ಅನಧಿಕೃತವಾಗಿ ಸಂಗ್ರಹಿಸಿದ್ದ 10.75 ಮೆ.ಟ. ರಸಗೊಬ್ಬರ ವಶ

ಹನೂರು: ಜು.23:- ಜಮೀನಿನ ಗೋದಾಮಿನಲ್ಲಿ ಅನಧಿಕೃತವಾಗಿ ಸಂಗ್ರಹಣೆ ಮಾಡಲಾಗಿದ್ದ 10.75 ಮೆಟ್ರಿಕ್ ಟನ್ ಪ್ರಮಾಣದ ಯೂರಿಯ ಡಿ.ಎ.ಪಿ ರಸಗೊಬ್ಬರವನ್ನು ಕೃಷಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಘಟನೆ ಚಿಕ್ಕಮಾಲಪುರದಲ್ಲಿ ನಡೆದಿದೆ.
ತಾಲೂಕಿನ ಲೋಕ್ಕನಹಳ್ಳಿ ಹೋಬಳಿ ವ್ಯಾಪ್ತಿಯ ಚಿಕ್ಕ ಮಾಲಾಪುರ ಗ್ರಾಮದ ಜಮೀನಿನಲ್ಲಿರುವ ಗೋದಾಮಿನಲ್ಲಿ ಅಕ್ರಮವಾಗಿ ರಸಗೊಬ್ಬರ ಸಂಗ್ರಹಣೆ ಮಾಡಿರುವ ಬಗ್ಗೆ ಅನಾಮಧೇಯ ಮಾಹಿತಿ ಮೇರೆಗೆ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿಗಳು ಹಾಗೂ ಪೆÇಲೀಸ್ ಇಲಾಖೆಯ ಸಿಬ್ಬಂದಿಗಳು ವಶಕ್ಕೆ ಪಡೆದು ಗೋದಾಮಿಗೆ ಶೀಲ್ ಹಾಕಲಾಗಿದೆ.
ದಿನಾಂಕ 21.07.2022 ರಂದು ಆರಾಮದೆಯಾ ಮಾಹಿತಿಯ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ಜಮೀನಿನ ಮಾಲೀಕರಾದ ನಂಜುಂಡ ಬಿನ್ ಮುದ್ದೆಗೌಡ ಅವರನ್ನು ವಿಚಾರಿಸಿದಾಗ ಗೋಧಾಮನ್ನು ಲೋಕ್ಕನಹಳ್ಳಿ ಗ್ರಾಮದ ಶಕ್ತಿವೇಲ್ ಬಿನ್ ಮುರುಗೇಶ್ ಗೌಂಡರ್ ಅವರಿಗೆ ಉಸ್ತುವಾರಿಗೆ ಬಿಟ್ಟಿರುತ್ತೇವೆ ಎಂದು ತಿಳಿಸಿದ್ದಾರೆ.
ನಂತರ ಶಕ್ತಿವೇಲ್ ಅವರನ್ನು ವಿಚಾರಿಸಿದಾಗ ಸ್ಥಳಕ್ಕೆ ಬಾರದ ಕಾರಣ ಸ್ಥಳೀಯರಾದ ರಾಮ ಮತ್ತು ಕೆಂಪರಾಜು ರವರನ್ನು ಬರಮಾಡಿಕೊಂಡು ಇವರ ಸಮ್ಮುಖದಲ್ಲಿ ಪರಿಶೀಲನೆ ನಡೆಸಿ.
ಸದರಿ ಗೋದಾಮಿನಲ್ಲಿ ಸುಮಾರು ಐವತ್ತು ಕೆ.ಜಿ ಪ್ರಮಾಣದ 211 ಯೂರಿಯಾ ಮೂಟೆಗಳು ಮೇಲ್ಕಂಡ ಟೆಕ್ನಿಕಲ್ ಗ್ರೇಡ್ ಯೂರಿಯ ಎಂಬ ನಾಮಧಾರಿತ ಚೀಲಗಳಲ್ಲಿ ಹಾಗೂ ನಾಲ್ಕು ಡಿ.ಎ.ಪಿ ರಸಗೊಬ್ಬರದ ಮೂಟೆಗಳು ಒಟ್ಟು 10.75 ಮೆಟ್ರಿಕ್ ಟನ್ ಪ್ರಮಾಣ ಅಕ್ರಮ ದಾಸ್ತಾನು ಕಂಡು ಬಂದಿರುತ್ತದೆ.
ಗೋದಾಮಿನಲ್ಲಿ ಸ್ಟಾಕ್ ಮಾಡಲಾಗಿದ್ದ ಮದ್ರಾಸ್ ಪಾರ್ಟಿಲೈಸರ್ ಲಿ. ಕಂಪನಿಯಿಂದ ವಿತರಿಸುವ ಕೃಷಿ ಬಳಕೆಯ ಯೂರಿಯ ಗೊಬ್ಬರವನ್ನು ಚೀಲದಿಂದ ಬದಲಾಯಿಸಿ ಅನಧಿಕೃತವಾಗಿ ತಯಾರಿಸಿದ ಟೆಕ್ನಿಕಲ್ ಯೂರಿಯ ಎಂಬ ನಾಮಧಾರಿತ ಚೀಲಗಳಲ್ಲಿ ಸದರಿ ಯೂರಿಯಾ ರಸ ಗೊಬ್ಬರವನ್ನು ತುಂಬಿಸಿ ಯೂರಿಯಾವನ್ನು ಕೈಗಾರಿಕೆಗಳ ಬಳಕೆಗೆ ಸಾಗಿಸಲು ದಾಸ್ತಾನು ಮಾಡಿರುವುದು ಕಂಡುಬಂದಿರುತ್ತದೆ.
ದಾಸ್ತಾನು ಮೂಟೆಗಳನ್ನು ಗೋದಾಮಿನಲ್ಲಿ ಇರಿಸಿ ಸೀಲು ಮಾಡಲಾಗಿದ್ದು ಇದು ಸರ್ಕಾರಕ್ಕೆ ಮತ್ತು ರೈತರಿಗೆ ವಂಚನೆ ಮಾಡುವ ಕೃತ್ಯವಾಗಿದೆ.
ತಾಲೂಕು ಕೃಷಿ ಇಲಾಖೆ ಅಧಿಕಾರಿ ರಘುವೀರ್, ವೆಂಕಟನಾಯಕ್, ದೊರೈರಾಜು ಹಾಗೂ ಪೆÇಲೀಸ್ ಸಿಬ್ಬಂದಿಗಳಾದ ಸುರೇಶ್ ಸಿದ್ದರಾಮಯ್ಯ ದಾಳಿ ನಡೆಸಿದ್ದಾರೆ. ಈ ಸಂಬಂಧ ಹನೂರು ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು ಮುಂದಿನ ಕ್ರಮ ಕೈಗೊಳ್ಳಲಾಗಿದೆ.