ಅನಘಹರಿ ರಂಗಪ್ರವೇಶ

ಬೆಂಗಳೂರು, ಜೂ. ೪- ಭರತನಾಟ್ಯ ಗುರು ರೂಪಾಗಿರೀಶ್ ಅವರ ಶಿಷ್ಯ, ಕು. ಅನಘಹರಿ ಅವರ ಭರತನಾಟ್ಯ ರಂಗಪ್ರವೇಶವು ನಗರದ ಸೇವಾ ಸದನ ಸಭಾಂಗಣದಲ್ಲಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಎನ್‌ಬಿಇಟಿ ಸಂಸ್ಥೆಯ ಕಾರ್ಯದರ್ಶಿ ಡಾ. ಡಿ.ಎನ್. ಹರಿದಾಸ್ ಹಾಗೂ ಕರ್ನಾಟಕ ಕಲಾಶ್ರೀ ಗುರು ಕುಮಾರ್‌ರವರು ಮಾತನಾಡಿ ಭರತನಾಟ್ಯದ ಮಹತ್ವವನ್ನು ಎಲ್ಲರಿಗೂ ಬಹಳ ಮನದಟ್ಟಾಗುವಂತೆ ತಿಳಿಸಿದರು. ರೂಪಾಗಿರೀಶ್ ಅವರ ನೃತ್ಯ ನೈಪುಣ್ಯ, ಅವರ ಚುಟುಕಾದ ಅಚ್ಚುಕಟ್ಟಾದ ನಟುವಾಂಗದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿ, ಅನಘಳ ನೃತ್ಯವನ್ನು ಪ್ರೋತ್ಸಾಹಿಸಿ ಅವರ ನೃತ್ಯದ ಬೆಳವಣಿಗೆಗೆ ಕುಮಾರ್ ಶುಭಾಶಯ ಕೋರಿದರು.
ಮತ್ತೋರ್ವ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಗುರು ಪುಲಿಕೇಶಿ ಕಸ್ತೂರಿ ಮಾತನಾಡಿ ಕು. ಅನಘಳ ಅಭಿನಯ, ಗುರುಗಳ ನೃತ್ಯ ಕೌಶಲ್ಯದ ಬಗ್ಗೆ ಪ್ರಶಂಸಿ, ನೃತ್ಯದ ಹಿಮ್ಮೇಳ ವಾದ್ಯವೃಂದವರನ್ನು ಪ್ರಶಂಸಿದರು.
ಗಾಯನದಲ್ಲಿ ವಿದ್ವಾನ್ ರೋಹಿತ್ ಭಟ್ ಉಪ್ಪೂರು, ಮೃದಂಗ ವಾದನದಲ್ಲಿ ಹಿರಿಯ ವಿದ್ವಾಂಸ ನಾರಾಯಣಸ್ವಾಮಿ, ವೇಣುವಾದನದಲ್ಲಿ ವಿದ್ವಾನ್ ರಘುಸಿಂಹ ವಯೋಲಿನ್ ವಾದನದಲ್ಲಿ ವಿದ್ವಾನ್ ಪ್ರಾದೇಶ್ ಆಚಾರ್ಯ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಅರುಣ್ ಕುಮಾರ್ ಅವರು ಭರತನಾಟ್ಯ ನೃತ್ಯದ ಕಾರ್ಯಕ್ರಮಕ್ಕೆ ಕಳೆ ತಂದುಕೊಟ್ಟರು.