ಅನಗತ್ಯ ಸಂಚಾರ: ಪೊಲೀಸರಿಗೆ ಜಿಲ್ಲಾಧಿಕಾರಿ ತರಾಟೆ

ಚಾಮರಾಜನಗರ, ಮೇ.01- ಕೊರೊನಾ ಕಫ್ರ್ಯೂ ಮೂರನೇ ದಿನಕ್ಕೆ ಕಾಲಿಟ್ಟಿದ್ದರೂ ಜನರು ಅನಗತ್ಯ ಸಂಚಾರ ಮಾಡುತ್ತಿರುವುದನ್ನು ಕಂಡ ಜಿಲ್ಲಾಧಿಕಾರಿ ಡಾ|| ಎಂ.ಆರ್. ರವಿ ಅವರು ಪೆÇಲೀಸರನ್ನು ತರಾಟೆಗೆ ತೆಗೆದುಕೊಂಡರು.
ಜನತಾ ಕಫ್ರ್ಯೂ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಖುದ್ದು ಸಂಚಾರಕ್ಕಿಳಿದರು. ಅವರು ಭುವನೇಶ್ವರಿ ವೃತ್ತದಲ್ಲಿ ವಾಹನ ಸವಾರಿ ಸಾಮಾನ್ಯವಾಗಿದ್ದನ್ನು ಕಂಡು ಕೆಂಡಾಮಂಡಲರಾದರು. ನಗರ ಠಾಣೆಯ ಪಿಎಸ್‍ಐ ಮಹೇಶ್ ಹಾಗೂ ಡಿವೈಎಸ್ಪಿ ಪ್ರಿಯದರ್ಶಿನಿ ಸಾಣಿಕೊಪ್ಪ ಅವರಿಗೆ ಡಿಸಿ ಡಾ. ಎಂ.ಆರ್.ರವಿ ಸಖತ್ ಕ್ಲಾಸ್ ತೆಗೆದುಕೊಂಡರು. ಇμÉ್ಟೂಂದು ಮಂದಿ ಓಡಾಡುತ್ತಿದ್ದರೂ ನೀವು ಏನು ಮಾಡುತ್ತಿದ್ದೀರಿ? ಪ್ರಮುಖ ಸ್ಥಳಗಳಲ್ಲಿ ಅಧಿಕಾರಿಗಳು ಇಲ್ಲದೆ ಕೇವಲ ಪಿ.ಸಿ.ಗಳನ್ನು ನೇಮಕ ಮಾಡಿರುತ್ತೀರಿ. ಬೇಜವಾಬ್ದಾರಿತನದಿಂದ ವರ್ತಿಸದೇ ಅನಗತ್ಯ ವಾಹನ ಸವಾರರನ್ನು ನಿಲ್ಲಿಸಿ, ವಾಹನ ಸೀಜ್ ಮಾಡಿ ಅವರ ವಿರುದ್ಧ ಕೇಸ್ ದಾಖಲಿಸಿ ಎಂದು ಸೂಚಿಸಿದರು. ಹೀಗೆ ಮುಂದುವರೆದರೆ ನಿಮ್ಮಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೋಲಿಸ್ ಅಧಿಕಾರಿಗಳಿಗೆ ಎಚ್ಚರಿಸಿದರು. ಬಳಿಕ ಎಸ್.ಪಿ. ದಿವ್ಯಸಾರಾ ಥಾಮಸ್ ರವರಿಗೆ ಮೊಬೈಲ್ ಮೂಲಕ ಕರೆ ಮಾಡಿ ತರಾಟೆಗೆ ತೆಗೆದುಕೊಂಡರು. ಕೂಡಲೇ ಎಸ್.ಪಿ. ಹಾಗೂ ಎಎಸ್ಪಿ ಅನಿತಾ ಹದ್ದಣ್ಣನವರ್ ಸ್ಥಳಕ್ಕಾಗಮಿಸಿ ಅನಗತ್ಯ ಸಂಚಾರ ಮಾಡುತ್ತಿದ್ದವರ ವಾಹನಗಳನ್ನು ಜಪ್ತಿ ಮಾಡಿ, ದಂಡ ವಿಧಿಸಿ ಬಿಸಿ ಮುಟ್ಟಿಸಿದರು. ಈ ವೇಳೆ ಬಿಟ್ಟುಬಿಡಿ ಎಂದು ತರಲೆ ಮಾಡಿದವನಿಗೆ ಲಾಠಿ ಏಟು ಕೊಟ್ಟು ದಂಡ ಕಟ್ಟಿಸಿದರು.