ಅನಗತ್ಯ ಸಂಚಾರ: ೨೮ ವಾಹನಗಳು ಪೊಲೀಸ್‌ ವಶ

ಉಡುಪಿ, ಮೇ ೩೦- ಜಿಲ್ಲೆಯಲ್ಲಿ ಕಳೆದ 24ಗಂಟೆಗಳ ಅವಧಿಯಲ್ಲಿ ಅನಗತ್ಯ ವಾಗಿ ಸಂಚರಿಸುತ್ತಿದ್ದ 27 ದ್ವಿಚಕ್ರ ವಾಹನ, ಒಂದು ರಿಕ್ಷಾ ಸೇರಿದಂತೆ ಒಟ್ಟು 28 ವಾಹನಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಉಡುಪಿ ಉಪವಿಭಾಗ ವ್ಯಾಪ್ತಿಯಲ್ಲಿ 1 ದ್ವಿಚಕ್ರ ವಾಹನ, ಕುಂದಾಪುರ ಉಪವಿಭಾಗದಲ್ಲಿ 20 ದ್ವಿಚಕ್ರವಾಹನ ಗಳು ಮತ್ತು ಒಂದು ರಿಕ್ಷಾ, ಕಾರ್ಕಳದಲ್ಲಿ ಆರು ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಅದೇ ರೀತಿ ಕೋವಿಡ್ ನಿಯಮ ಉಲ್ಲಂಘನೆಗೆ ಸಂಬಂಧಿಸಿ ಉಡುಪಿಯಲ್ಲಿ ಐದು, ಕಾರ್ಕಳದಲ್ಲಿ ಒಂದು ಸೇರಿದಂತೆ ಒಟ್ಟು ಆರು ಪ್ರಕರಣಗಳು ದಾಖಲಾಗಿವೆ. ಕುಂದಾಪುರ ನಗರದಲ್ಲಿ ಶನಿವಾರ ಬೆಳಗ್ಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಕೆ.ರಾಜು ಕಾರ್ಯಾಚರಣೆ ನಡೆಸಿ ಅನಗತ್ಯವಾಗಿ ಸಂಚರಿಸುತ್ತಿದ್ದ ವಾಹನಳ ವಿರುದ್ಧ ಕ್ರಮ ಜರಗಿಸಿದರು. ಕುಂದಾಪುರದ ಶಾಸತ್ರಿ ಸರ್ಕಲ್ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಸ್ವತಃ ಎಸಿಯವರೇ ವಾಹನಗಳನ್ನು ತಪಾಸಣೆ ನಡೆಸಿದರು. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ವಾಹನಗಳನ್ನು ತಪಾಸಣೆ ನಡೆಸಿದರು. ಇದೇ ವೇಳೆ ಅನಗತ್ಯವಾಗಿ ತಿರುಗಾಡುತ್ತಿದ್ದವರಿಗೆ ಎಚ್ಚರಿಕೆಯನ್ನು ನೀಡಿದರು.