ಅನಗತ್ಯ ವಾಹನ ಓಡಾಟ : ರಸ್ತೆಗಿಳಿದ ಎಸ್ಪಿ,ಎ ಎಸ್ಪಿ -ದಂಡ ವಸೂಲಿ

ರಾಯಚೂರು.ಮೇ.೨೫- ಲಾಕ್ ಡೌನ ಮಧ್ಯೆ ವಾಹನ ಸಂಚಾರ ಎಗ್ಗಿಲ್ಲದೇ ನಡೆಯುತ್ತಿರುವದನ್ನು ತಡೆಯಲು ಜಿಲ್ಲಾ ಪೊಲೀಸ್ ಇಲಾಖೆ ರಸ್ತೆಗಿಳಿದಿದ್ದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಹೆಚ್ಚುವರಿ ಪೊಲೀಸ್ ಅಧಿಕಾರಿಗಳು ಸೇರಿ ಅನಗತ್ಯವಾಗಿ ಸಂಚರಿಸುತ್ತಿರುವರರ ವಾಹನಗಳನ್ನು ಹಿಡಿದು ಸಿಜ್ ಮಾಡಿರುವ ಘಟನೆ ನಗರದಲ್ಲಿ ನಡೆಯಿತು.
ನಗರದ ಡಾ.ಬಿ.ಆರ್.ಅಂಬೇಡ್ಕರ ವೃತ್ತದ ಬಳಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಾಶ ನಿಕ್ಕಾಂ ಅಮ್ರಿತ್ ಹಾಗೂ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬುಇಂದು ಬೆಳಿಗ್ಗೆಯಿಂದ ತಪಾಸಣೆ ನಡೆಸಿದಾಗ ನೂರಾರು ವಾಹನಗಳು ಸಾಲು ಗಟ್ಟಿ ನಿಂತಿದ್ದವು.
ಜಿಲ್ಲೆಯಲ್ಲಿ ಸಾವಿರ ಸಾವಿರ ಕೊರೊನ ಪ್ರಕರಣಗಳು ದಾಖಲಾಗುತ್ತದ್ದರು ಜನ ಎಚ್ಚೆತ್ತುಕೊಳ್ಳುತ್ತಿಲ್ಲ. ಜಿಲ್ಲಾಡಳಿತ ಜಿಲ್ಲೆಯನ್ನು ವಿಶೇಷ ಲಾಕ್ ಡೌನ್ ಮಾಡುವ ಮೂಲಕ ಮೂರು ದಿನಕ್ಕೊಮ್ಮೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ನೀಡಿದ್ದರು ನಿಷೇಧಿಸಿದ ದಿನಗಳಲ್ಲಿ ಅತಿಹೆಚ್ಚಿನ ಜನರು ಓಡಾಡ್ತಿದ್ದಾರೆ.
ಅದರಿಂದ ಇಂದು ಜಿಲ್ಲಾ ಪೊಲೀಸ್ ಬಟಾಲಿಯನ್ ಇಂದು ರಸ್ತೆಗಳಿದು ಅನಾವಶ್ಯಕ ಓಡಾಡುವವರ ಚಳಿ ಬಿಡಿಸಿ, ೧೦ಕ್ಕೂ ಅಧಿಕ ಕಾರಗಳನ್ನು,ಬೈಕ್ ಗಳನ್ನ ಖುದ್ದು
ಎಸ್ಪಿ,ಎಎಸ್ಪಿ ಅವರು ತಪಾಸಣೆ ನಡೆಸಿ ವಶಪಡಿಸಿಕೊಂಡು ದಂಡ ವಿದಿಸಿದರು.
ತಪಾಸಣೆ ವೇಳೆ ಸಾಕಷ್ಟು ಜನರು ಕೇವಲ ಅಸ್ಪತೆಯ ಕಾರಣ ಹೆಚ್ಚುತ್ತಿದ್ದು ಇದರಿಂದ ಪೊಲೀಸ್ ಇಲಾಖೆಗೆ ದೊಡ್ಡ ತಲೆನೋವು ಉಂಟಾಗಿದೆ.
ಜಿಲ್ಲೆಯಲ್ಲಿ ಕೊರೊನ ನಿಯಂತ್ರಣಕ್ಕೆ ಜಿಲ್ಲಾಡಳಿತ,ಜಿಲ್ಲಾ ಪೊಲೀಸ್ ಇಲಾಖೆ ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರು
ನಗರದಲ್ಲಿ ಅವಶಕವಾಗಿ ಸುಮಾರು ಜನರು ತಿರುಗಾಡುತಿದ್ದು ಇದರಲ್ಲಿ ಪಾಸ್ ಪಡೆದು ಸಂಚರಿಸುತ್ತಿರುವ ಸಂಖ್ಯೆಯೇ ಹೆಚ್ಚಳವಾಗಿರುವದು ಕಂಡುಬಂದಿದ್ದು ಇದರಿಂದ ಕೊರೊನ ಹೆಚ್ಚಾಗುವ ಸಾಧ್ಯತೆ ಕಂಡು ಬರುತ್ತಿದ್ದೆ.