲಿ ಅವರು ದಾಳಿ ನಡೆಸಿ 2 ತುಂಬಿದ ಮತ್ತು 22 ಖಾಲಿ ಇದ್ದ ಸಿಲಿಂಡರ್ ಸೇರಿ 26 ಸಾವಿರ ರೂ.ಮೌಲ್ಯದ 24 ಸಿಲಿಂಡರ್ ಜಪ್ತಿ ಮಾಡಿದ್ದಾರೆ.
ನರೋಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆದಿದೆ.