ಅನಧಿಕೃತವಾಗಿ ಮರುಳು ಸಾಗಾಣಿಕೆಗೆ ಆಕ್ರೋಶ

ಶಹಾಪುರ :ಮಾ.17: ಕರ್ನಾಟಕ ಸೇನೆಯ ರಾಜ್ಯ ಪ್ರಧಾನ ಸಂಚಾಲಕರಾದ ಭೀಮಣ್ಣ ಶಖಾಪುರ ಅವರು ಆದೇಶದ ಮೇರೆಗೆ ಶಹಾಪುರ ತಾಲೂಕ ಘಟಕದ ವತಿಯಿಂದ ಶಹಾಪೂರ ನಗರದಿಂದ ಸುತ್ತ ಮುತ್ತಲಿನ ಹಳ್ಳಿಗಳಿಗೆ ಹಾಗೂ ನಗರದಲ್ಲಿ ಯಾವುದೇ ರಾಯಲ್ಟಿ (ರಾಜಸ್ವ) ಇಲ್ಲದೆ, ಒಂದು ಬ್ರಾಸಿನ ಚಿಕ್ಕ ಚಿಕ್ಕ ವಾಹನಗಳಲ್ಲಿ ಅನಧಿಕೃತವಾಗಿ ಮರಳನ್ನು ಹಗಲು ರಾತ್ರಿ ಯನ್ನದೆ ಸಾಗಾಣಿಕೆ ಮಾಡುತ್ತಿದ್ದು, ಇದರಿಂದ ಸರಕಾರದ ಬೊಕ್ಕಸಕ್ಕೆ ನಷ್ಟ ಉಂಟಾಗುತ್ತಿದೆ. ಸದರಿ ವಾಹನಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ತಾಲೂಕಿನ ದಂಡಾಧಿಕಾರಿಗಳಿಗೆ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಾಲೂಕ ಅಧ್ಯಕ್ಷರಾದ ಸಿದ್ದು ಪಟ್ಟೇದಾರ ಯುವ ಘಟಕದ ಅಧ್ಯಕ್ಷ ಸಂಜು ಪೂಜಾರಿ ನಗರ ಘಟಕದ ಅಧ್ಯಕ್ಷ ಶಿವಕುಮಾರ್ ಸಿಂಗ್ ವಿಜಯ್ ಸಿಂಗ್ ಬಾಲು ನಾಯಕ ಸಾಹೇಬ್ ಗೌಡ ರಾಜಾಪುರ್ ಸೇರಿದಂತೆ ಅನೇಕ ಕಾರ್ಯಕರ್ತರು ಇದ್ದರು