ಅನಗತ್ಯ ತಿರುಗಾಟ: ವಾಹನಗಳ ಜಪ್ತಿ

ಉಡುಪಿ, ಮೇ ೨೦- ನಿನ್ನೆ ಬೆಳಗ್ಗಿನ ಲಾಕ್ ಡೌನ್ ಸಡಿಲಿಕೆ ಅವಧಿಯಲ್ಲಿ ಪರಿಶೀಲನೆಗಾಗಿ ಬೀದಿಗಿಳಿದ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಅನಗತ್ಯ ತಿರುಗಾಟದ ವಾಹನಗಳ ಜಪ್ತಿ ಮಾಡಿದರೆ, ಅಗತ್ಯ ವಸ್ತು ಹೊರತುಪಡಿಸಿ ಇತರ ಸಾಮಗ್ರಿಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನಿನ್ನೆ ಬೆಳಗ್ಗೆ ಉಡುಪಿ ಮತ್ತು ಮಲ್ಪೆಯಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾಧಿಕಾರಿ, ಅನಗತ್ಯವಾಗಿ ವಾಹನಗಳಲ್ಲಿ ತಿರುಗಾಡುತ್ತಿದ್ದ ವಾಹನಗಳನ್ನು ಸೀಜ್ ಮಾಡಿದರು. ಅಲ್ಲದೆ ಅಗತ್ಯ ವಸ್ತುಗಳ ಹೊರತುಪಡಿಸಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಅಂಗಡಿಗಳವರನ್ನು ತರಾಟೆಗೈದರು. ಅಲ್ಲದೆ ಅಂತಹ ಅಂಗಡಿಗಳ ಮಾಲಕರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಪ್ರದೀಪ್ ಕುರ್ಡೆಕರ್, ನಗರ ಠಾಣೆ ಎಸ್ಸೈ ಶಕ್ತಿವೇಲು ಜೊತೆಗಿದ್ದರು.