ಅನಧಿಕೃತವಾಗಿ ಮದ್ಯ ಮಾರಾಟ: ಇಬ್ಬರ ಬಂಧನ

ಕಲಬುರಗಿ,ಮಾ.2-ಸೈಯದ್ ಚಿಂಚೋಳಿ ಕ್ರಾಸ್ ಹತ್ತಿರ ಮತ್ತು ಸೈಯದ್ ಚಿಂಚೋಳಿ ಗ್ರಾಮದ ಮನೆಯೊಂದರ ಮುಂದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡಲಾಗುತ್ತಿದೆ ಎಂಬ ಮಾಹಿತಿ ಮೇಲೆ ಸಬ್ ಅರ್ಬನ್ ಪೊಲೀಸ್ ಠಾಣೆಯ ಪಿಎಸ್‍ಐ ಭಾಗಣ್ಣ ಹಾಗೂ ಸಿಬ್ಬಂದಿ ದಾಳಿ ನಡೆಸಿ ಇಬ್ಬರನ್ನು ಬಂಧಿಸಿದ್ದಾರೆ.
ಸೈಯದ್ ಚಿಂಚೋಳಿ ಕ್ರಾಸ್‍ನಲ್ಲಿ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಶಹಾಬಜಾರ ತಾಂಡಾದ ನಾಗರಾಜ ಜಾಧವ್ (38) ಎಂಬಾತನನ್ನು ಬಂಧಿಸಿ 2600 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದರೆ, ಸೈಯದ್ ಚಿಂಚೋಳಿ ಗ್ರಾಮದ ಮನೆ ಮುಂದೆ ಅನಧಿಕೃತವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಕ್ರಮ ಡಾಂಗೆ (20) ಎಂಬಾತನನ್ನು ಬಂಧಿಸಿ 2800 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.