ಅನಗತ್ಯ ವಾಹನ ಸಂಚಾರಕ್ಕೆ ನಿರ್ಬಂಧ

ಹರಿಹರ.ಮೇ.3;  ಜನತಾ ಕರ್ಫ್ಯೂ ಇದ್ದರೂ ಅನಾವಶ್ಯಕವಾಗಿ ರಸ್ತೆಗಿಳಿಯುತ್ತಿದ್ದ ಬೈಕ್ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿ ದಂಡ ವಿಧಿಸಿ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗಿದೆ ಎಂದು ಗ್ರಾಮಾಂತರ ಠಾಣೆಯ ಪಿಎಸ್ ಐ ಡಿ ರವಿಕುಮಾರ್ ಹೇಳಿದರು ನಗರದ ಹೊರವಲಯದಲ್ಲಿರುವ ಗುತ್ತೂರು ಸಮೀಪದ ಗ್ರಾಮಾಂತರ ಠಾಣೆಯ ಮುಂಭಾಗದಲ್ಲಿ ಪಿಎಸೈ ಪೊಲೀಸರ ತಂಡ ಅನಾವಶ್ಯಕವಾಗಿ ರಸ್ತೆಗೆ ಇಳಿದಿದ್ದ ವಾಹನಗಳಿಗೆ ಬ್ರೇಕ್ ಹಾಕುವುದಕ್ಕೆ ಮುಂದಾದ ಸಂದರ್ಭದಲ್ಲಿ ಮಾತನಾಡಿದ ಅವರು ದಿನದಿನಕ್ಕೆ ಡೆಡ್ಲಿ ವೈರಸ್ ಸಾವಿರಾರು ಸಂಖ್ಯೆಯಲ್ಲಿ ಜೀವವನ್ನು ಬಲಿಪಡೆದುಕೊಳ್ಳುತ್ತಿದೆ ಆದರೂ ಸಾರ್ವಜನಿಕರು  ಕೆಲಸವಿಲ್ಲದಿದ್ದರೂ  ಗುಂಪು ಗುಂಪಾಗಿ ಜಮಾಯಿಸುವುದು ಬೈಕ್ ಇತರೆ ವಾಹನಗಳಲ್ಲಿ ಸುಖಾಸುಮ್ಮನೆ ಸಂಚರಿಸುವುದು ಇದರಿಂದ ವೈರಸ್ ನಿಯಂತ್ರಣಕ್ಕೆ ಹೇಗೆ ಬರುವುದಕ್ಕೆ ಸಾಧ್ಯವಾಗುತ್ತದೆ ಸರ್ಕಾರ ಕಟ್ಟುನಿಟ್ಟಾಗಿ ಆದೇಶವನ್ನು ಮಾಡಿದರೂ ಗಾಳಿಗೆ ತೂರಿ ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಸಾವಿರಾರು ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದರೂ ಸಾರ್ವಜನಿಕರು ಬುದ್ದಿ ಕಲಿಯುತ್ತಿಲ್ಲ ಪೊಲೀಸ್ ಕಂದಾಯ ನಗರಸಭೆ ಆರೋಗ್ಯ ವೈದ್ಯರುಗಳು ಸಿಬ್ಬಂದಿಗಳು ಸೇರಿದಂತೆ ತಮ್ಮ  ಪ್ರಾಣವನ್ನು ಲೆಕ್ಕಿಸದೆ ಸಾರ್ವಜನಿಕರ ಆರೋಗ್ಯ ಹಿತ ಕಾಪಾಡುವುದಕ್ಕೆ ಹಗಲಿರುಳು ಕರ್ತವ್ಯದಲ್ಲಿ ನಿರತರಾಗಿರುತ್ತಾರೆ ನಾಗರಿಕರಿಗೆ ಅರ್ಥವಾಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು ಗ್ರಾಮೀಣ ಪ್ರದೇಶದ ಸಾರ್ವಜನಿಕರು ಇನ್ನು ಮುಂದಾದರೂ ಎಚ್ಚೆತ್ತುಕೊಂಡು ಸುನಾಮಿಯಂತೆ ಹಬ್ಬುತ್ತಿರುವ ಮಹಾಮಾರಿ ವೈರಸ್ ಅನ್ನು ನಿಯಂತ್ರಣ ಮಾಡುವುದಕ್ಕೆ ಎಚ್ಚೆತ್ತುಕೊಳ್ಳಬೇಕು  ಕಾರಣವಿಲ್ಲದೆ ಬೈಕುಗಳಲ್ಲಿ ವಾಹನಗಳಲ್ಲಿ ಸುತ್ತಾಡುವುದನ್ನು ನಿಲ್ಲಿಸಬೇಕು ಗುಂಪು ಗುಂಪಾಗಿ ಸೇರಬೇಡಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ ಮಾಸ್ಕ್ ಧರಿಸಿ ನಿಮ್ಮ ಮನೆಯ ಆವರಣ ಸುತ್ತಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳಿ ಸರ್ಕಾರದ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಿ  ವೈರಸ್ ನಿಯಂತ್ರಣಕ್ಕೆ ಪ್ರತಿಯೊಬ್ಬರೂ ಇಲಾಖೆಗಳೊಂದಿಗೆ ಕೈಜೋಡಿಸಬೇಕೆಂದು ಮನವಿ ಮಾಡಿದರು ಪ್ರೊಬೆಷನರಿ ಪಿಎಸ್ಸೈ ಸಿದ್ದಣ್ಣ .ಎಸ್ಸೈ ಮಂಜುಳಮ್ಮ. ಪೊಲೀಸ್ ಪೇದೆಗಳಾದ ರಾಮಣ್ಣ .ಹನುಮಂತಪ್ಪ .ಅನಿಲ್ .ಕರಿಯಪ್ಪ .ಸಿದ್ದಪ್ಪ,ಪೊಲೀಸ್ ಅಧಿಕಾರಿಗಳು ಸಿಬ್ಬಂದಿ ವರ್ಗದವರು ಇದ್ದರು.